Advertisement

ಉತ್ತರ ಕೊರಿಯಾದಿಂದ ಮತ್ತೆರೆಡು ಕ್ಷಿಪಣಿ ಉಡಾವಣೆ : ಜಪಾನ್‌ ಆಕ್ಷೇಪ

08:18 PM Feb 20, 2023 | Team Udayavani |

ಸಿಯೋಲ್‌ : ಉತ್ತರ ಕೊರಿಯಾ ಸೋಮವಾರ ಅಲ್ಪಶ್ರೇಣಿಯ 2 ಖಂಡಾಂತರ ಕ್ಷಿಪಣಿಗಳನ್ನು ಜಪಾನ್‌ನತ್ತ ಉಡಾಯಿಸಿ ಪರೀಕ್ಷೆ ನಡೆಸಿದೆ. ಈ ಬಗ್ಗೆ ಜಪಾನ್‌ ನೀಡಿದ್ದ ಎಚ್ಚರಿಕೆಯನ್ನು ಕಡೆಗಣಿಸಿ ಉದ್ಧಟತನ ತೋರಿರುವ ಉತ್ತರ ಕೊರಿಯಾದ ನಡೆಯನ್ನು ಖಂಡಿಸಿರುವ ಜಪಾನ್‌, ಈ ಕುರಿತು ಭದ್ರತಾ ಮಂಡಳಿಯಲ್ಲಿ ಸಭೆ ನಡೆಸುವಂತೆ ವಿಶ್ವಸಂಸ್ಥೆಯ ಮೊರೆ ಹೋಗಿದೆ.

Advertisement

ಮೂರು ದಿಗಳ ಅವಧಿಯಲ್ಲಿ ಉತ್ತರ ಕೊರಿಯಾ ನಡೆಸಿರುವ ಎರಡನೇ ಖಂಡಾಂತರ ಕ್ಷಿಪಣಿ ಪರೀಕ್ಷೆ ಇದಾಗಿದೆ. ಶನಿವಾರ ನಡೆಸಿದ್ದ ಕ್ಷಿಪಣಿ ‌ ಜಪಾನ್‌ ಸಮುದ್ರದಲ್ಲಿ ಬಿದ್ದಿತ್ತು. ಈ ಬಳಿಕ ಉ. ಕೊರಿಯಾದ ಈ ನಡೆಯನ್ನು ಖಂಡಿಸಿ, ಅಂತಾರಾಷ್ಟ್ರೀಯ ಬೆದರಿಕೆ ಎಂದು ಪರಿಗಣಿಸುವುದಾಗಿ ಜಪಾನ್‌ ಎಚ್ಚರಿಕೆ ನೀಡಿತ್ತು.

ಇತ್ತ ದಕ್ಷಿಣ ಕೊರಿಯಾ ಹಾಗೂ ಅಮೆರಿಕ ಮಿಲಿಟರಿ ಸಮರಾಭ್ಯಾಸ ನಡೆಸುತ್ತಿದ್ದು, ಈ ಬೆಳವಣಿಗೆ ತನ್ನ ಭದ್ರತೆಗೆ ಬೆದರಿಕೆಯಾಗಿದೆ. ಹೀಗಾಗಿ, ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ ಎಂದು ಉತ್ತರ ಕೊರಿಯಾ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next