Advertisement
ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲೆಯ ಸುಮಾರು 200 ಮಂದಿ ನೌಕರರು ಪಾಲ್ಗೊಂಡಿ ದ್ದರು. ಬಳಿಕ ಜಿಲ್ಲಾ ಕೇಂದ್ರದಲ್ಲಿ ಮುಷ್ಕರ ಹಮ್ಮಿಕೊಂಡಿದ್ದು, ಜಿ.ಪಂ. ಆವರಣದಲ್ಲಿ 350ಕ್ಕೂ ಹೆಚ್ಚು ಅಕ್ಷರದಾಸೋಹ ಸಿಬಂದಿ ಮುಷ್ಕರ ನಿರತರಾಗಿದ್ದಾರೆ. “ಬಿಸಿಯೂಟ ನೌಕರರಿಗೆ 5000 ರೂ. ವೇತನ ನೀಡಬೇಕು. 45ನೇ ಭಾರ ತೀಯ ಕಾರ್ಮಿಕರ ಸಮ್ಮೇಳನದ ಶಿಫಾರಸಿನಂತೆ ಈ ನೌಕರರಿಗೆ ಕನಿಷ್ಠ ಕೂಲಿ ಮತ್ತು ಸಾಮಾಜಿಕ ಭದ್ರತೆ ಒದಗಿಸ ಬೇಕು ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಮುಷ್ಕರ ನಡೆಸು ತ್ತಿದ್ದೇವೆ. ಈವರೆಗೆ ನಮ್ಮ ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸಲು ಸಂಬಂಧಪಟ್ಟ ಯಾವುದೇ ಅಧಿಕಾರಿಗಳು ಬಂದಿಲ್ಲ’ ಎಂದು ಸಂಘದ ಕಾರ್ಯದರ್ಶಿ ಗಿರಿಜಾ ತಿಳಿಸಿದ್ದಾರೆ.