ಹೊಸದಿಲ್ಲಿ: ಜೈಲು ಪಾಲಾಗಿರುವ ವಂಚಕ ಸುಕೇಶ್ ಚಂದ್ರಶೇಖರ್ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ-ಡ್ಯಾನ್ಸರ್ ನೋರಾ ಫತೇಹಿ ಅವರನ್ನು ದೆಹಲಿ ಪೊಲೀಸರು ಶುಕ್ರವಾರ ವಿಚಾರಣೆಗೆ ಒಳಪಡಿಸಿದ್ದಾರೆ.
ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ ಶುಕ್ರವಾರ ನಟಿಯನ್ನು ವಿಚಾರಣೆ ಮಾಡಿಕೊಂಡಿದೆ.
200 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮನಿ ಲಾಂಡರಿಂಗ್ ಪ್ರಕರಣ ಎದುರಿಸುತ್ತಿರುವ ಕರ್ನಾಟಕ ಮೂಲದ ಸುಕೇಶ್ ಚಂದ್ರಶೇಖರ್ ಜೊತೆ ನಟಿಯರಾದ ನೋರಾ ಫತೇಹಿ ಮತ್ತು ಜಾಕ್ವೆಲಿನ್ ಫರ್ನಾಂಡೀಸ್ ಸಂಪರ್ಕ ಹೊಂದಿರುವ ಬಗ್ಗೆ ವರದಿಯಾಗಿದ್ದವು. ಅದರಲ್ಲೂ ಜಾಕ್ವೆಲಿನ್ ಫರ್ನಾಂಡೀಸ್ ಗೆ ಸುಕೇಶ್ ಚಂದ್ರಶೇಖರ್ ದುಬಾರಿ ಗಿಫ್ಟ್ ಗಳನ್ನು ನೀಡಿದ್ದ. ಸುಕೇಶ್ ಚಂದ್ರಶೇಖರ್ ಬಂಧನದ ಬಳಿಕ, ಅವರು ಮತ್ತು ಜಾಕ್ವೆಲಿನ್ ಅವರ ಕೆಲವು ಖಾಸಗಿ ಸೆಲ್ಫಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
ಇದನ್ನೂ ಓದಿ:ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದು ಪರ ಆಜಾದ್ ಮತ ಚಲಾಯಿಸಿದ್ದರು: ಅಲ್ತಾಫ್ ಬುಖಾರಿ
ಅಲ್ಲದೆ ನಟಿ ನೋರಾ ಫತೇಹಿಗೆ ಸುಕೇಶ್ ಚಂದ್ರಶೇಖರ್ ಗೆ ದುಬಾರಿ ಕಾರನ್ನು ಗಿಫ್ಟ್ ನೀಡಿದ್ದ ಎಂದು ಒಪ್ಪಿಕೊಂಡಿದ್ದ. ಈ ಹಿಂದೆಯೂ ನೋರಾ ಫತೇಹಿ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ಮಾಡಿತ್ತು.