Advertisement

ಕೋವಿಡ್ ಕರ್ಪ್ಯೂ ಸಂದರ್ಭದಲ್ಲಿಯೂ ಎದೆಗುಂದದೆ ವೃದ್ಧೆ ಗಂಗಮ್ಮನ ಸ್ವಾಭಿಮಾನಿ ಬದುಕು

06:37 PM May 01, 2021 | Team Udayavani |

ಗಂಗಾವತಿ: ಕೋವಿಡ್ ರೋಗ ಜಗತ್ತನ್ನು ಹಿಂಡಿ ಹಿಪ್ಪಿ ಮಾಡುತ್ತಿದೆ. ರಾಜ್ಯದಲ್ಲಿ ಕೋವಿಡ್ ಕರ್ಪ್ಯೂ ಜಾರಿಯಾಗಿದ್ದು ಜನಸಾಮಾನ್ಯರ ಬದುಕು ದುಸ್ತಾರವಾಗಿದೆ.

Advertisement

ಕರ್ಪ್ಯೂನಿಂದಾಗಿ ನಗರದ ಪ್ರದೇಶದಲ್ಲಿ ಎಲ್ಲ ಅಂಗಡಿ‌ಮುಂಗಟ್ಟುಗಳ ವ್ಯವಹಾರಗಳು ಸ್ಥಗಿತಗೊಂಡಿವೆ. ಬಡವರ ಬದುಕು ಬೀದಿಗೆ ಬಂದಿದೆ. ದಿನ‌ದುಡಿದು ಜೀವನ ನಡೆಸುವವರು ತೀವ್ರಸಂಕಷ್ಟದಲ್ಲಿದ್ದಾರೆ. ಗಂಗಾವತಿಯಲ್ಲಿ ಕೇಂದ್ರ ಬಸ್ ನಿಲ್ದಾಣ ಹಾಗೂ ಇತರೆ ಜನನಿಬಿಡ ಪ್ರದೇಶದಲ್ಲಿ ಬಾಳೆ ಹಣ್ಣು ಇತರೆ ತರಕಾರಿ ಮಾರಾಟ ಮಾಡುವವರು ಬೆಳ್ಳಿಗ್ಗೆ 6-10 ಗಂಟೆ ವರೆಗೆ ಮಾತ್ರ ವ್ಯಾಪಾರ ಮಾಡಿ ಬದುಕು ದೂಡುತ್ತಿದ್ದಾರೆ.

ಗಂಗಮ್ಮ ವಯೋವೃದ್ಧೆ ಬಾಳೆ ಹಣ್ಣು ವ್ಯಾಪಾರ ಮಾಡಿ ಬದುಕು ನಡೆಸುತ್ತಾಳೆ ಕರ್ಪ್ಯೂ ಸಂದರ್ಭದಲ್ಲಿಯೂ ರಸ್ತೆ ಬದಿಯಲ್ಲಿ ಅಥವಾ ನಗರದಲ್ಲಿ‌ ಕಾಲ್ನಡಿಗೆಯಲ್ಲಿ ಸುತ್ತಿ ಬಾಳೆಹಣ್ಣಿನ ಪುಟ್ಟಿ ಹೊತ್ತುಕೊಂಡು ಈಗಲೂ ಮಾರಾಟ ಮಾಡಿ ನಿತ್ಯವೂ 200-300 ರೂ.ಗಳ ದುಡಿದು ಸ್ವಾವಲಂಬಿ ಬದುಕು ನಡೆಸುತ್ತಿದ್ದು ಕೋವಿಡ್ ಮಹಾಮಾರಿಗೆ ಹೆದರಿ ಬದುಕು ಕಷ್ಟ ಎನ್ನುವವರಿಗೆ ಮಾದರಿಯಾಗಿದ್ದಾಳೆ.

ಕುಳಿತು ಕೆಡಬಾರದು: ಜೀವ ದುಡಿಯಲು ಜನಿಸಿದೆ ಮರಣ ಹೊಂದುವವರಿಗೂ ದುಡಿದು ಉಣ್ಣಬೇಕು. ಕುಳಿತು ಕೆಡಬಾರದು. ನನಗೆ ಒರ್ವ ಮಗನಿದ್ದಾನೆ ನಾವು ಬಡವರು ಕೋವಿಡ್ ಕರ್ಪ್ಯೂ ನಿಂದ ಬದುಕು ಕಷ್ಟವಾಗುತ್ತದೆ. ಎಲ್ಲರೂ ಹಣ್ಣು ಮಾರಿ‌ದುಡಿದು‌ ತಿನ್ನುತ್ತೇವೆ ಸರಕಾರ ಎಷ್ಟು‌ ಕೊಡಲು ಸಾಧ್ಯ ನಾವೇ ದುಡಿದು ತಿನ್ನಬೇಕೆಂದು ವಯೋವೃದ್ದೆ ಗಂಗಮ್ಮ ಹೆಮ್ಮೆಯಿಂದ ಹೇಳುತ್ತಾಳೆ.

Advertisement

Udayavani is now on Telegram. Click here to join our channel and stay updated with the latest news.

Next