Advertisement
ಎಲ್ಲಿದೆ ಈ ಹಳ್ಳಿ :ಈ ಗ್ರಾಮ ಇರುವುದು ಒಡಿಶಾದ ಧೆಂಕನಲ್ ಜಿಲ್ಲೆಯ ಬೆಂಟಸಾಲಿಯಾ ಗ್ರಾಮದಲ್ಲಿ ಇಲ್ಲಿ ಸುಮಾರು ಅರುವತ್ತು ಮನೆಗಳಿದ್ದು ಯಾರೊಬ್ಬರೂ ಮಾಂಸಾಹಾರ ಸೇವನೆ ಮಾಡುವುದಿಲ್ಲ. ಮನೆಮಂದಿ ಎಲ್ಲರೂ ಕಟ್ಟುನಿಟ್ಟಾಗಿ ಸಸ್ಯಾಹಾರವನ್ನೇ ಸೇವನೆ ಮಾಡುತ್ತಾರೆ.
ಈ ಗ್ರಾಮದ ಜನರು ಪ್ರತಿಯೊಬ್ಬರೂ ಸಸ್ಯಾಹಾರಿಗಳು ಒಂದು ವೇಳೆ ಅಪ್ಪಿ ತಪ್ಪಿ ಯಾವುದೇ ಮನೆಯಲ್ಲಿ ಮಾಂಸಾಹಾರ ಮಾಡಿದರು ಎಂದಾದರೆ ಆ ಮನೆಯಲ್ಲಿ ಏನಾದರೂ ತೊಂದರೆ ಎದುರಾಗುತ್ತದೆ ಅಥವಾ ಮನೆಯ ಯಾವುದೇ ಒಬ್ಬ ಸದಸ್ಯ ಹಾವಿನ ಕಡಿತಕ್ಕೆ ಒಳಗಾಗುತ್ತಾನೆ, ಇಲ್ಲದಿದ್ದರೆ ಮನೆಮಂದಿ ಯಾವುದಾದರು ಅಪವಾದಕ್ಕೆ ಒಳಗಾಗುತ್ತಾರೆ ಎಂಬುದು ಈ ಗ್ರಾಮದ ಜನರ ನಂಬಿಕೆ. ಹಾಗಾಗಿ ಗ್ರಾಮದಲ್ಲಿ ಮದುವೆ ಸೇರಿದಂತೆ ಇನ್ನಿತರ ಯಾವುದೇ ಸಮಾರಂಭಗಳು ನಡೆದರೂ ಮಾಂಸಾಹಾರ ಮಾಡುವುದಿಲ್ಲ. ಅಂಗನವಾಗಿಯಲ್ಲೂ ಮಕ್ಕಳಿಗೆ ಮೊಟ್ಟೆ ಕೊಡಲ್ಲ:
ಈ ಗ್ರಾಮದಲ್ಲಿರುವ ಜನರ ನಂಬಿಕೆಯಿಂದಾಗಿ ಇಲ್ಲಿನ ಅಂಗನವಾಡಿ ಕೇಂದ್ರದಲ್ಲೂ ಮಕ್ಕಳಿಗೆ ಮೊಟ್ಟೆ ಕೊಡುವ ಬದಲಿಗೆ ಬಾಳೆಹಣ್ಣು ನೀಡಲಾಗುತ್ತದೆ, ಮೊಟ್ಟೆ ಕೊಟ್ಟರೆ ಅದರಿಂದ ಕೆಡುಕಾಗುತ್ತದೆ ಎಂಬುದು ಜನರ ನಂಬಿಕೆ.
Related Articles
Advertisement
ಸಾಕು ಪ್ರಾಣಿಗಳು ಕೂಡ:ಈ ಗ್ರಾಮದಲ್ಲಿರುವ ನಾಯಿ, ಬೆಕ್ಕು ಸೇರಿದಂತೆ ಸಾಕು ಪ್ರಾಣಿಗಳು ಕೂಡ ಸಸ್ಯಾಹಾರವನ್ನೇ ಸೇವನೆ ಮಾಡುತ್ತವೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಇಲ್ಲಿನ ಗ್ರಾಮದ ಜನರ ಮುಖ್ಯ ಉದ್ಯೋಗ ಕೃಷಿಯೇ ಹೊರತು ಬೇರೇನೂ ಇಲ್ಲ. ನಂಬಿಕೊಂಡು ಬಂದ ನಂಬಿಕೆ:
ಈ ಕುರಿತು ಇದೇ ಗ್ರಾಮದ ನಿವಾಸಿಯಾಗಿರುವ ತಾರಾಬತಿ ದಾಶ್ ಅವರು ನಮ್ಮ ಪೂರ್ವಜರು ಈ ನಂಬಿಕೆಯನ್ನು ನಂಬಿಕೊಂಡು ಬಂದಿದ್ದಾರೆ, ನಾವು ಇದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ ಅಷ್ಟು ಮಾತ್ರವಲ್ಲದೆ ಉದ್ಯೋಗ ಹಾಗೂ ಉನ್ನತ ಶಿಕ್ಷಣ ಪಡೆಯಲು ಪರ ಊರಿಗೆ ಹೋದ ಮಂದಿ ಈ ಸಂಪ್ರದಾಯವನ್ನು ಅಳವಡಿಸಲು ಪ್ರಯತ್ನಿಸುತ್ತಾರೆ ಎಂದು ಹೇಳುತ್ತಾರೆ. ಇದೇ ಗ್ರಾಮದ ಅರ್ಚಕರೊಬ್ಬರು ಹೇಳುವಂತೆ ಅನಾದಿಕಾಲದಿಂದಲೂ ನಮ್ಮ ಗ್ರಾಮದಲ್ಲಿ ಜನ ಸಸ್ಯಾಹಾರ ಸೇವನೆ ಮಾಡಿಕೊಂಡು ಬರುತ್ತಿದ್ದಾರೆ, ಒಂದು ವೇಳೆ ಬೇರೆ ಗ್ರಾಮದ ಹೆಣ್ಣು ಮಗಳು ನಮ್ಮ ಗ್ರಾಮಕ್ಕೆ ಮದುವೆಯಾಗಿ ಬಂದರೆ ನಮ್ಮದೇ ಗ್ರಾಮದ ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು, ನಾವೆಲ್ಲರೂ ಈ ಸಂಪ್ರದಾಯವನ್ನು ಹಿಂದಿನಿಂದಲೂ ಅಳವಡಿಸಿಕೊಂಡು ಬಂದಿದ್ದೇವೆ ಹಾಗಾಗಿ ಮುಂದೆ ಬರುವ ಪೀಳಿಗೆಯು ಇದನ್ನು ಅನುಸರಿಸಿಕೊಂಡು ಹೋಗಬೇಕು ಎಂದು ಹೇಳುತ್ತಾರೆ. ಈ ಗ್ರಾಮದ ಇನ್ನೋರ್ವ ನಿವಾಸಿಯಾಗಿರುವ ಶಶಿ ಪ್ರವ ದಾಸ್ ಹೇಳುವಂತೆ “ನಾವು ಗೋಪಾಲ್ ವೈಷ್ಣವ್ ವಂಶಕ್ಕೆ ಸೇರಿದವರು. ನಾವು ಮಾಂಸಾಹಾರ ಸೇವನೆ ಮಾಡಿದರೆ ನಮ್ಮ ಕಣ್ಣು ಮತ್ತು ಕಿವಿಗಳು ನಿಷ್ಕ್ರಿಯವಾಗುತ್ತದೆ. ಅಲ್ಲದೆ ಯಾರಾದರೂ ಗ್ರಾಮಕ್ಕೆ ಮಾಂಸಾಹಾರ ತಂದರೆ ಹಾವುಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಗ್ರಾಮದಲ್ಲಿ ಏನೋ ಅನಾಚಾರವಾಗಿದೆ ಎಂಬ ಮುನ್ಸೂಚನೆ ಸಿಗುತ್ತದೆ, ಇದು ನಾವು ಕಣ್ಣಾರೆ ಕಂಡಿದ್ದೇವೆ ಎಂದು ಹೇಳುತ್ತಾರೆ. ವೈಷ್ಣವ್ ಸಮುದಾಯದವರೇ ಹೆಚ್ಚು:
ಬೆಂಟಸಾಲಿಯಾ ಗ್ರಾಮದಲ್ಲಿ ೪೦೦ ಮಂದಿಯನ್ನು ಹೊಂದಿದ ಅರುವತ್ತು ಕುಟುಂಬಗಳಿದ್ದು ಇಲ್ಲಿ ಇರುವ ಹೆಚ್ಚಿನ ಕುಟುಂಬಗಳು ವೈಷ್ಣವ್ ಸಮುದಾಯಕ್ಕೆ ಸೇರಿದಾಗಿದ್ದು ಇವರು ಮೊದಲಿನಿಂದಲೂ ಸಸ್ಯಾಹಾರವನ್ನೇ ಸೇವನೆ ಮಾಡುವವರಾಗಿದ್ದಾರೆ. ಅಲ್ಲದೆ ಹೋಮ, ಹವನ ಮಾಡಿಕೊಂಡು ಬಂದಿರುವ ಕುಟುಂಬ ಆಗಿರುವುದರಿಂದ ಸಸ್ಯಾಹಾರವನ್ನೇ ಅವಲಂಬಿತರಾಗಿದ್ದಾರೆ. ಅಲ್ಲದೆ ವಿದ್ಯಾಭ್ಯಾಸ, ಕೆಲಸಕ್ಕಾಗಿ ಹೊರ ದೇಶಗಳಿಗೆ ಹೋದ ಮಂದಿ ಅಲ್ಲೂ ಸಸ್ಯಾಹಾರವನ್ನೇ ಸೇವನೆ ಮಾಡುತ್ತಾರೆ. ಮೀನು ತರಲು ಹೋದ ವ್ಯಕ್ತಿಗೆ ಕಚ್ಚಿದ ಹಾವು:
ಹಳ್ಳಿಯಲ್ಲಿ ಈ ಪದ್ಧತಿ ಯಾವಾಗ ಮತ್ತು ಹೇಗೆ ಪ್ರಾರಂಭವಾಯಿತು ಎಂಬುದು ಯಾರಿಗೂ ಗೊತ್ತಿಲ್ಲ ಆದರೆ ದಂತಕಥೆಯ ಪ್ರಕಾರ ಹಿಂದೆ ದಲಿತ ವ್ಯಕ್ತಿಯೊಬ್ಬ ತಮ್ಮ ಕುಟುಂಬದ ಸದಸ್ಯರೊಬ್ಬರ ಮದುವೆ ಸಮಾರಂಭಕ್ಕೆ ಮಾಂಸಾಹಾರ ಅಡುಗೆ ಮಾಡಲು ಮೀನು ತರಲು ಹೋಗಿದ್ದ ಹಾಗೆ ಮೀನು ತರುತ್ತಿದ್ದ ವೇಳೆ ಆ ವ್ಯಕ್ತಿಗೆ ಹಾವು ಕಚ್ಚಿ ಮೃತಪಟ್ಟಿದ್ದರು, ಅಂದಿನಿಂದ ಈ ಗ್ರಾಮದ ಜನರಲ್ಲಿ ಮಾಂಸಾಹಾರ ತಂದಿದ್ದೆ ವ್ಯಕ್ತಿಯ ಸಾವಿಗೆ ಕಾರಣ ಎಂದು ಜನ ನಂಬಲು ಶುರು ಮಾಡಿದ್ದಾರೆ, ಅಂದಿನಿಂದ ಗ್ರಾಮಕ್ಕೆ ಯಾರಾದರೂ ಮಾಂಸಾಹಾರ ತಂದರೆ ಕೆಡುಕಾಗುತ್ತದೆ, ಅಥವಾ ಹಾವಿನ ಕಡಿತಕ್ಕೆ ಒಳಗಾಗುತ್ತಾರೆ ಎಂಬ ನಂಬಿಕೆ ಮನಸ್ಸಿನಲ್ಲಿ ಬೇರೂರಿದೆ. – ಸುಧೀರ್ ಪರ್ಕಳ