Advertisement

ಪಟಾಕಿ ನಿಷೇಧ ಯಾರ ವಿರುದ್ಧವಲ್ಲ: ಸುಪ್ರೀಂ

12:00 AM Oct 29, 2021 | Team Udayavani |

ಹೊಸದಿಲ್ಲಿ: ಪಟಾಕಿ ನಿಷೇಧ ಎಂಬ ನಿರ್ಣಯ ಯಾವುದೇ ಸಮುದಾಯದ ವಿರುದ್ಧ ಅಲ್ಲ. ಸಂತೋಷಪಡಬೇಕು ಎಂಬ ನೆಪದಲ್ಲಿ ಜನರ ಹಕ್ಕುಗಳ ಉಲ್ಲಂಘನೆಯಾಗುವುದರ ಬಗ್ಗೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ.

Advertisement

ನ್ಯಾ| ಎಂ. ಆರ್‌. ಶಾ ಮತ್ತು ನ್ಯಾ| ಎ. ಎಸ್‌. ಬೋಪಣ್ಣ ಅವರ ನ್ನೊಳ­ಗೊಂಡ ನ್ಯಾಯಪೀಠ ಪೂರ್ಣ ಪ್ರಮಾಣ­ದಲ್ಲಿ ನ್ಯಾಯಾಲಯ ನೀಡಿದ ಆದೇಶ ಪಾಲನೆಯಾಗಲೇಬೇಕು ಎಂದಿದೆ.

“ಪಟಾಕಿ ನಿಷೇಧದಿಂದ ಜನರ ಸಂತೋಷಕ್ಕೆ ಧಕ್ಕೆಯಾಗುತ್ತದೆ ಎಂದು ಉತ್ಪಾದಕರು ಜನರ ಜೀವನದ ಜತೆ ಆಟವಾಡುವಂತೆಯೇ ಇಲ್ಲ. ಯಾವುದೇ ಸಮುದಾಯನ್ನು ಗುರಿಯಾಗಿರಿಸಿ­ಕೊಂಡು ಇಂಥ ನಿರ್ಧಾರ ಕೈಗೊಂಡದ್ದು ಅಲ್ಲ.  ಜನರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಕಠಿನ ಸಂದೇಶ ರವಾನಿಸಲು ಇಂಥ ಕ್ರಮ ಕೈಗೊಂಡಿದ್ದೇವೆ’ ಎಂದು ನ್ಯಾಯ­ಪೀಠ  ಅಭಿಪ್ರಾಯಪಟ್ಟಿದೆ.ಹಲವು ರಾಜ್ಯಗಳಲ್ಲಿ ನಿಷೇಧ ಜಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next