Advertisement

ಹಲವಾರು ನಾಯಕರು ಸಂಪರ್ಕದಲ್ಲಿದ್ದಾರೆ : ಮಹಾರಾಷ್ಟ್ರ ಸಿಎಂ ಶಿಂಧೆ

06:00 PM Sep 26, 2022 | Team Udayavani |

ಥಾಣೆ : ಯಾವುದೇ ಶಾಸಕರು ಅಥವಾ ಸಂಸದರು ತಮ್ಮ ಬಣಕ್ಕೆ ಸೇರುವ ಬಗ್ಗೆ ನನಗೆ ತಿಳಿದಿಲ್ಲ, ಆದರೆ ಹಲವಾರು ನಾಯಕರು ಸಂಪರ್ಕದಲ್ಲಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೋಮವಾರ ಹೇಳಿದ್ದಾರೆ.

Advertisement

ಶಿಂಧೆ ಅವರು ಥಾಣೆಯ ಟೆಂಬಿ ನಾಕಾದಲ್ಲಿ ನವರಾತ್ರಿ ಮೆರವಣಿಗೆಯಲ್ಲಿ ದುರ್ಗಾ ಮಾತೆಯ ವಿಗ್ರಹವನ್ನು ಸ್ವಾಗತಿಸಲು ಆಗಮಿಸಿದ್ದರು.ಐವರು ಶಾಸಕರು ಮತ್ತು ಸಂಸದರು ತಮ್ಮ ಗುಂಪಿಗೆ ಸೇರಲು ಸಿದ್ಧರಾಗಿದ್ದಾರೆ ಎಂಬ ಊಹಾಪೋಹದ ಕುರಿತು ಪ್ರಶ್ನೆಯನ್ನು ಕೇಳಿದಾಗ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ : ವಕ್ಫ್ ಬೋರ್ಡ್ ಅಕ್ರಮ: ಎಎಪಿ ಶಾಸಕ ಅಮಾನತುಲ್ಲಾ ಗೆ 14 ದಿನಗಳ ನ್ಯಾಯಾಂಗ ಬಂಧನ

ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಶಿಂಧೆ ಬಣದ ಶಿವಸೇನೆ ಕಾರ್ಯಕರತರು ಭಾಗಿಯಾಗಿದ್ದರು. ಶಿಂಧೆ ಅವರ ರಾಜಕೀಯ ಗುರು ಆನಂದ್ ದಿಘೆ ಅವರು ಟೆಂಬಿ ನಾಕಾದಲ್ಲಿ ನವರಾತ್ರಿ ಉತ್ಸವವನ್ನು ಆರಂಭಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next