Advertisement

ಸೇಡಿನ ಸರಣಿಯಲ್ಲ: ಕೊಹ್ಲಿ

10:00 AM Jan 24, 2020 | Sriram |

ಆಕ್ಲೆಂಡ್‌: “ಇದನ್ನು ನಾವು ಸೇಡಿನ ಸರಣಿಯಾಗಿ ಪರಿಗಣಿಸುವುದಿಲ್ಲ’ ಎಂದು ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ. ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ ಎದುರಿನ ಸೋಲಿಗೆ ಸಂಬಂಧಿಸಿದಂತೆ ಎದುರಾದ ಪ್ರಶ್ನೆಗೆ ಕೊಹ್ಲಿ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದರು.

Advertisement

“ಯಾವುದೇ ಆಟವಿರಲಿ, ಅಲ್ಲಿ ಎಲ್ಲರೂ ಗೆಲ್ಲುವುದಕ್ಕಾಗಿಯೇ ಆಡುತ್ತಾರೆ. ಆದರೆ ಎಲ್ಲರಿಗೂ ಎಲ್ಲ ಸಲ ಗೆಲ್ಲಲು ಸಾಧ್ಯವಿಲ್ಲ. ಸೋಲು ಕೂಡ ಅನಿವಾರ್ಯ. ಹಾಗಂತ ಸೋಲಿಸಿದವರನ್ನು ನಾವು ಶತ್ರುಗಳಂತೆ ಕಾಣಬಾರದು. ಅದು ಉತ್ತಮ ಕ್ರೀಡಾಪಟುವಿನ ಲಕ್ಷಣವಲ್ಲ’ ಎಂದು ಕೊಹ್ಲಿ ಹೇಳಿದರು.

“ತಂಡದ ನಾಯಕರಾಗಿ ಫ‌ಲಿತಾಂಶಗಳ ಬಗ್ಗೆ ಚಿಂತೆ ಮಾಡದೆ ತಂಡವನ್ನು ಮುಂದಕ್ಕೆ ಕೊಂಡೊಯುುÂವತ್ತ ಗಮನಹರಿಸಬೇಕು. ನಾಯಕತ್ವವನ್ನು ಯಾವತ್ತೂ ಫ‌ಲಿತಾಂಶಗಳಿಂದ ನಿರ್ಧರಿಸಬಾರದು’ ಎಂದರು.

“ಕೇನ್‌ ವಿಲಿಯಮ್ಸನ್‌ ಒತ್ತಡದಲ್ಲಿಯೂ ತಂಡವನ್ನು ಕೂಲ್‌ ಆಗಿ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ಅವರಿಂದ ಕೆಲವು ಗುಣಗಳನ್ನು ನಾನು ಕೂಡ ಅಳವಡಿಸಿಕೊಂಡಿದ್ದೇನೆ’ ಎಂದು ಕಿವೀಸ್‌ ನಾಯಕನ ಗುಣಗಾನವನ್ನೂ ಮಾಡಿದರು.

ರಾಹುಲ್‌ ಮೇಲೆ ಹೆಚ್ಚಿನ ನಿರೀಕ್ಷೆ
ಆಸ್ಟ್ರೇಲಿಯ ಸರಣಿಯಲ್ಲಿ ಬ್ಯಾಟಿಂಗ್‌ ಮತ್ತು ಕೀಪಿಂಗ್‌ ಜವಾಬ್ದಾರಿಯನ್ನು ನಿಭಾಯಿಸಿ ಯಶಸ್ಸು ಗಳಿಸಿದ ಕೆ.ಎಲ್‌. ರಾಹುಲ್‌ ಈ ಸರಣಿಯಲ್ಲಿ ಕೂಡ ಎರಡೂ ವಿಭಾಗಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಷ್ಟೋ ಸಮಯದ ಬಳಿಕ ತಂಡವೊಂದು ಹೆಚ್ಚು ಸಂತುಲಿತವಾದಂತೆ ಗೋಚರಿಸುತ್ತಿದೆ. ಇಲ್ಲಿ ರಾಹುಲ್‌ ಮಿಂಚಿದರೆ ಅವರನ್ನು ಬ್ಯಾಟ್ಸ್‌ಮನ್‌ ಕಮ್‌ ಕೀಪರ್‌ ಆಗಿ ಮುಂದುವರಿಸುವ ಯೋಚನೆ ಇದೆ’ ಎಂದು ಕೊಹ್ಲಿ ತಂಡದ ಯೋಜನೆ ಬಗ್ಗೆ ಮಾಹಿತಿಯಿತ್ತರು.

Advertisement
Advertisement

Udayavani is now on Telegram. Click here to join our channel and stay updated with the latest news.

Next