ನವದೆಹಲಿ: ಜಿಲ್ಲಾ ಮತ್ತು ರಾಜ್ಯ ಗ್ರಾಹಕ ವಿವಾದಗಳ ಇತ್ಯರ್ಥ ಆಯೋಗಕ್ಕೆ ನೇಮಕಾತಿಗಳನ್ನು ಮಾಡದಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಸರ್ವೋಚ್ಚ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಸ್ವಪ್ರೇರಣೆಯಿಂದ ತಾನೇ ಪ್ರಕರಣ ದಾಖಲಿಸಿಕೊಂಡಿರುವ ಸರ್ವೋಚ್ಚ ಪೀಠ, ಒಂದು ವೇಳೆ ಕೇಂದ್ರಕ್ಕೆ ನ್ಯಾಯಾಧಿಕರಣಗಳು ಬೇಕಿಲ್ಲವೆನ್ನಿಸಿದರೆ ಆ ಕಾಯ್ದೆಯನ್ನೇ ರದ್ದು ಮಾಡಲಿ ಎಂದು ಕಿಡಿಕಾರಿದೆ.
ನಮ್ಮ ಪರಿಮಿತಿಯನ್ನು ಮೀರಿ ಖಾಲಿಯಿರುವ ಹುದ್ದೆಗಳು ಭರ್ತಿಯಾಗಿವೆಯೇ ಎಂದು ನಾವು ನೋಡುತ್ತಿದ್ದೇವೆ. ಇಂತಹ ವಿಷಯಗಳಿಗೂ ನ್ಯಾಯಾಂಗವೇ ತಲೆಹಾಕಬೇಕಾಗಿ ಬಂದಿರುವುದು ಬೇಸರದ ಸಂಗತಿ. ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ ಎಂದು ದ್ವಿಸದಸ್ಯ ಪೀಠ ಹೇಳಿದೆ.
ಇದನ್ನೂ ಓದಿ:ಉದ್ಯೋಗಸ್ಥರ ಸಂಖ್ಯೆಯಲ್ಲಿ ಭಾರೀ ಏರಿಕೆ
ಗ್ರಾಹಕ ಆಯೋಗದ ಜಿಲ್ಲಾ ಮತ್ತು ರಾಜ್ಯಾಧ್ಯಕ್ಷರು, ಸದಸ್ಯರು, ಸಿಬ್ಬಂದಿಯನ್ನು ನೇಮಕ ಮಾಡದಿರುವ ಕುರಿತು ಸರ್ವೋಚ್ಚ ಪೀಠ ತಾನೇ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.
ಆ.11ರಂದು ಕೇಂದ್ರಕ್ಕೆ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿ ಎಂದು ಸೂಚಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.