Advertisement

ಆನಂದ್‌ಸಿಂಗ್‌ಗೆ ಜಾಮೀನು ರಹಿತ ವಾರೆಂಟ್‌

01:49 AM Mar 16, 2019 | |

ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪ ಪ್ರಕರಣದಲ್ಲಿ ಶಾಸಕರಾದ ಆನಂದ್‌ಸಿಂಗ್‌ ಹಾಗೂ ಬಿ. ನಾಗೇಂದ್ರಗೆ ಜಾಮೀನು ರಹಿತ ವಾರೆಂಟ್‌ ಹೊರಡಿಸಿ ಜನಪ್ರತಿನಿಧಿಗಳ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ. 2013ರಲ್ಲಿ ಬಳ್ಳಾರಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಎಸ್‌ಐಟಿ ಸಲ್ಲಿಸಿರುವ ದೋಷಾರೋಪ ಪಟ್ಟಿ ಅನ್ವಯ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

Advertisement

ಪ್ರಕರಣದ ಇತರ ಆರೋಪಿಗಳಾದ ಮಾಜಿ ಸಚಿವ ಜನಾರ್ದನ ರೆಡ್ಡಿ, ಸುರೇಶ್‌ಬಾಬು, ರೆಡ್ಡಿ ಆಪ್ತ ಆಲಿಖಾನ್‌ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆಗೆ ಹಾಜರಾಗಲು ಸಮನ್ಸ್‌ ನೀಡಿದ್ದರೂ ಆನಂದ್‌ಸಿಂಗ್‌ ಹಾಗೂ ನಾಗೇಂದ್ರ ಗೈರು ಹಾಜರಾಗಿದ್ದರು. ಆರೋಪಿ ಶಾಸಕರ ಗೈರುಹಾಜರಿಗೆ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಾಲಯ, ಇಬ್ಬರ ವಿರುದ್ಧವೂ ಜಾಮೀನು ರಹಿತ ವಾರೆಂಟ್‌ ಜಾರಿಗೊಳಿಸಿ ಮಾ. 18ಕ್ಕೆ ವಿಚಾರಣೆ ಮುಂದೂಡಿದೆ

Advertisement

Udayavani is now on Telegram. Click here to join our channel and stay updated with the latest news.

Next