Advertisement

ನಾನ್‌ ಸಿಆರ್‌ಝಡ್‌ : ಪ್ರತ್ಯೇಕ ಮರಳು ನೀತಿ ಚರ್ಚೆ

11:39 PM Nov 10, 2022 | Team Udayavani |

ಉಡುಪಿ: ಕರಾವಳಿ ಭಾಗದ ನಾನ್‌ ಸಿ.ಆರ್‌.ಝಡ್‌. ವ್ಯಾಪ್ತಿಗೆ ಪ್ರತ್ಯೇಕ ಮರಳು ನೀತಿ ರಚಿಸುವುದರ ಸಹಿತ ಹಲವು ವಿಷಯಗಳ ಕುರಿತು ಗುರುವಾರ ವಿಧಾನಸೌಧದಲ್ಲಿ ನಡೆದ ಸರಕಾರಿ ಭರವಸೆಗಳ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದೆ.

Advertisement

ಸಮಿತಿಯ ಅಧ್ಯಕ್ಷ ಶಾಸಕ ರಘುಪತಿ ಭಟ್‌ ಅಧ್ಯಕ್ಷತೆಯಲ್ಲಿ ಸಭೆ ನಡೆದ ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗೆ ಸಂಬಂಧಿಸಿದ ಬಾಕಿ ಇರುವ ಭರವಸೆಗಳ ಬಗ್ಗೆ ಸುದೀರ್ಘ‌ವಾದ ಚರ್ಚೆ ನಡೆಯಿತು. ಮರಳಿಗೆ ಸಂಬಂಧಿಸಿ ವಿಷಯ ಪ್ರಸ್ತಾವಿಸಿದ ಶಾಸಕರು, ಕರಾವಳಿ ಭಾಗದ ನಾನ್‌ ಸಿ.ಆರ್‌.ಝಡ್‌. ವ್ಯಾಪ್ತಿಗೆ ಪ್ರತ್ಯೇಕ ಮರಳು ನೀತಿ ರಚಿಸುವುದು, ಸಿ.ಆರ್‌.ಝಡ್‌. ವ್ಯಾಪ್ತಿಯಲ್ಲಿ ತತ್‌ಕ್ಷಣ ಮರಳುಗಾರಿಕೆ ಪ್ರಾರಂಭಿಸುವುದು ಹಾಗೂ ಮುಳುಗಿ ಮರಳು ತೆಗೆಯುವ ಸಾಂಪ್ರದಾಯಿಕ ಮರಳು ಪದ್ಧತಿಗೆ ಅವಕಾಶ ಕಲ್ಪಿಸುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ತತ್‌ಕ್ಷಣ ಈ ಎಲ್ಲ ಪ್ರಕ್ರಿಯೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಡಾ| ರಮಣ ರೆಡ್ಡಿ, ಕಾರ್ಯದರ್ಶಿ ಪಂಕಜ್‌ ಕುಮಾರ್‌ ಪಾಂಡೆ, ಕೆಐಎಡಿಬಿ ಸಿಇಒ ಆರ್‌. ಗಿರೀಶ್‌, ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ., ಉ.ಕ. ಜಿಲ್ಲಾಧಿಕಾರಿ ಪ್ರಭುಲಿಂಗ ಕಾವಳಕಟ್ಟಿ, ದ.ಕ. ಜಿಲ್ಲಾಧಿಕಾರಿ ಎಂ.ಆರ್‌. ರವಿಕುಮಾರ್‌ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next