Advertisement

ಅರ್ಷದೀಪ್ ರನ್ನು ದೂಷಿಸುತ್ತಿಲ್ಲ, ಆದರೆ ನೋ ಬಾಲ್ ಹಾಕುವುದು ಅಪರಾಧ: ಹಾರ್ದಿಕ್

11:31 AM Jan 06, 2023 | Team Udayavani |

ಪುಣೆ: ಪ್ರವಾಸಿ ಶ್ರೀಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿದೆ. ಶಿಸ್ತಿಲ್ಲದ ಬೌಲಿಂಗ್ ಕಾರಣದಿಂದ ಹಾರ್ದಿಕ್ ಬಳಗವು ಪಂದ್ಯವನ್ನು ಕಳೆದುಕೊಳ್ಳಬೇಕಾಯಿತು. ಪಂದ್ಯಕ್ಕೆ ಸೋಲಿಗೆ ಪ್ರಮುಖ ಕಾರಣವಾದ ನೋ ಬಾಲ್ ಬಗ್ಗೆ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡಿದ್ದಾರೆ.

Advertisement

ಪುಣೆ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಿದ ವೇಗಿ ಅರ್ಶದೀಪ್ ಸಿಂಗ್ ದುಬಾರಿಯಾದರು. ಕುಸಾಲ್ ಮೆಂಡಿಸ್‌ಗೆ ನೋ ಬಾಲ್‌ ಗಳ ಹ್ಯಾಟ್ರಿಕ್ ಸೇರಿದಂತೆ ಪಂದ್ಯದಲ್ಲಿ ಐದು ನೋ ಬಾಲ್‌ಗಳನ್ನು ಬೌಲ್ ಮಾಡಿದರು. ಶಿವಂ ಮಾವಿ ಮತ್ತು ಉಮ್ರಾನ್ ಮಲಿಕ್ ತಲಾ ಒಂದು ನೋಬಾಲ್ ಬೌಲಿಂಗ್ ಮಾಡುವ ಮೂಲಕ ಭಾರತವು ಪಂದ್ಯದಲ್ಲಿ ಒಟ್ಟು 12 ಹೆಚ್ಚುವರಿ ರನ್‌ಗಳನ್ನು ಸೋರಿಕೆ ಮಾಡಿತು.

23ರ ಹರೆಯದ ಅರ್ಷದೀಪ್ ಈಗ ಟಿ20ಯಲ್ಲಿ ಭಾರತದ ಪರ ಅತಿ ಹೆಚ್ಚು ನೋ ಬಾಲ್‌ ಗಳನ್ನು ಎಸೆದ ಕೆಟ್ಟ ದಾಖಲೆ ಪುಸ್ತಕಕ್ಕೆ ಸೇರಿದ್ದಾರೆ.

ಇದನ್ನೂ ಓದಿ:ಕನ್ನಡ ಕುಲಕೋಟಿಗೆ ಕೈಮುಗಿದು ಹಣೆಮಣಿದ ಮೇರು ಸಾಹಿತಿ ಪ್ರೊ.ದೊಡ್ಡ ರಂಗೇಗೌಡ

ಪಂದ್ಯದ ಬಳಿಕ ಮಾತಾಡಿದ ನಾಯಕ ಹಾರ್ದಿಕ್ ಪಾಂಡ್ಯ, ‘ಈ ಹಿಂದೆಯೂ ಅವರು ನೋ ಬಾಲ್‌ ಗಳನ್ನು ಎಸೆದಿದ್ದರು. ಇದು ದೂಷಿಸುವುದರ ಬಗ್ಗೆ ಅಲ್ಲ, ಆದರೆ ನೋ ಬಾಲ್ ಎಸೆಯುವುದು ಅಪರಾಧ’ ಎಂದರು.

Advertisement

“ಬೌಲಿಂಗ್ ಮತ್ತು ಬ್ಯಾಟಿಂಗ್ – ಎರಡೂ ಪವರ್‌ ಪ್ಲೇಯಲ್ಲಿ ನಮಗೆ ಹಾನಿಯಾಯಿತು. ನಾವು ಈ ಮಟ್ಟದಲ್ಲಿ ಮಾಡಬಾರದಂತಹ ಮೂಲಭೂತ ತಪ್ಪುಗಳನ್ನು ಮಾಡಿದ್ದೇವೆ. ನೀವು ಕೆಟ್ಟ ದಿನವನ್ನು ಹೊಂದಬಹುದು ಆದರೆ ಬೇಸಿಕ್ ವಿಚಾರಗಳಿಂದ ದೂರ ಹೋಗಬಾರದು” ಎಂದು ಪಾಂಡ್ಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next