Advertisement

ನಟ ಸಂಜಯ್‌ ದತ್‌ ವಿರುದ್ಧ ಜಾಮೀನು ರಹಿತ ಅರೆಸ್ಟ್‌ ವಾರಂಟ್‌ ಜಾರಿ

07:47 PM Apr 15, 2017 | Team Udayavani |

ಮುಂಬಯಿ : ಈಚೆಗಷ್ಟೇ ಮುಂಬಯಿ ಸರಣಿ ಬಾಂಬ್‌ ಸ್ಫೋಟದ ಅಪರಾಧಿಯಾಗಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದ  ಬಾಲಿವುಡ್‌ ನಟ ಸಂಜಯ್‌ ದತ್‌ ಗೆ ಇದೀಗ ಹೊಸ ಸಂಕಷ್ಟ ಎದುರಾಗಿದೆ. ಚೆಕ್‌ ಬೌನ್ಸ್‌ ಕೇಸ್‌ನಲ್ಲಿ ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗುವುದನ್ನು ತಪ್ಪಿಸಿಕೊಂಡಿರುವ ಸಂಜಯ್‌ ದತ್‌ ವಿರುದ್ಧ ನ್ಯಾಯಾಲಯವು ಜಾಮೀನು ರಹಿತ ವಾರಂಟ್‌ ಜಾರಿ ಮಾಡಿದೆ.

Advertisement

ಎಎನ್‌ಐನಲ್ಲಿ ಮಾಡಲಾಗಿರುವ ಟ್ವೀಟ್‌ ಪ್ರಕಾರ ನಟ ಸಂಜಯ್‌ ದತ್‌ ಚಿತ್ರ ನಿರ್ಮಾಪಕ ಶಕೀಲ್‌ ನೂರಾನಿಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ. 

ವರದಿಯಾಗಿರುವಂತೆ ನಟ ಸಂಜಯ್‌ ದತ್‌ ಅವರು ನೂರಾನಿ ಅವರ ಒಂದು ಚಿತ್ರದಲ್ಲಿ ನಟಿಸಲು 50 ಲಕ್ಷ ರೂ. ಚಾರ್ಜ್‌ ಮಾಡಿದ್ದರು. ಆದರೆ ಸಿನೇಮಾ ಚಿತ್ರೀಕರಣವನ್ನು ಮಾಡಿ ಕೊಟ್ಟಿರಲಿಲ್ಲ.

ಕೆಲವು ವರದಿಗಳ ಪ್ರಕಾರ ಸಂಜಯ್‌ ದತ್‌ ಅವರು ನೂರಾನಿ ಅವರ ಚಿತ್ರಕ್ಕೆ ಕೇವಲ ಎರಡು ದಿನಗಳ ಶೂಟಿಂಗ್‌ನಲ್ಲಿ ಮಾತ್ರವೇ ಭಾಗಿಯಾಗಿದ್ದರು. ತತ್‌ಪರಿಣಾಮವಾಗಿ ಆತ ನೂರಾನಿಗೆ 1 ಕೋಟಿ ರೂ. ಪಾವತಿಸಬೇಕಾಗಿತ್ತು. 

Advertisement

ಹೆಚ್ಚಿನ ವಿವರಗಳನ್ನು ಎದುರು ನೋಡಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next