Advertisement

ಒಂದಿಂಚು ಭೂಮಿಯೂ ಮಹಾರಾಷ್ಟ್ರಕ್ಕೆ ಹೋಗದು: ಜೋಷಿ

11:46 PM Nov 28, 2022 | Team Udayavani |

ಧಾರವಾಡ: ಕರ್ನಾಟಕದ ಒಂದಿಂಚು ಭೂಮಿಯೂ ಮಹಾರಾಷ್ಟ್ರಕ್ಕೆ ಹೋಗದು. ಮಹಾರಾಷ್ಟ್ರದ ಒಂದಿಂಚು ಭೂಮಿಯೂ ಕರ್ನಾ ಟಕಕ್ಕೆ ಬರದು. ನಮ್ಮಲ್ಲಿ ನುರಿತ ಕಾನೂನು ತಜ್ಞರಿದ್ದಾರೆ.

Advertisement

ಹೀಗಾಗಿ ಸುಪ್ರೀಂ ಕೋರ್ಟ್‌ನಲ್ಲೂ ಎರಡೂ ರಾಜ್ಯಗಳಿಗೆ ಸಮ್ಮತವಾಗುವ ತೀರ್ಪು ಬರಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಜನ ಆಯೋಗದ ವರದಿ ಬಳಿಕ ಗಡಿ ವಿವಾದ ಎಲ್ಲವೂ ಅಂತ್ಯವಾಗಿದೆ. ಹೀಗಾಗಿ ಮಹಾರಾಷ್ಟ್ರದವರು ಕೋರ್ಟಿಗೆ ಹೋಗಬಾರದಿತ್ತು. ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳ ಗಡಿ ವಿಚಾರಕ್ಕೆ ಸಂಬಂಧಿಸಿ ಎರಡು ರಾಜ್ಯಗಳ ರಾಜಕಾರಣಿ ಗಳು ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿ ಗೊಂದಲ ಸೃಷ್ಟಿಸಬಾರದು. ವಿವಾದಾತ್ಮಕ ಹೇಳಿಕೆಗಳಿಂದ ಯಾರಿಗೂ ಲಾಭವಿಲ್ಲ ಎಂದರು.

ಗಡಿ ವಿಚಾರ ಮುಗಿದ ಅಧ್ಯಾಯ. ಮಹಾರಾಷ್ಟ್ರ ಬಿಜೆಪಿ ಶಾಸಕರಿಗೆ ವಿವಾದಾತ್ಮಕ ಹೇಳಿಕೆ ಕೊಡದಂತೆ ಹೇಳಿದ್ದೇನೆ. ಅದೇ ರೀತಿ ಕರ್ನಾಟಕದ ರಾಜಕಾರಣಿಗಳಿಗೂ ಹೇಳಲಾಗಿದೆ. ಬೆಳಗಾವಿ ಸಹಿತ ಇತರೆಡೆ ಮರಾಠಿಗರು ಕನ್ನಡಿಗರ ಜತೆ ಹೊಂದಾಣಿಕೆಯಿಂದ ಇದ್ದಾರೆ. ಯಾರಿಗೂ ತೊಂದರೆ ಇಲ್ಲ. ಅದೇ ರೀತಿ ಮಹಾರಾಷ್ಟ್ರದ ಸೊಲ್ಲಾಪುರ, ಸಾಂಗ್ಲಿ, ಕೊಲ್ಲಾಪುರದಲ್ಲಿ ಕನ್ನಡಿಗರು ಸಂತೋಷದಿಂದ ಇದ್ದಾರೆ. ಸಮಸ್ಯೆಗಳಿದ್ದರೆ ಆಯಾ ರಾಜ್ಯ ಸರಕಾರಗಳ ಜತೆ ಮಾತನಾಡಬೇಕು ಎಂದರು.

ಮಹಾಜನ್‌ ವರದಿಯೇ ಅಂತಿಮ: ಶೆಟ್ಟರ್‌
ಹುಬ್ಬಳ್ಳಿ: ರಾಜ್ಯದ ಗಡಿ ವಿಚಾರದಲ್ಲಿ ಮಹಾಜನ್‌ ವರದಿಯೇ ಅಂತಿಮ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ತಿಳಿಸಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ಮಹಾರಾಷ್ಟ್ರದ ಆಗ್ರಹದ ಮೇರೆಗೆ ಮಹಾಜನ ಆಯೋಗ ರಚನೆಯಾಗಿತ್ತು, ಮಹಾಜನ ವರದಿ ಬಂದು ಹಲವಾರು ದಶಕಗಳಾಗಿದೆ. ಆದರೂ ಮಹಾರಾಷ್ಟ್ರದವರಿಗೆ ಗಡಿ ವಿಚಾರ ಕೆದಕುವುದು ಚಟವಾಗಿ ಬಿಟ್ಟಿದೆ.

Advertisement

ಇಲ್ಲಿನ ಮರಾಠಿಗರು, ಕನ್ನಡಿಗರು ಸಹಬಾಳ್ವೆಯಿಂದ ಬಾಳುತ್ತಿದ್ದಾರೆ. ಅವರ ಮಧ್ಯ ವಿಷ ಬೀಜ ಬಿತ್ತುವುದಾಗಿದೆ. ಇದನ್ನು ಮೊದಲು ನಿಲ್ಲಿಸಬೇಕು ಎಂದು ಅವರು ಹೇಳಿದರು.

ನಾವೆಲ್ಲ ಭಾರತೀಯರು. ನಾವು ಚೀನ, ಪಾಕಿಸ್ಥಾನದ ವಿರುದ್ಧ ಹೋರಾಡಬೇಕು. ಅದರ ಬದಲಾಗಿ ಕರ್ನಾಟಕ, ಮಹಾರಾಷ್ಟ್ರ ಎಂಬುದಾಗಿ ಬಡಿದಾಡುತ್ತಿರುವುದು ದೌರ್ಭಾಗ್ಯದ ಸಂಗತಿ. ಗಡಿ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ಎರಡು ರಾಜ್ಯಗಳಿಗೆ ನ್ಯಾಯಯುತವಾಗಿ ಕೋರ್ಟ್‌ ತೀರ್ಪು ನೀಡುವ ವಿಶ್ವಾಸವಿದೆ.
– ಪ್ರಹ್ಲಾದ ಜೋಷಿ, ಕೇಂದ್ರ ಸಚಿವ

ಗಡಿ ಸಂಬಂಧಿಸಿ ಸಣ್ಣಪುಟ್ಟ ಭಿನ್ನಾಭಿ ಪ್ರಾಯಗಳಿವೆ. ಎರಡೂ ಕಡೆ ಎಡಿಜಿಪಿ ಮಟ್ಟದಲ್ಲಿ ಈಗಾಗಲೇ ಸಭೆ ನಡೆದಿದೆ. ಗಡಿ ಭಾಗದ ಅಧಿಕಾರಿ ಗಳು ಸಭೆ ನಡೆಸಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಕಠಿನ ಕ್ರಮ ಕೈಗೊಳ್ಳಲಾಗುವುದು. ಗಡಿ ವಿಚಾರಕ್ಕೆ ಸಂಬಂಧಿಸಿ ವಿಚ್ಛಿದ್ರ ಶಕ್ತಿಗಳಿಗೆ ಅವಕಾಶವಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಲಾಗುವುದು. ಗಡಿಭಾಗದ 42 ಗ್ರಾಮದವರು ಕರ್ನಾಟಕಕ್ಕೆ ಸೇರುವ ಆಸೆ ವ್ಯಕ್ತಪಡಿಸಿದ್ದಾರೆ.
-ಆರಗ ಜ್ಞಾನೇಂದ್ರ , ಗೃಹ ಸಚಿವ

 

Advertisement

Udayavani is now on Telegram. Click here to join our channel and stay updated with the latest news.

Next