Advertisement

5 ವರ್ಷ ಕಳೆದೂ ಮುಗಿಯದ ಗ್ರಾಪಂ ಕಟ್ಟಡ ಕಾಮಗಾರಿ

11:21 AM May 31, 2019 | Team Udayavani |

ಬಾದಾಮಿ: ಐತಿಹಾಸಿಕ ತಾಣ ಪಟ್ಟದಕಲ್ಲ ಗ್ರಾಮ ಪಂಚಾಯತ ಕಟ್ಟಡ ಕಾಮಗಾರಿ ಆರಂಭಗೊಂಡು 5 ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.

Advertisement

2014 ಏಪ್ರಿಲ್ 10ರಂದು ಭಾರತ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರ ಅನುದಾನದಡಿಯಲ್ಲಿ ಪಟ್ಟದಕಲ್ಲ ಗ್ರಾಮ ಪಂಚಾಯತ್‌ ಕಟ್ಟಡ ನಿರ್ಮಿಸಲು ಗುತ್ತಿಗೆದಾರರಿಗೆ ಟೆಂಡರ್‌ ನೀಡಲಾಗಿತ್ತು. ಸುಮಾರು ರೂ.16 ಲಕ್ಷ 34 ಸಾವಿರ ಅನುದಾನದಲ್ಲಿ ಗ್ರಾಮ ಪಂಚಾಯತ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ ಎಂದು ಬಾಹ್ಯವಾಗಿ ತಿಳಿಸಿದರೂ ಕಟ್ಟಡದ ನೆಲಹಾಸಿಗೆ ಗ್ರಾನೈಟ್ ಜೋಡಿಸಬೇಕಾಗಿತ್ತು. ಇದರ ಬದಲಾಗಿ ಕಡಪಾ ಕಲ್ಲು ಜೋಡಿಸಿದ್ದಾರೆ. ಕಟ್ಟಡದ ನೀಲನಕ್ಷೆ ಪ್ರಕಾರ ಒಳಗಡೆ ಇನ್ನೂ ಒಂದು ಕೊಠಡಿ ನಿರ್ಮಿಸಬೇಕಾಗಿತ್ತು. ಆದರೆ ಕೊಠಡಿ ನಿರ್ಮಿಸಿಲ್ಲ. ಬಾಗಿಲು, ಕಿಟಕಿ, ಉತ್ತಮ ಗುಣಮಟ್ಟದ ವಸ್ತುಗಳನ್ನು ಜೋಡಿಸುವ ಬದಲಾಗಿ ಕಳಪೆ ಗುಣಮಟ್ಟದ ವಸ್ತು ಜೋಡಿಸಲಾಗಿದೆ. ಕಟ್ಟಡಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ. ವಾರದೊಳಗೆ ಕಾಮಗಾರಿ ಪೂರ್ಣಗೊಳಿಸಿ, ಉದ್ಘಾಟನೆ ವಿಳಂಬವಾದರೆ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯನವರ ಗಮನಕ್ಕೆ ತರಲಾಗುವುದು ಎಂದು ಪಟ್ಟದಕಲ್ಲ ಗ್ರಾಮದ ಹಿರಿಯರಾದ ಬಸವರಾಜ ಮೆಣಸಿನಕಾಯಿ, ಮಲ್ಲಯ್ಯ ಪೂಜಾರ, ಸುಭಾಸ ಸುಂಕದ, ಸಿದ್ದಪ್ಪ ತೋಟಗೇರ, ಸುರೇಶ ಸುಂಕದ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next