ಪಾವಗಡ: ಸಮಾಜ ನಮಗೇನು ಮಾಡಿದೆ ಎಂದು ಯೋಚನೆ ಮಾಡುವುದಕ್ಕಿಂತ ನಾವು ಸಮಾಜಕ್ಕೆ ಏನು ಮಾಡಿದ್ದೇವೆ ಎಂದು ಚಿಂತಿಸಬೇಕು. ನಾನು ಸಮಾಜ ಸೇವಕನಾಗಿ ಕೆಲಸ ಮಾಡಲು ಪಾವಗಡ ತಾಲೂಕಿಗೆ ಬಂದಿದ್ದೇನೆ ಎಂದು ಸಮಾಜ ಸೇವಕ ಎನ್.ರಾಮಾಂಜಿನಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಮೂಲತಃ ಮಧುಗಿರಿ ಪಟ್ಟಣವಾದರೂ, ನನ್ನ ಸ್ನೇಹಿತರು ಸಲಹೆ ಮೇರೆಗೆ ನಾನು ಪಾವಗಡ ತಾಲೂಕಿನಲ್ಲಿ ಜನರ ಸೇವೆ ಮಾಡಲು ಬಂದಿದ್ದು, ಈಗಾಗಲೇ ಬೆಂಗಳೂರಿನಲ್ಲಿ ಸರ್ವೋಜನ ಸೇವಾಟ್ರಸ್ಟ್ ಸ್ಥಾಪಸಿ, ಸರ್ವೋಜನ ಎಂದರೆ ಎಲ್ಲಾ ಜಾತಿ ಜನಾಂಗಕ್ಕೆ ಸೇರಿದ ಬಡವರು, ನಿರ್ಗತಿಕರು, ದಿವ್ಯಾಂಗರ ಸೇವೆ ಮಾಡುವುದು ಟ್ರಸ್ಟ್ ಉದ್ದೇಶವಾಗಿದೆ.
ರೈತ, ಕಾರ್ಮಿಕ ಭೂಸ್ವಾಧೀನ ವಿರೋಧಿ ವಿಮೋಚನ ಸಮಿತಿ ರಚಿಸಿ, ರೈತರಿಗೆ ಭೂ ಸ್ವಾಧೀನದಿಂದ ಆಗುವ ಅನ್ಯಾಯ, ಅಕ್ರಮಗಳ ವಿರುದ್ಧ ಹೋರಾಟ ಮಾಡಿ, ನ್ಯಾಯ ಕಲ್ಪಿಸಿದ್ದೇನೆ. ಕಾನೂನು ರಕ್ಷಣಾ ವೇದಿಕೆ ಸ್ಥಾಪಿಸಿ. ಸಾಮಾನ್ಯರಿಗೆ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡು, ಮೂಲಭೂತವಾಗಿ ಕಾನೂನು ಬದ್ಧವಾಗಿ ಸಿಗಬೇಕಾದ ಹಕ್ಕುಗಳಿಗೆ ಹೋರಾಟ ಮಾಡಿದ್ದೇನೆ ಎಂದರು.
ಇದನ್ನೂ ಓದಿ:–
ಏರಿಳಿತದ ವಹಿವಾಟಿನ ನಡುವೆ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ 148 ಅಂಕ ಏರಿಕೆ, ನಿಫ್ಟಿ ಜಿಗಿತ
ಸೇವೆ ಮಾಡಲು ಸಂಕಲ್ಪ: ಬರಗಾಲಕ್ಕೆ ತುತ್ತಾಗಿ ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿರುವ ಪಾವಗಡ ತಾಲೂಕನ್ನು ಸರ್ಕಾರಗಳು ನಿರ್ಲಕ್ಷಿéಸಿದೆ ಎಂದು ಸೇ°ಹಿತರು ತಿಳಿಸಿದಾಗ, ತಾಲೂಕಿನ ಜನತೆಗೆ ಅಳಿಲು ಸೇವೆ ಮಾಡಲು ಸಂಕಲ್ಪ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಸ್ವಯಂ ಉದ್ಯೋಗ ತರಬೇತಿ ಶಿಬಿರ ನಡೆಸಿ, ನಮ್ಮ ಸಂಸ್ಥೆಯಿಂದ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡಲಾಗುವುದು. ತಾಲೂಕಿನಲ್ಲಿ ವೃದ್ಧಾಶ್ರಮ ಸ್ಥಾಪನೆ ಮಾಡಲಾಗುವುದು. ಅದ್ದರಿಂದ ನಾನು ಯಾವುದೇ ರಾಜಕೀಯ, ಚುನಾವಣೆ ಆಕಾಂಕ್ಷಿ ಅಲ್ಲ ಎಂದು ಹೇಳಿದರು.
ಸಿದ್ದಾಪುರ ಸ್ವಾಮಿ ರಾಮಮೂರ್ತಿ ಮಾತನಾಡಿದರು. ಯುವ ಮುಖಂಡ ತಿರುಮಣಿ ಸುರೇಂದ್ರ, ಅಮಿಲಿನೇನಿ ನರೇಶ್, ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಗೋವರ್ಧನ್, ಮುಖಂಡರಾದ ಕರಿಯಣ್ಣ, ಅನ್ನದಾನಪುರ ಮುರಳಿ, ಅದಿ, ಗಂಗಾಧರ್‌ನಾಯ್ಡು, ಪಳವಳ್ಳಿ ಸುಮನ್, ಶ್ರೀನಿವಾಸ್, ಬೀಮ್ ಅರ್ಮಿ ಅಧ್ಯಕ್ಷ ಮಂಜುನಾಥ್, ಬಾಲು, ಸಂಜೀವ, ಸುಧಾಕರ್, ತೇಜ, ಕುಮಾರ್‌ಸ್ವಾಮಿ, ಗೋಪಾಲ್ ಹರೀಶ್, ನಾಗರಾಜು, ಈರಣ್ಣ, ನರಸಿಂಹಮೂರ್ತಿ (ದುಬ್ಬು), ಮಿರ್ಚಿ, ಈರಣ್ಣ, ರಮೇಶ್, ನವೀನ್ ಮೂರ್ತಿ, ವೆಂಕಟೇಶ್ ನಾಯಕ, ನಾಗರಾಜಪ್ಪ, ಆಟೋ ನಾಗರಾಜ್, ಸುಧಾಕರ್, ಹನುಮಂತಬಾಬು ಇದ್ದರು.