ಹೊಸದಿಲ್ಲಿ: ವಂಚಕ ಸುಕೇಶ್ ಚಂದ್ರಶೇಖರ್ ತನಗೆ ಆಮಿಷವೊಡ್ಡಿದ್ದನೆಂದು ನಟಿ ನೋರಾ ಫತೇಹಿ ಆರೋಪಿಸಿದ ಬೆನ್ನಲ್ಲೇ, ಸುಕೇಶ್ ನಟಿ ವಿರುದ್ಧ ಮತ್ತೂಂದು ಹೇಳಿಕೆ ನೀಡಿದ್ದಾನೆ.
Advertisement
ನೋರಾ ನನ್ನ ಹಿಂದೆ ಬಿದ್ದಿದ್ದಳು, ದಿನಕ್ಕೆ 10 ಬಾರಿ ಕರೆ ಮಾಡು ತ್ತಿದ್ದಳು ಎಂದಿದ್ದಾನೆ. 200 ಕೋಟಿ ರೂ.ವಂಚನೆ ಆರೋಪದ ಮೇರೆಗೆ ತಿಹಾರ್ ಜೈಲಿನಲ್ಲಿರುವ ಸುಕೇಶ್ ಈ ಹೇಳಿಕೆ ನೀಡಿದ್ದು, ನಾನು ನಟಿ ಜಾಕ್ವೆ ಲಿನ್ ಫೆರ್ನಾಂಡಿಸ್ ಜತೆಗೆ ಡೇಟ್ ಮಾಡುತ್ತಿ ದ್ದಾಗ, ನೋರಾ ಆಕೆ ಬಗ್ಗೆ ಅಸೂಯೆ ಪಟ್ಟುಕೊಂಡಿ ದ್ದಳು. ನಾನೆ ಆಕೆಯನ್ನ ದೂರ ತಳ್ಳುತ್ತಿದ್ದರೂ ಕಿರಿಕಿರಿ ಮಾಡುತ್ತಿದ್ದಳು ಎಂದು ಸುಕೇಶ್ ದೂರಿದ್ದಾನೆ.