ಕಾರವಾರ: ಸಾಮಾಜಿಕ ಕಾಳಜಿ ಹಾಗೂ ಜವಾಬ್ದಾರಿಯನ್ನು ಯುವಕ ಸಂಘಗಳು ರೂಢಿಸಿಕೊಳ್ಳಬೇಕು ಎಂದು ಶಾಸಕಿ ರೂಪಾಲಿ
ನಾಯ್ಕ ಕಿವಿಮಾತು ಹೇಳಿದರು. ತೋಡುರಿನ ಸಣ್ಣಮ್ಮ ದೇವಿ ಯುವಕ ಮಂಡಳಿ ಹಾಗೂ ಕಾರ್ಯಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕ ಸಂಘಗಳು ಗ್ರಾಮದ ಸಮಸ್ಯೆಗಳಿಗೆ ಪರಿಹಾರ ಹುಡುಕುವಲ್ಲಿ ಸರ್ಕಾರ ಮತ್ತು ಗ್ರಾಮದ ಜನತೆ ಮಧ್ಯೆ ಸೇತುವೆಯಂತೆ ಕೆಲಸ ಮಾಡಬೇಕು. ಶಿಕ್ಷಣ, ಕ್ರೀಡೆ ಹಾಗೂ ಸಂಘಟನೆ ಜೊತೆಗೆ ನಾಯಕತ್ವ ಗುಣಗಳನ್ನು ಬೆಳಸಿಕೊಳ್ಳಬೇಕು. ದೇಶದ ಮಹನೀಯರು ಶಿಕ್ಷಣದ ಮೂಲಕ ಸಮಾಜ ಸುಧಾರಣೆಗೆ ದುಡಿದಂತೆ, ಯುವಕ ಯುವತಿಯರು ಸಹ ದೇಶದ ಸಮಸ್ಯೆಗಳನ್ನು ಗಮನಿಸುತ್ತಾ, ಗ್ರಾಮದ
ಸಮಸ್ಯೆಗಳಿಗೆ ಸ್ಪಂದಿಸಬೇಕು. ಬಡವರಿಗೆ, ಶ್ರಮಿಕರಿಗೆ ಆಗಬೇಕಾದ ಕೆಲಸಗಳಲ್ಲಿ ನೆರವಾಗುವ ಮಾನವೀಯತೆ ಬೆಳೆಸಿಕೊಳ್ಳಿ ಎಂದು ಶಾಸಕಿ ರೂಪಾಲಿ ಹೇಳಿದರು.
ಮುಖ್ಯ ಅತಿಥಿ ನೆಹರು ಯುವಕೇಂದ್ರದ ಅಧಿಕಾರಿ ಯಶ್ವಂತ್ ಯಾದವ ಮಾತನಾಡಿ, ಯುವಕರು ಮನಸ್ಸು ಮಾಡಿದರೆ ದೇಶದ ಹಣೆಬರಹ ಬದಲಿಸಬಹುದು ಎಂದರು. ತೋಡೂರಿನ ಗ್ರಾಪಂ ಸದಸ್ಯರಾದ ಚಂದ್ರಕಾಂತ್ ಚಿಂಚನಕರ್, ಕರುಣಾ ನಾಯ್ಕ, ರಾಘವೇಂದ್ರ ತೋಡುರಕರ್, ಸೀಮಾ ಗುನಗಿ, ಸುಶೀಲಾ ಆಗೇರ, ಸಣ್ಣಮ್ಮ ದೇವಿ ದೇವಸ್ಥಾನದ ಅರ್ಚಕ ಉದಯ ನಾಯ್ಕ ಆಗಮಿಸಿದ್ದರು. ಮಂಡಳಿ ಸದಸ್ಯರು ಶಾಸಕಿ ರೂಪಾಲಿ ನಾಯ್ಕರಿಗೆ ಸನ್ಮಾನಿಸಿದರು. ಪ್ರಶಾಂತ ಚೂಡಾಮಣಿ ನಾಯ್ಕ ಸ್ವಾಗತಿಸಿದರು.
ಮೋಹನ್ ಮಹಾಲೆ ನಿರೂಪಿಸಿದರು. ದರ್ಶನ ನಾಯ್ಕ ಯುವಕ ಮಂಡಳಿಯ ವರದಿ ವಾಚಿಸಿದರು. ಯುವಕ ಮಂಡಳಿಯ ಅಧ್ಯಕ್ಷ ಗಣೇಶ್ ತೋಡುರ್ ಮಾತನಾಡಿದರು. ಶಿವರಾಜ್ ನಾಯ್ಕ ವಂದಿಸಿದರು. ಊರಿನ ನಾಗರಿಕರು ಹಾಗೂ ಸಣ್ಣಮ್ಮ ಯುವಕ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಓದಿ :
ಬಂಟ್ವಾಳ: ಬಂಗಾರ ದೋಚಲು ಕೆಲಸದಾಕೆಯ ಖತರ್ನಾಕ್ ಪ್ಲ್ಯಾನ್: ಕೊನೆಗೂ ಸಾವಿನ ರಹಸ್ಯ ಬಯಲು !