Advertisement
ಪ್ರದರ್ಶನ –ನೋಟನ್ನು ಉದ್ದವಾಗಿ ಮೂರು ಮಡಿಕೆ ಮಡಚಿ, ಅದರ ಒಂದು ತುದಿಯನ್ನು ನಿಮ್ಮ ತೋರು ಬೆರಳ ಮೇಲೆ ಇಟ್ಟು ನಿಲ್ಲಿಸಲು ಅಸಾಧ್ಯ. ಆದರೆ ಏನಾಶ್ಚರ್ಯ! ನೋಡು ನೋಡುತಿದ್ದಂತೆಯೇ ನೋಟು ಬೆರಳ ಮೇಲೆ ಸಲೀಸಾಗಿ ತನ್ನ ಸಮತೋಲನವನ್ನು ಕಾಯ್ದು ಕೊಂಡಿದೆ!!
1. ಒಂದು ನೋಟು
2. ಒಂದು ನಾಣ್ಯ ಮಾಡುವ ವಿಧಾನ –
ನೋಟೊಂದನ್ನು ಉದ್ದದ್ದವಾಗಿ ಚಿತ್ರದಲ್ಲಿ ತೋರಿಸಿರುವಂತೆ ಮಡಚಿ. ನೀವು ಯಾವ ತುದಿಯನ್ನು ನಿಮ್ಮ ತೋರು ಬೆರಳ ಮೇಲೆ ನಿಲ್ಲಿಸಲಿದ್ದೀರೋ ಆ ತುದಿಯಲ್ಲಿ ಯಾರಿಗೂ ಗೊತ್ತಾಗದಂತೆ ಒಂದು ನಾಣ್ಯವನ್ನು ಸೇರಿಸಿ. ಈಗ ಸಲೀಸಾಗಿ ನಿಮ್ಮ ನೋಟು ಅÇÉಾಡದೆ ಬೆರಳ ಮೇಲೆ ನಿಲ್ಲುತ್ತದೆ. ಒಳಗಡೆ ಇರುವ ನಾಣ್ಯ ಮಾತ್ರ ಇರೋದು ಯಾರಿಗೂ ಗೊತ್ತಾಗಬಾರದು. ಎಷ್ಟು ಸುಲಭ ಅಲ್ಲವೇ? ಎಲ್ರೂ ಮಾಡಿ ನೋಡ್ತೀರಾ!
Related Articles
Advertisement
( ನಿರೂಪಣೆ: ಗಾಯತ್ರಿ ಯತಿರಾಜ್ )