Advertisement

ನಾರ್ವೆಯಲ್ಲಿ ಗುಂಡಿನ ದಾಳಿ: ಇಬ್ಬರ ಸಾವು, 10 ಮಂದಿಗೆ ಗಂಭೀರ ಗಾಯ

08:40 PM Jun 25, 2022 | Team Udayavani |

ಓಸ್ಲೋ: ನಾರ್ವೆಯ ರಾಜಧಾನಿ ಓಸ್ಲೋದಲ್ಲಿ ಶನಿವಾರ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. 10 ಮಂದಿ ಗಂಭೀರ ಗಾಯಗೊಂಡಿದ್ದಾರೆ.

Advertisement

ದಾಳಿ ನಡೆಸಿದವನನ್ನು ಇರಾನ್‌ ಮೂಲದ 42 ವರ್ಷದ ನಾರ್ವೆ ನಾಗರಿಕ ಎಂದು ಗುರುತಿಸಲಾಗಿದೆ. ಈತ ನಗರದ ಮೂರು ಸ್ಥಳಗಳಲ್ಲಿ ಗುಂಡಿನ ದಾಳಿ ನಡೆಸಿದ್ದಾನೆ

ನಗರದಲ್ಲಿ ಪ್ರತಿ ವರ್ಷ ನಡೆಸಲಾಗುವ ಪ್ರೈಡ್‌ ಉತ್ಸವ ಶನಿವಾರದಂದೇ ಆರಂಭವಾಗಬೇಕಿದ್ದು, ಈ ದಾಳಿಯ ಹಿನ್ನೆಲೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ.

ಇದನ್ನೂ ಓದಿ:ಮಿಸ್ ಇಂಡಿಯಾ ವರ್ಲ್ಡ್ ವೈಡ್ 2022ರ ಪ್ರಶಸ್ತಿ ಗೆದ್ದ ಬ್ರಿಟನ್‌ನ ಖುಷಿ ಪಟೇಲ್

ದಾಳಿಕೋರ ಉಗ್ರ ಸಂಘಟನೆಯವನಾಗಿರುವ ಅನುಮಾನವನ್ನು ಪೊಲೀಸ್‌ ಇಲಾಖೆಯು ಹೊರಹಾಕಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next