Advertisement

ನೂರಕ್ಕೂ ಹೆಚ್ಚು ಅಂಧರಿಗೆ ದೃಷ್ಟಿ ಭಾಗ್ಯ

06:51 PM Apr 10, 2021 | Team Udayavani |

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಮೊಟ್ಟ ಮೊದಲ ಏಕೈಕ ಸುಸಜ್ಜಿತ ನೇತ್ರ ಭಂಡಾರ ಲಯನ್ಸ್‌ ನಯನ ನೇತ್ರ ಭಂಡಾರ ಶಿರಸಿಯ ನಯನ ಫೌಂಡೇಶನ್‌, ಲಯನ್ಸ್‌ ಕ್ಲಬ್‌ ಮತ್ತು ಗಣೇಶ ನೇತ್ರಾಲಯದ ಜಂಟಿ ಯೋಜನೆಯಾಗಿದ್ದು ಕಳೆದ ಮೂರು ವರ್ಷಗಳಲ್ಲಿ ನೂರಕ್ಕೂ ಅಧಿಕ ಅಂಧರಿಗೆ, ದೃಷ್ಟಿ ಹೀನರಿಗೆ ಬೆಳಕಿನ ಭಾಗ್ಯ ನೀಡಿದೆ.

Advertisement

ಕಳೆದ 2017ರಲ್ಲಿ ಸ್ವರ್ಣವಲ್ಲೀ ಗಂಗಾಧರೇಂದ್ರ ಸ್ವಾಮಿಗಳಿಂದ ಉದ್ಘಾಟಿಸಿದ ನೇತ್ರ ಭಂಡಾರವು ಕಳೆದ 3 ವರ್ಷಗಳಿಂದಲೂ ನಿರಂತರವಾಗಿ ದೃಷ್ಟಿ ಕಲ್ಪಿಸುವ ಸೇವೆಯನ್ನು ನುರಿತ ತಂಡದಿಂದ ಸಲ್ಲಿಸುತ್ತಿದೆ.

ನೇತ್ರದಾನಿಗಳು ಮೃತಪಟ್ಟ ಬಳಿಕ ಅವರ ನೇತ್ರವನ್ನು ಸಂಗ್ರಹಿಸಿ ಅಗತ್ಯವುಳ್ಳವರಿಗೆ ಕಸಿ ಮಾಡುವ ಮೂಲಕ ಈ ಕಾರ್ಯದಲ್ಲಿ ಈಗ ಶತಕ ಪೂರೈಸಿದ್ದು ವಿಶೇಷವಾಗಿದೆ. ನಮ್ಮ ನೇತ್ರಭಂಡಾರವು ಇದೀಗ ಕಪ್ಪುಗುಡ್ಡೆಯ ಕಸಿ ಶಸ್ತ್ರ ಚಿಕಿತ್ಸೆಗಳ ಶತಕದ ಗಡಿ ದಾಟಿ 103 ಕ್ಕೂ ಹೆಚ್ಚು ಕಪ್ಪುಗುಡ್ಡೆಯ ಅಂಧರಿಗೆ ಕಸಿ ಶಸ್ತ್ರ ಚಿಕಿತ್ಸೆಗಳ ಮೂಲಕ ದೃಷ್ಟಿ ಕಲ್ಪಿಸಲಾಗಿದೆ. 147 ಕಣ್ಣುಗಳನ್ನು ನೇತ್ರದಾನದ ಮೂಲಕ ಪಡೆಯಲಾಗಿದೆ ಹಾಗೂ 55 ಕ್ಕೂ ಹೆಚ್ಚು ಕಣ್ಣುಗಳನ್ನು ರಾಜ್ಯದ ವಿವಿಧ ಕಣ್ಣಿನ ಆಸ್ಪತ್ರೆಗಳಿಗೆ ಕಸಿ ಶಸ್ತ್ರ ಚಿಕಿತ್ಸೆಗಳ ಸಲುವಾಗಿ ನೀಡಿದ್ದೂ ವಿಶೇಷವೇ ಆಗಿದೆ.

ಈ ಮೈಲುಗಲ್ಲಿನ ಸಂಭ್ರಮಾಚರಣೆ ನಿಮಿತ್ತ ಹುಬ್ಬಳ್ಳಿ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ರಘುವೀರಾನಂದಜಿ ನೇತ್ರಭಂಡಾರದ ಕಪ್ಪುಗುಡ್ಡೆಯ ಕಸಿ ಶಸ್ತ್ರ ಚಿಕಿತ್ಸೆಗಳ ಶತಕದ ಭಿತ್ತಿ ಪತ್ರಗಳನ್ನು ಅನಾವರಣಗೊಳಿಸಿದರು. ನಮ್ಮ ಜಿಲ್ಲೆ ಹಾಗೂ ಸುತ್ತ ಮುತ್ತ ವಿಭಾಗದ ಜನರಲ್ಲಿ ಕಪ್ಪುಗುಡ್ಡೆಯ ಅಂಧರ ಸಂಖ್ಯೆ ಇನ್ನೂ ಗಣನೀಯವಾಗಿದೆ. ಇವರುಗಳ ಅಂಧತ್ವ ನಿವಾರಣೆಗೆ ನೇತ್ರದಾನದ ಮೂಲಕ ದೊರೆತ ಕಣ್ಣುಗಳ ಕಪ್ಪುಗುಡ್ಡೆಯ ಕಸಿ ಶಸ್ತ್ರ ಚಿಕಿತ್ಸೆಗಳ ಮೂಲಕ ಮಾತ್ರ ಸಾಧ್ಯ. ಆದರೆ ದುರದೃಷ್ಟವಶಾತ್‌ ಇನ್ನೂ ನಮ್ಮ ಸಮಾಜದಲ್ಲಿ ನೇತ್ರದಾನದ ಅರಿವು ಅಲ್ಪವಾಗಿದೆ ಎನ್ನುತ್ತಾರೆ ಹಿರಿಯ ನೇತ್ರತಜ್ಞ ಡಾ| ಶಿವರಾಮ ಕೆ.ವಿ.

Advertisement

Udayavani is now on Telegram. Click here to join our channel and stay updated with the latest news.

Next