Advertisement

ನಗದುರಹಿತ ವ್ಯವಹಾರ ಆಂದೋಲನ

01:13 PM Feb 26, 2017 | Team Udayavani |

ಧಾರವಾಡ: ನಗದು ರಹಿತ ವ್ಯವಹಾರ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಮಾಡಿ, ಆಡಳಿತದಲ್ಲಿ ಪಾರದರ್ಶಕತೆ ತರಲು ಸಾಧ್ಯವಿದೆ. ಅದಕ್ಕಾಗಿ ನಗದು ರಹಿತ ವ್ಯವಹಾರ ಜನಾಂದೋಲನ ಆಗಬೇಕಿದೆ ಎಂದು ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲೀಕರಣ ರಾಜ್ಯ ಸಚಿವ ರಮೇಶ ಜಿಗಜಿಣಗಿ ಹೇಳಿದರು. 

Advertisement

ಭಾರತ ಸರಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯ, ನೀತಿ ಆಯೋಗ, ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ಇಲ್ಲಿನ ಡಾ|ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಿಜಿಧನ್‌ ಮೇಳ ಉದ್ಘಾಟಿಸಿ ಅವರು ಮಾತನಾಡಿ, ಕಪ್ಪು ಹಣ,ಭ್ರಷ್ಟಾಚಾರ ನಿರ್ಮೂಲನೆಗೆ ಡಿಜಿಟಲ್‌ ವ್ಯವಹಾರ ಅವಶ್ಯವಾಗಿದೆ ಎಂದರು. 

ಈಗ ಪುನಃ ನಗದು ರಹಿತ ವ್ಯವಹಾರ ಪೊÅàತ್ಸಾಹಿಸಲು ನೀತಿ ಆಯೋಗ 150 ಕೋಟಿ ರೂ.ಗಳನ್ನು ಲಕ್ಕಿ ಗ್ರಾಹಕ ಯೋಜನೆಯಡಿ ಬಹುಮಾನ ವಿತರಿಸಲು ಮೀಸಲಿಟ್ಟಿದೆ. ಜನಧನ್‌ ಯೋಜನೆಯ ಮೂಲಕ 25 ಕೋಟಿ ಬ್ಯಾಂಕ್‌ ಖಾತೆಗಳನ್ನು ತೆರೆಯಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ. ಬ್ಯಾಂಕ್‌ ಅಧಿಕಾರಿಗಳು ಬಡ ರೈತರು, ಗ್ರಾಹಕರು ಬಂದಾಗ ಅವರನ್ನು ವಾಪಸು ಕಳುಹಿಸದೇ ಖಾತೆ ತೆರೆಯಲು ಪೊÅàತ್ಸಾಹಿಸಿ ಎಂದು ಸಲಹೆ ನೀಡಿದರು.

ಡಿಜಿ ಧನ್‌ ಮೇಳಗಳ ಮೂಲಕ ದೇಶದ ಆಯ್ದ ನೂರು ನಗರಗಳಲ್ಲಿ ಕಾರ್ಯಕ್ರಮ ನಡೆಸಿ, ಜನಜಾಗೃತಿ ಮೂಡಿಸಲಾಗುತ್ತಿದೆ. ಡಿಜಿಟಲ್‌ ಪಾವತಿ, ಉದ್ದೇಶಗಳನ್ನು ಜನರಿಗೆ ತಿಳಿಸಿ, ಅದರ ಅನುಷ್ಠಾನದ ಸರಳ ವಿಧಾನಗಳನ್ನು ತಿಳಿಸಿಕೊಡಲು ಡಿಜಿ ಧನ್‌  ಮೇಳಗಳು ಸಹಕಾರಿಯಾಗಿವೆ. ಈಗಾಗಲೇ 60 ಕ್ಕೂ ಹೆಚ್ಚು ಮೇಳಗಳು ದೇಶಾದ್ಯಂತ ನಡೆದಿವೆ. ಒಟ್ಟು ನೂರು ನಗರಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು. 

ಅತಿಥಿ, ವಿಧಾನಸಭೆ ವಿಪಕ್ಷದ ನಾಯಕ ಜಗದೀಶ ಶೆಟ್ಟರ್‌ ಮಾತನಾಡಿ, ದೇಶದಲ್ಲಿ ಆಮೂಲಾಗ್ರ ಬದಲಾವಣೆ ಬರಬೇಕಾದಲ್ಲಿ ದೇಶದ ಬಡತನವೂ ಮೊದಲು ನಿರ್ಮೂಲನೆ ಆಗಬೇಕು. ಪರಿಣಾಮಕಾರಿ ಯೋಜನೆಗೆ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಕೈ ಜೋಡಿಸಬೇಕು. ಇಂಥ ಬದಲಾವಣೆಗೆ  ಸಾರ್ವಜನಿಕರು ಸಹಕಾರ ನೀಡಬೇಕು. ಈ ಮೂಲಕ ಕಪ್ಪ ಹಣ ಹಾಗೂ ಭ್ರಷ್ಟತೆಗೆ ತೆರೆ ಎಳೆಯಬೇಕಿದೆ ಎಂದರು.

Advertisement

ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಡಿಜಿಟಲ್‌ ವ್ಯವಹಾರವು ಜನಾಂದೋಲನವಾಗಿ ಪರಿವರ್ತನೆಯಾಗಬೇಕು. ಇದರಿಂದ ದೇಶದಅಮೂಲಾಗ್ರ ಬದಲಾವಣೆ ,ಬಡತನ ನಿರ್ಮೂಲನೆ ಸಾಧ್ಯವಿದೆ. ಭಾರತ   ವೇಗವಾಗಿ ಆರ್ಥಿಕಾಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿ ಬೆಳೆಯುತ್ತಿದೆ ಎಂದರು. ದೇಶದಲ್ಲಿ 63ನೇ ಡಿಜಿಧನ್‌ ಮೇಳ ಇದಾಗಿದೆ. 11 ಲಕ್ಷ ಗ್ರಾಹಕರು ಇದರಲ್ಲಿ ಭಾಗಿಯಾಗಿದ್ದಾರೆ. 160 ಕೋಟಿ ಹಣ ಬಹುಮಾನ ನೀಡಿದೆ.

ಪ್ರತಿದಿನ ರೂ. 1,000 ದಂತೆ 15 ಸಾವಿರ ಜನರಿಗೆ ಬಹುಮಾನದ ಹಣ ನೀಡಲಾಗಿದೆ ಎಂದು ತಿಳಿಸಿದರು ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ, ನೀತಿ ಆಯೋಗದ ನಿರ್ದೇಶಕ ಎನ್‌. ಕೆ.ಸಂತೋಷಿ, ಭಾರತ ಸರಕಾರ ಇಲೆಕ್ಟ್ರಾನಿಕ್‌ ಡಿಲೆವರಿ ಆಫ್‌ ಸಿಟಿಜನ್‌ ಸರ್ವಿಸಸ್‌ ನಿರ್ದೇಶಕ  ಡಾ|ಸುನೀಲ ಪನ್ವರ್‌, ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ವಿಜಯಕುಮಾರ್‌ ಇದ್ದರು. ಜಿಲ್ಲಾಧಿಕಾರಿ ಡಾ| ಎಸ್‌.ಬಿ.ಬೊಮ್ಮನಹಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next