ಹೊನ್ನಾವರ: ಬಡವ, ಶ್ರೀಮಂತ, ಜಾತಿ, ಧರ್ಮ ಎನ್ನುವ ಭೇದಭಾವವಿಲ್ಲದ ಧಾರ್ಮಿಕ ಕೇಂದ್ರ ಈಶ್ವರಿ ವಿಶ್ವವಿದ್ಯಾಲಯ ಎಂದು ರಾಜಯೋಗಿ ಡಾ| ಬಸವರಾಜ ರಾಜಋಷಿ ನುಡಿದರು. ಅವರು ಪಟ್ಟಣದ ಶಾಂತಿನಗರ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಭವನ ಧ್ಯಾನಮಂದಿರದ ಲೋಕಾರ್ಪಣೆ ನೆರವೇರಿಸಿ ಮಾತನಾಡಿದರು.
ಭಾರತ ಸನಾತನ ಪರಂಪರೆಯ ನೆಲೆಬೀಡಾಗಿದೆ. ಇಲ್ಲಿ ಹಲವು ಜಾತಿ, ಧರ್ಮಗಳು ಒಂದೇ ಎನ್ನುವ ಮನೋಭಾವನೆಯಿಂದ ಜೀವನ ನಡೆಸುತ್ತಿದ್ದಾರೆ ಎಂದರು. ಮಂದಿರ ಲೋಕಾರ್ಪಣೆ ನೆರವೇರಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಇಂದು ಎಲ್ಲರಿಗೂ ಧ್ಯಾನ ಹಾಗೂ ಮನಃಶಾಂತಿ ಅಗತ್ಯವಿದ್ದು, ನೌಕರರಿಗಷ್ಟೆ ಅಲ್ಲದೇ ಜನಪ್ರತಿನಿಧಿಗಳಿಗೂ ತೀರಾ ಅಗತ್ಯವಿದೆ ಎಂದರು. ಸಿಪಿಐ ಶ್ರೀಧರ ಎಸ್.ಆರ್. ಮಾತನಾಡಿ ಸಮಾಜದ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ವ್ಯಕ್ತಿ ಮನಃಶಾಂತಿ ಇದ್ದರೆ ಮಾತ್ರ ಆತ ಇತರರಿಗೆ ಸ್ಪಂದಿಸಲು ಸಾಧ್ಯ
ಎಂದರು.
ಡಿಎಫ್‌ಒ ಗಣಪತಿ ಕೆ., ಫಾದರ್ ಸೆಂಟ್ ಪಾಲ್, ಪಪಂ ಅಧ್ಯಕ್ಷ ಶಿವರಾಜ ಮೇಸ್ತ, ಆರ್.ಪಿ. ನಾಯಕ, ಆರ್.ಎಸ್. ಕಿಣಿ, ಗಣೇಶ ಹೆಗಡೆ, ಉಮೇಶ ಹೆಗಡೆ, ನಿವೃತ್ತ ಪ್ರಾಚಾರ್ಯ ವಿ.ಎಸ್. ಭಟ್, ರಾಜಯೋಗಿನಿ ಉಷಾ ಉಪಸ್ಥಿತರಿದ್ದರು. ಶಿರಸಿ ಸೇವಾ ಕೇಂದ್ರದ ರಾಜಯೋಗಿನಿ ವೀಣಾಜಿ ಕಾರ್ಯಕ್ರಮ ನಿರ್ವಹಿಸಿದರು. ಮೊದಲು ಶಿವಲಿಂಗ ಮೆರವಣಿಗೆ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಭರತನಾಟ್ಯ, ಸಂಗೀತ ಕಾರ್ಯಕ್ರಮ ನೇರವೇರಿತು.
ಓದಿ :
ಒತ್ತಡಕ್ಕೆ ಮಣಿದ ರಾಜ್ಯಸರ್ಕಾರ:ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಅವಕಾಶ ನೀಡಲು ಮಾರ್ಗಸೂಚಿ