Advertisement

ಸಬ್ಸಿಡಿ ರಹಿತ ಎಲ್‌ಪಿಜಿ ದರ 120 ರೂ. ಇಳಿಕೆ

12:30 AM Jan 01, 2019 | Team Udayavani |

ಹೊಸದಿಲ್ಲಿ: ಸಬ್ಸಿಡಿ ರಹಿತ ಮತ್ತು ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್‌ ದರಗಳನ್ನು ಕೇಂದ್ರ ಸರಕಾರ ಸೋಮವಾರ ಗಮನಾರ್ಹವಾಗಿ ಇಳಿಕೆ ಮಾಡಿದೆ. ಸಬ್ಸಿಡಿ ರಹಿತ ಎಲ್‌ಪಿಜಿ ದರ ಪ್ರತಿ ಸಿಲಿಂಡರ್‌ಗೆ 120.50 ರೂ. ಹಾಗೂ ಸಬ್ಸಿಡಿ ಸಹಿತ ಎಲ್‌ಪಿಜಿ ದರ ಪ್ರತಿ ಸಿಲಿಂಡರ್‌ಗೆ 5.91 ರೂ. ಇಳಿಕೆ ಮಾಡಿದೆ. ಇದು ಕಳೆದ ಒಂದು ತಿಂಗಳಲ್ಲೇ ಎರಡನೇ ಇಳಿಕೆಯಾಗಿದೆ. ಡಿ. 1ರಂದು ಸಬ್ಸಿಡಿ ರಹಿತ ಸಿಲಿಂಡರ್‌ ದರವನ್ನು 133 ರೂ. ಇಳಿಕೆ ಮಾಡಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ ಹಾಗೂ ರೂಪಾಯಿ ಮೌಲ್ಯ ಏರಿಕೆಯಿಂದಾಗಿ ಬೆಲೆ ಇಳಿಕೆ ಸಾಧ್ಯವಾಗಿದೆ. ಕಳೆದ ಜೂನ್‌ನಿಂದ ಆರು ತಿಂಗಳಲ್ಲಿ ಸತತವಾಗಿ ಏರಿಕೆ ಮಾಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next