Advertisement

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

03:15 PM Jun 25, 2022 | Team Udayavani |

ಕಳೆದ 2 ವರ್ಷಗಳಿಂದ ಭಾರತ ಸೇರಿದಂತೆ ಜಗತ್ತಿನಾದ್ಯಂತ ವಿದ್ಯುತ್‌ಚಾಲಿತ ವಾಹನಗಳು ಹೆಚ್ಚು ಸದ್ದು ಮಾಡುತ್ತಿವೆ. ತೈಲ ದರ ಹೆಚ್ಚಳ, ಮಾಲಿನ್ಯ ಸೇರಿದಂತೆ ವಿವಿಧ ಕಾರಣಗಳಿಗಾಗಿ ಜನರು ಇವಿಗಳತ್ತ ಮುಖ ಮಾಡುತ್ತಿದ್ದಾರೆ. ವಿದ್ಯುತ್‌ಚಾಲಿತ ವಾಹನಗಳನ್ನು ಆಲಿಂಗಿಸಿಕೊಂಡ 15 ದೇಶಗಳ ಪೈಕಿ ಭಾರತ 11ನೇ ಸ್ಥಾನ ಗಳಿಸಿದೆ ಎಂದು ಗ್ಲೋಬಲ್‌ ಎಲೆಕ್ಟ್ರಿಕ್‌ ಮೊಬಿಲಿಟಿ ರೆಡಿನೆಸ್‌ ಇಂಡೆಕ್ಸ್‌(ಜೆಮ್ರಿಕ್ಸ್‌) ವರದಿ ಹೇಳಿದೆ.

Advertisement

ನಾರ್ವೆ ನಂ.1
ಜಗತ್ತಿನಲ್ಲೇ ಅತಿ ಹೆಚ್ಚು ವಿದ್ಯುತ್‌ ಚಾಲಿತ ವಾಹನಗಳನ್ನು ಬಳಸುತ್ತಿರುವ ದೇಶವೆಂದರೆ ನಾರ್ವೆ. ಇವಿಗಳು ಇಲ್ಲಿನ ನಾಗರಿಕರ ಜನಪ್ರಿಯ ಆಯ್ಕೆಯಾಗಿವೆ. ಜೆಮ್ರಿಕ್ಸ್‌ ಸೂಚ್ಯಂಕದಲ್ಲಿ ಎರಡನೇ ಸ್ಥಾನವನ್ನು ಚೀನಾ ಗಳಿಸಿದರೆ, ನಂತರದ ಸ್ಥಾನಗಳಲ್ಲಿ ಜರ್ಮನಿ, ಯುಕೆ ಮತ್ತು ಸಿಂಗಾಪುರವಿದೆ.

ಭಾರತಕ್ಕೆ 11ನೇ ಸ್ಥಾನ
ಈ ಸೂಚ್ಯಂಕದಲ್ಲಿ ಭಾರತವು 31 ಸ್ಕೋರ್‌ಗಳನ್ನು ಗಳಿಸಿ, 11ನೇ ಸ್ಥಾನ ಪಡೆದಿದೆ. ಆದರೆ, ವೆಚ್ಚ ಮತ್ತು ಮೂಲಸೌಕರ್ಯಗಳ ನಿರ್ಮಾಣವೇ ಭಾರತಕ್ಕೆ ಅತಿದೊಡ್ಡ ಸವಾಲು ಎಂದು ವರದಿ ಹೇಳಿದೆ. ಭಾರತದ ಗ್ರಾಹಕರಿಗೆ ಈಗಾಗಲೇ 40 ಬಗೆಯ ಇವಿಗಳ ಆಯ್ಕೆ ಲಭ್ಯವಿದ್ದು, ದಿನಕಳೆದಂತೆ ವಿದ್ಯುತ್‌ಚಾಲಿತ ವಾಹನ ಖರೀದಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಚೀನಾದಲ್ಲಿ ಒಟ್ಟು 100 ವಿಧದ ಇವಿ ಮಾಡೆಲ್‌ಗ‌ಳು ರಸ್ತೆಗಳಿದಿವೆ ಎನ್ನುತ್ತಿದೆ ವರದಿ.

ಮಾನದಂಡವೇನು?
ಮಾರುಕಟ್ಟೆ, ಗ್ರಾಹಕರು, ಮೂಲಸೌಕರ್ಯಗಳು ಮತ್ತು ಸರ್ಕಾರಗಳನ್ನು ಮಾನದಂಡವನ್ನಾಗಿ ಬಳಸಿಕೊಂಡು ಈ ವರದಿ ಸಿದ್ಧಪಡಿಸಲಾಗಿದೆ.

ಮುಂದಿನ ಒಂದು ವರ್ಷದಲ್ಲೇ ಭಾರತದಲ್ಲಿ ವಿದ್ಯುತ್‌ಚಾಲಿತ ವಾಹನಗಳ ಬೆಲೆಯು ಪೆಟ್ರೋಲ್‌ ವಾಹನಗಳ ದರಕ್ಕೆ ಸಮವಾಗಲಿದೆ. ಪಳೆಯುಳಿಕೆ ಇಂಧನಕ್ಕೆ ವೆಚ್ಚ ಮಾಡುವ ಹಣ ಉಳಿತಾಯವಾಗಲಿದೆ.
– ನಿತಿನ್‌ ಗಡ್ಕರಿ, ಕೇಂದ್ರ ಸಾರಿಗೆ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next