Advertisement

ಯೂಟ್ಯೂಬ್ ವಿಡಿಯೋ ವೈರಲ್ ಮಾಡುವುದು ಹೇಗೆ ? ಅತೀ ದೊಡ್ಡ ರಹಸ್ಯ ಭೇದಿಸಿದಾತನ ಕಥೆ

02:45 PM May 19, 2021 | Team Udayavani |

2016ರಲ್ಲಿ ಜಿಮ್ಮಿ ಡೊನಾಲ್ಡ್ ಸನ್ ಎಂಬಾತ ಕಾಲೇಜನ್ನು ಅರ್ಧಕ್ಕೆ ಮೊಟಕುಗೊಳಿಸಿ, ಮಾಧ್ಯಮ ಅಥವಾ ಸಾಮಾಜಿಕ ಜಾಲತಾಣ ಲೋಕದ ಅತೀ ದೊಡ್ಡ ರಹಸ್ಯವೊಂದನ್ನು ಭೇದಿಸಲು ಹೊರಟ. ಯೂಟ್ಯೂಬ್ ನಲ್ಲಿ ವಿಡಿಯೋವೊಂದು ವೈರಲ್ ಆಗುವುದು ಹೇಗೆ ? ಎಂಬುದೇ ಆತನ ಕುತೂಹಲದ ಕೇಂದ್ರವಾಗಿತ್ತು. ಡೊನಾಲ್ಡ್ ಸನ್ ಗೆ ಆಗ 18ರ ಹರೆಯ, ತನ್ನ 12ನೇ ವಯಸ್ಸಿನಿಂದಲೂ ಆತ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡುತ್ತಿದ್ದ. ಆದರೆ ಅದಾವುದೂ ಹೆಚ್ಚಿನ ವೀಕ್ಷಣೆಗೆ ಒಳಪಟ್ಟಿರಲಿಲ್ಲ.

Advertisement

2016ರಲ್ಲಿ  ಯೂಟ್ಯೂಬ್ ಅಲ್ಗಾರಿದಮ್ (ಕ್ರಮಾವಳಿ) ರಹಸ್ಯವನ್ನು ಅನ್ ಲಾಕ್ ಮಾಡಲು ಸಾಧ್ಯ ಎಂದು ಕಂಡುಕೊಂಡ ಡೊನಾಲ್ಡ್ ಸನ್, ಬ್ಲ್ಯಾಕ್ ಬಾಕ್ಸ್ ರೂಲ್ಸ್ (ಯಾವ ವಿಡಿಯೋಗಳನ್ನು ಯೂಟ್ಯೂಬ್  ಶಿಫಾರಸ್ಸು (Recommended) ಮಾಡುತ್ತಿದೆ. ಅದಕ್ಕಿರುವ ಮಾನದಂಡಗಳೇನು ? ಮುಂತಾದವು) ಅಧ್ಯಯನ ಮಾಡಿದ.

ನಂತರದ ಕೆಲವು ದಿನಗಳಲ್ಲಿ ಡೊನಾಲ್ಡ್ ಸನ್ ಮತ್ತು ಆತನ ಸ್ನೇಹಿತರು ಯೂಟ್ಯೂಬ್ ಕೋಡ್ ಕ್ರ್ಯಾಕ್ (Code crack) ಮಾಡುವ ಕಾಯಕದಲ್ಲಿ ನಿರತರಾದರು. ಇದಕ್ಕಾಗಿ ಪ್ರತಿನಿತ್ಯ ಫೋನ್ ಕರೆ‍ಗಳ ಮೂಲಕ ಚರ್ಚಿಸಿ ಯಾವುದು ವೈರಲ್ ಆಗುತ್ತಿವೆ ಎಂಬುದನ್ನು ವಿಶ್ಲೇಷಣೆ ನಡೆಸಿದರು. ಜೊತೆಗೆ ಈಗಾಗಲೇ ಮಿಲಿಯನ್ ಗಟ್ಟಲೇ ಸಬ್ ಸ್ಕ್ರೈಬರ್ಸ್ ಹೊಂದಿರುವ ಚಾನೆಲ್ ಗಳ ಡೇಟಾ ಗಳನ್ನು ಪರಿಶೀಲಿಸಿದರು.

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಡೊನಾಲ್ಡ್ ಸನ್ “ಬೆಳಗ್ಗೆ ಏಳುವುದು, ಯೂಟ್ಯೂಬ್ ಅಧ್ಯಯನ ಮಾಡುವುದು, ವಿಡಿಯೋಗಳನ್ನು ಪರಿಶೀಲಿಸುವುದು, ಫಿಲ್ಮ್ ಮೇಕಿಂಗ್ ಅಧ್ಯಯನ, ಮತ್ತೆ ಮಲಗುವುದು” ಇದೇ ದಿನ ಜೀವನ ಕ್ರಮವಾಗಿತ್ತು ಎಂದು ನೆನಪಿಸಿಕೊಂಡಿದ್ದಾನೆ.

Advertisement

ಹಲವು ದಿನಗಳ ಅಧ್ಯಯನದ ನಂತರ ಡೋನಾಲ್ಡ್ ಸನ್ ಗೆ ಯೋಜನೆಯೊಂದು ಹೊಳೆಯಿತು. ಅದನ್ನು ಅನುಸರಿಸಿದರೆ ಖಂಡಿತಾ ಯಶಸ್ವಿಯಾಗುತ್ತೇನೆಂಬ ಭರವಸೆ ಮೂಡಿತು. ಅದಕ್ಕಾಗಿ ಕ್ಯಾಮರ ಆನ್ ಮಾಡಿ ಚೇರ್ ಒಂದರಲ್ಲಿ ಕುಳಿತು ಸೊನ್ನೆಯಿಂದ ಆರಂಭಿಸಿ 1 ಲಕ್ಷದವರೆಗೆ ಎಣಿಸಲು ಆರಂಭಿಸಿದ. ಇದಕ್ಕಾಗಿ 40ಕ್ಕೂ ಹೆಚ್ಚು ಗಂಟೆಗಳ ಕಾಲ ಸಮಯಾವಕಾಶ ತೆಗೆದುಕೊಂಡಿದ್ದ. ಕೊನೆಗೆ ಕ್ಯಾಮರದ ಎದುರಿಗೆ ಬಂದು “ನನ್ನ ಜೀವನದಲ್ಲಿ ನಾನೇನು ಮಾಡುತ್ತಿದ್ದೇನೆ” ? ಎಂದಷ್ಟೇ ಉದ್ಗರಿಸಿದ.

ಬಹುಶ: ಇಂತಹದ್ದೊಂದು ಪ್ರಯತ್ನ ಯಾರು ಪಟ್ಟಿರಲಾರರು. ಪ್ರಾಥಮಿಕ ಶಾಲೆಯಲ್ಲಿರುವಾಗ ಮಕ್ಕಳು 1 ರಿಂದ 1000 ದವರೆಗೂ ಏಣಿಸುವುದನ್ನು ನಾವು ಕಂಡಿದ್ದೇವೆ. ಆದರೇ ಡೊನಾಲ್ಡ್ ಸನ್ ಅದನ್ನು ವಿಡಿಯೋ ರೂಪಕ್ಕೆ ಪರಿವರ್ತಿಸಿದ್ದ. ಜನವರಿ 8. 2017 ರಲ್ಲಿ ಈ ವಿಡಿಯೋ “I Counted To 1,00,000 !” ಹೆಸರಿನಲ್ಲಿ ಅಪ್ಲೋಡ್ ಆಗಿತ್ತು. ಮುಂದಿನ ಕೆಲವೇ ದಿನಗಳಲ್ಲಿ 21 ಮಿಲಿಯನ್ ಗಿಂತಲೂ ಹೆಚ್ಚು ವಿವ್ಸ್ ಪಡೆದಿತ್ತು.

ಈ ವಿಡಿಯೋ ಯೂಟ್ಯೂಬ್ ಇತಿಹಾಸದಲ್ಲಿ ಸಂಚಲನ ಸೃಷ್ಟಿಸಿದ್ದು ಮಾತ್ರವಲ್ಲದೆ ಡೊನಾಲ್ಡ್ ಸನ್ ಯೂಟ್ಯೂಬ್ ಚಾನೆಲ್ “MrBeast” ಅತೀ ಹೆಚ್ಚು ಸಬ್ ಸ್ಕ್ರೈಬರ್ಸ್ ಪಡೆಯಲು ರಹದಾರಿ ಸೃಷ್ಟಿಸಿತ್ತು. ವಿಡಿಯೋ ಅಪ್ಲೋಡ್ ಮಾಡಿದ 28 ದಿನಗಳಲ್ಲಿ 48 ಮಿಲಿಯನ್ ಜನರು ಈತನ ಚಾನೆಲ್ ಸಬ್ ಸ್ಕ್ರೈಬ್ ಮಾಡಿದ್ದರು. 34 ಮಿಲಿಯನ್ ಗಂಟೆಗಳಷ್ಟು ಡೊನಾಲ್ಡ್ ಸನ್ ವಿಡಿಯೋ ನೋಡಲೆಂದೇ ವ್ಯಯಿಸುತ್ತಿದ್ದರು. ಇದರ ಪರಿಣಾಮವಾಗಿ ಆಸ್ಕರ್ ಗೆ ಸರಿಸಮಾನವಾದ ಪ್ರಶಸ್ತಿಗಳಲ್ಲೊಂದಾದ ಯೂಟ್ಯೂಬ್ ಕ್ರಿಯೇಟರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಡೊನಾಲ್ಡ್ ಮುಡಿಗೇರಿಸಿಕೊಂಡಿದ್ದ.

ಇಂದು “MrBeast” ವಿಡಿಯೋಗಳು ಯೂಟ್ಯೂಬ್ ಬೆಳವಣಿಗೆಯಲ್ಲೂ ಮಹತ್ವ ಪಾತ್ರವಹಿಸಿದೆ. ಈತನ ಪ್ರತಿಯೊಂದು ವಿಡಿಯೋಗಳು ಕೂಡ 20 ಮಿಲಿಯನ್ ಗಿಂತ ಹೆಚ್ಚು ವೀಕ್ಷಣೆ ಪಡೆಯುತ್ತದೆ. ಹೀಗಾಗಿ ಯೂಟ್ಯೂಬ್ ವಿಡಿಯೋಗಳಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಏಕೈಕ ವ್ಯಕ್ತಿ ಡೊನಾಲ್ಡ್ ಸನ್.

ಇಂದು ಡೊನಾಲ್ಡ್ ಸನ್ ಗೆ 22 ರ ವಯಸ್ಸು. ಅತ್ಯುತ್ತಮ ವಾಕ್ಚಾತುರ್ಯ ಹೊಂದಿರುವ ಈತ ಸಂದರ್ಶನಗಳಲ್ಲಿ ಹೆಚ್ಚಾಗಿ ಭಾಗವಹಿಸುವುದಿಲ್ಲ. ಆದರೇ ಯೂಟ್ಯೂಬ್ ವಿಡಿಯೋ ಮೂಲಕ ಮಾತಿಗಳಿದರೆ ಪ್ರತಿಯೊಂದು ಕೂಡ ವೈರಲ್ ಆಗುತ್ತವೆ. ವೈರಲ್ ಮಾಡುವುದು ಹೇಗೆ ಎಂಬುದನ್ನು ಕರಗತ ಮಾಡಿಕೊಂಡರೇ ಇಂದು ಎಲ್ಲವೂ ಸಾಧ್ಯ. ಪ್ರತಿಯೊಂದು ವಿಡಿಯೋಗಳ ಹಿಂದೆಯೂ ತಿಂಗಳ ಪರಿಶ್ರಮವಿರುತ್ತದೆ. 4-5 ದಿನಗಳ ಶೂಟಿಂಗ್ ಇರುತ್ತದೆ. ಹೀಗಾಗಿ ಇತರರಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದ್ದೇನೆ ಎನ್ನುತ್ತಾನೆ ಡೊನಾಲ್ಡ್ ಸನ್.

ಇಂದು ಹಲವಾರು ಯೂಟ್ಯೂಬ್ ಸ್ಟಾರ್ ಗಳಿದ್ದಾರೆ. ಇದರಲ್ಲಿ ನಟ-ನಟಿಯರು, ಗಾಯಕರು, ಸ್ಕ್ರೀನ್ ರೈಟರ್ಸ್ ಸೇರಿದಂತೆ ಪ್ರತಿಯೊಬ್ಬರೂ ಕೂಡ ತಮ್ಮ ಸಾಂಪ್ರದಾಯಿಕ ಶೈಲಿಯಲ್ಲಿ ತನ್ನ ಛಾಪನ್ನು ಮೂಡಿಸಿದ್ದಾರೆ. ಇದೆಲ್ಲವನ್ನೂ ಹೊರತುಪಡಿಸಿ ಭಿನ್ನ ಶೈಲಿಯಲ್ಲಿ ವಿಡಿಯೋವನ್ನು ಚಿತ್ರಿಕರಿಸಲು ನಾನು ಆರಂಭಿಸಿದೆ. ಪ್ರತಿನಿತ್ಯ ಏಳುವಾಗ ಯಾವ ವಿಡಿಯೋ ಮಾಡಿದರೆ ಉತ್ತಮ ಎಂದು ಯೋಚಿಸುತ್ತೇನೆ.

12ನೇ ವಯಸ್ಸಿನಲ್ಲಿ 2 ಯೂಟ್ಯೂಬ್ ಚಾನೆಲ್ ಆರಂಭಿಸಿದ್ದೆ. ಅದರಲ್ಲೊಂದು Mr, Beast. ಪ್ರತಿಯೊಂದು ವಿಡಿಯೋಗಳನ್ನು ಕೂಡ ಫೋನ್ ನಲ್ಲೇ ಚಿತ್ರಿಕರಿಸುತ್ತಿದ್ದೆ. ಕಾಲೇಜನ್ನು ಅರ್ಧಕ್ಕೆ ಬಿಟ್ಟ ನಂತರ “I didn’t have much money, so I wanted to do something big,” ಎಂಬ ವಿಷಯದಡಿ ವಿಡಿಯೋ ಮಾಡಿದ್ದೆ. ಇದು ಅಪಾರ ಪ್ರಮಾಣದ ಜನರ ಗಮನ ಸೆಳೆದಿತ್ತು ಎಂದು ಹೇಳಿಕೊಂಡಿದ್ದಾನೆ.

18 ವಯಸ್ಸಿನಲ್ಲಿರುವಾಗ  ಈತನ ಯೂಟ್ಯೂಬ್ ವಿಡಿಯೋಗಳು ವರ್ಷಕ್ಕೆ 122 ಮಿಲಿಯನ್ ವಿವ್ಸ್ ಪಡೆದಿತ್ತು. 19 ನೇ ವಯಸ್ಸಿನಲ್ಲಿ 460 ಮಿಲಿಯನ್, ಇಂದು 4 ಬಿಲಿಯನ್ ವಿವ್ಸ್ ಪಡೆಯುತ್ತಿದ್ದಾನೆ. ಡೊನಾಲ್ಡ್ ಇದೀಗ 50 ಜನರಿಗೆ ಉದ್ಯೋಗ ನೀಡಿದ್ದಾನೆ. ಬಿಲಿಯನ್ ಗಟ್ಟಲೇ ಸಂಪಾದಿಸುತ್ತಾನೆ. ಈತನ Mr Beast ಚಾನೆಲ್ ಗೆ 62.2M subscribers ಇದ್ದಾರೆ. ಈತನ ಮತ್ತೊಂದು ಗೇಮಿಂಗ್ ಚಾನೆಲ್ ಗೆ 11 ಮಿಲಿಯನ್ subscribers ಇದ್ದಾರೆ.

  • ಮಿಥುನ್ ಪಿ.ಜಿ
Advertisement

Udayavani is now on Telegram. Click here to join our channel and stay updated with the latest news.

Next