Advertisement
ಭಾನುವಾರ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮೋತಿ ಗೌರಮ್ಮ ಚಾರಿಟಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಲಿಂಗ ರಂಗ ಮತ್ತು ಗ್ರಾಮೀಣ ಸಿರಿ… ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಂದು ವಿವಿಧ ಕ್ಷೇತ್ರದಲ್ಲಿ ಅಹರ್ನಿಶಿ ಸಾಧನೆ ಮಾಡಿದ ನೈಜ ಸಾಧಕರಿಗೆ ಪ್ರಶಸ್ತಿ, ಸನ್ಮಾನ ದೊರೆಯದೇ ಇರುವುದು ಕಳವಳಕಾರಿ ವಿಚಾರ ಎಂದರು.
ಬರಬೇಕೇ ಹೊರತು ಪ್ರಶಸ್ತಿಯ ಹಿಂದೆ ಬೆನ್ನತ್ತಿ ಹೋಗುವಂತಾಗಬಾರದು ಎಂದು ತಿಳಿಸಿದರು. ಸಮಾಜ ಮತ್ತು ಸೂಕ್ತ ಸ್ಥಾನಮಾನದಲ್ಲಿ ಇದ್ದವರು ವಿವಿಧ ಕ್ಷೇತ್ರದಲ್ಲಿನ ಕಲಾವಿದರು, ಸಾಧಕರನ್ನ ಗುರುತಿಸಿ ಸನ್ಮಾನ, ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹಿಸಬೇಕು. ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಲವಾರು ವರ್ಷದಿಂದ ತೆರೆಯ ಮರೆಯಲ್ಲಿನ ಸಾಧಕರನ್ನ ಗುರುತಿಸಿ ಮಹಲಿಂಗ ರಂಗ, ಗ್ರಾಮೀಣ ಸಿರಿ ಪ್ರಶಸ್ತಿ ಪ್ರದಾನ ಮಾಡುವ ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಸಂತಸ ವ್ಯಕ್ತಪಡಿಸಿದರು.
Related Articles
Advertisement
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ| ಎಚ್.ಎಸ್. ಮಂಜುನಾಥ್ ಕುರ್ಕಿ ಮಾತನಾಡಿ, ಸಂಸ್ಕೃತ ಭಾಷೆಯ ದಟ್ಟ ಪ್ರಭಾವದ ನಡುವೆಯೂ ನಮ್ಮ ಜಿಲ್ಲೆಯವರೇ ಆದ ಮಹಲಿಂಗ ರಂಗರು ಅನುಭಾವಮೃತ.. ಕೃತಿಯ ಮೂಲಕ ಕನ್ನಡದ ಹಿರಿಮೆ-ಗರಿಮೆ ಎತ್ತಿ ಹಿಡಿದವರಾಗಿದ್ದಾರೆ. ಕನ್ನಡ ನಾಡು, ನುಡಿ, ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಹೆಸರಲ್ಲಿ 17 ವರ್ಷದಿಂದ ಮಹಲಿಂಗ ರಂಗ ಪ್ರಶಸ್ತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಗಳೂರಿನ ನಿವೃತ್ತ ಉಪನ್ಯಾಸಕ ಜಿ.ಎಸ್. ಸುಭಾಶ್ಚಂದ್ರ ಬೋಸ್ ಅಭಿನಂದನಾ ನುಡಿಗಳಾಡಿದರು. ಮೋತಿ ಆರ್. ಪರಮೇಶ್ವರರಾವ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಬಿ.ಎಂ. ಸದಾಶಿವಪ್ಪ ಶ್ಯಾಗಲೆ. ಎ.ಆರ್. ಉಜ್ಜನಪ್ಪ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಿ. ವಾಮದೇವಪ್ಪ ಇತರರು ಇದ್ದರು. ವಿನೂತನ ಮಹಿಳಾ ಸಮಾಜದ ಪದಾಧಿಕಾರಿಗಳು ನಾಡಗೀತೆ ಹಾಡಿದರು. ಬಿ. ದಿಳೆಪ್ಪ ಸ್ವಾಗತಿಸಿದರು.
ಲೀಡ್‌ಬ್ಯಾಂಕ್ ವಿಭಾಗೀಯ ಪ್ರಬಂಧಕ ಎನ್.ಟಿ. ಎರ್ರಿಸ್ವಾಮಿ ಅವರಿಗೆ ಮಹಲಿಂಗ ರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ 10ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿದೆ. ಸಿದ್ದಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೋಜಾ, ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜ್ ಅವರಿಗೆ ಮಹಾನಗರ ಸಿರಿ… ಪ್ರಶಸ್ತಿಯನ್ನ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕಿ ಬಿ.ಕೆ. ಲೀಲಾಜೀ ಪ್ರದಾನ ಮಾಡಿದರು. ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರಕಾಶ್ ಕುಗ್ವೆ… ಅವರನ್ನು ಗೌರವಿಸಲಾಯಿತು.