ಗುವಾಹಟಿ : ಅಸ್ಸಾಂ ನ ವಿಧಾನಸಭೆ ಚುನಾವಣೆಗೆ ಇನ್ನೇನು ದಿನಗಣನೆ ಇರುವಾಗ, ಆಡಳಿತ ಪಕ್ಷ ಬಿಜೆಪಿ, ಬದ್ರುದ್ದೀನ್ ಅಜ್ಮಲ್ ನೇತೃತ್ವದ ಆಲ್ ಇಂಡಿಯಾ ಡೆಮಾಕ್ರಟಿಕ್ ಫ್ರಂಟ್(AIUDF) ನಮ್ಮ ಪ್ರತಿ ಸ್ಪರ್ಧಿಯಾಗಿರಲಿದೆ ಹೊರತು ಕಾಂಗ್ರೆಸ್ ಅಲ್ಲ ಎಂದು ಹೇಳಿದೆ.
ಅಸ್ಸಾಂ ನ ಸಂಪುಟ ಸಚಿವ, ಈಶಾನ್ಯ ರಾಜ್ಯದ ಪ್ರಮುಖ ಬಿಜೆಪಿ ನಾಯಕ ಹಿಮಂತ್ ಬಿಸ್ವಾ ಶರ್ಮಾ, ಲೋಕಸಭಾ ಸಂಸದ ಅಜ್ಮಲ್, ಅಸ್ಸಾಂ ನ ಮೂರು ಹಂತದ ಚುನಾವಣೆಯಲ್ಲಿ ನಿರ್ಣಾಯಕರಾಗಿ ಉಳಿಯುತ್ತಾರೆ ಎಂದು ಹೇಳಿದ್ದಾರೆ.
ಓದಿ : ಕಾರ್ಯತಂತ್ರದ ಸಹಯೋಗವನ್ನು 5 ವರ್ಷಗಳ ತನಕ ವಿಸ್ತರಿಸಿಕೊಂಡ ನ್ಯೂಮಾಂಟ್, ಇನ್ಫೋಸಿಸ್ ..!
ಮೂರು ಹಂತಗಳಲ್ಲಿ ನಡೆಯುವ ಅಸ್ಸಾಂ ನ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್–AIUDF ನಡುವೆ ಸ್ಪರ್ಧೆ ನಡೆಯಲಿದೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಬದ್ರುದ್ದೀನ್ ಅಜ್ಮಲ್ ಸಂಸ್ಕೃತಿ ಹಾಗೂ ನಾಗರೀಕತೆಗೆ ಅಪಾಯಕಾರಿ ಎಂದು ಬಿಸ್ವಾ ಹೇಳಿದ್ದಾರೆ.
ಏತನ್ಮಧ್ಯೆ, ಈಗ ಕಾಂಗ್ರೆಸ್ ಹಾಗೂ AIUDF ಜೊತೆಯಾಗಿವೆ. ಅದು ಈಗ ಗುರುತಿನ ರಾಜಕೀಯವನ್ನು ಮಾತನಾಡುತ್ತಿದೆ. ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಬಗ್ಗೆ ಮಾತಾಡುತ್ತಿದೆ ಎಂದು ನನಗನ್ನಿಸುತ್ತಿದೆ. ಅಸ್ಸಾಂ ನ್ನು ಉಳಿಸುವ ಯೋಚನೆ ಮಾಡುವುದಕ್ಕಿಂತ ಮೊದಲು ಕಾಂಗ್ರೆಸ್ ನನ್ನು ಉಳಿಸಿಕೊಳ್ಳಲು ಅವರು ಗಮನ ಹರಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಅಸ್ಸಾಂ ನ ರಾಜ್ಯ ಉಸ್ತುವಾರಿ ಬೈಜಯಂತ್ ಜಯ ಪಾಂಡಾ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಓದಿ : ವಿಡಿಯೋ ನೋಡಿ : ನಂಬಿಕೆಯಿಂದ ಏನನ್ನಾದರೂ ಸಾಧಿಸಬಹುದು ಎಂಬುದನ್ನ ತಿಳಿಸಿದ ಹಕ್ಕಿ