ಸಿಯೋಲ್: ಜಂಟಿಯಾಗಿ ಸೇನಾ ತರಬೇತಿ ನಡೆಸುತ್ತಿರುವ ಅಮೆರಿಕ ಮತ್ತು ದ.ಕೊರಿಯ ದೇಶಗಳಿಗೆ ಉತ್ತರ ಕೊರಿಯದಿಂದ ಬಲವಾದ ಎಚ್ಚರಿಕೆ ರವಾನೆಯಾಗಿದೆ. ಇದರಿಂದ ಎರಡೂ ದೇಶಗಳ ನಡುವಿನ ಬಿಗುವಿನ ವಾತಾವರಣ ಇನ್ನಷ್ಟು ಹೆಚ್ಚಿದೆ.
ಕೊರಿಯ ವಾಯುಮಾರ್ಗದಲ್ಲಿ ಅಣ್ವಸ್ತ್ರ ಸಜ್ಜಿತ ಬಿ-52 ಬಾಂಬರ್ ಯುದ್ಧವಿಮಾನ ಸೋಮವಾರ ಹಾರಾಡಿದೆ. ಇದರಿಂದ ಅಲ್ಲಿನ ಸರ್ವಾಧಿಕಾರಿಯಾದ ಕಿಮ್ ಜಾಂಗ್ ಉನ್ ಸಹೋದರಿ ಕಿಮ್ ಯೋ ಜಾಂಗ್ ರೊಚ್ಚಿಗೆದ್ದಿದ್ದಾಳೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕಿಮ್ ಜಾಂಗ್, ಅಮೆರಿಕ-ದ.ಕೊರಿಯ ವಿರುದ್ಧ ಕ್ರಮ ತೆಗೆದುಕೊಳ್ಳುವಷ್ಟು ತಾಕತ್ತು ನಮಗಿದೆ, ಅದಕ್ಕೆ ಸದಾವಿದ್ದೇವೆ ಎಂದು ಹೇಳಿದ್ದಾಳೆ. ಸದ್ಯ ಅಮೆರಿಕ ಮತ್ತು ಅದರ ಅಡಿಯಾಳಾಗಿರುವ ದ.ಕೊರಿಯ ಸೇನಾಪಡೆಗಳು ನಡೆಸುತ್ತಿರುವ ಯುದ್ಧಾಬ್ಯಾಸ ಆಕ್ರಮಣದ ಮುನ್ಸೂಚನೆಯಾಗಿದೆ.
ಇವನ್ನೆಲ್ಲ ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ನಿಸ್ಸಂಶಯವಾಗಿ ಇವಕ್ಕೆಲ್ಲ ಉ.ಕೊರಿಯ ಪ್ರತಿಕ್ರಿಯಿಸಲೇಬೇಕಾಗಿ ಬರುತ್ತದೆ ಎಂದು ಕಿಮ್ ಜಾಂಗ್ ಹೇಳಿದ್ದಾಳೆ.