Advertisement

ಶಾಸಕ ಆನಂದ್‌ ಸಿಂಗ್‌, ನಾಗೇಂದ್ರಗೆ ಜಾಮೀನು ರಹಿತ ವಾರೆಂಟ್‌

06:40 AM Oct 04, 2018 | |

ಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಇಬ್ಬರು ಕಾಂಗ್ರೆಸ್‌ ಶಾಸಕರು ಸೇರಿದಂತೆ ಮೂವರಿಗೆ ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಿದೆ.

Advertisement

ಬಳ್ಳಾರಿಯ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಆನಂದ್‌ ಸಿಂಗ್‌, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಮತ್ತು ಆನಂದ್‌ಸಿಂಗ್‌ ಸಂಬಂಧಿ ಶ್ಯಾಮರಾಜ್‌ ಸಿಂಗ್‌ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾ. ಬಿ.ವಿ.ಪಾಟೀಲ… ವಾರೆಂಟ್‌ ಜಾರಿ ಮಾಡಿದ್ದಾರೆ.

ಪ್ರಕರಣದ ಆರೋಪಿ ಸ್ಥಾನದಿಂದ ಕೈಬಿಡುವಂತೆ ಆನಂದ್‌ ಸಿಂಗ್‌ ಕೋರ್ಟ್‌ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಅರ್ಜಿ ವಜಾಗೊಳಿಸಿ, ಖುದ್ದು ಹಾಜರಾಗುವಂತೆ ಆರೋಪಿಗಳಿಗೆ ಸಮನ್ಸ್‌ ಜಾರಿ ಮಾಡಿದ್ದರು. ಆದರೆ ಈ ಪ್ರಕರಣ ಸಂಬಂಧ 11 ಆರೋಪಿಗಳ ಪೈಕಿ 9 ಆರೋಪಿಗಳು ಮಾತ್ರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಮೂವರು ಆರೋಪಿಗಳಾದ ನಾಗೇಂದ್ರ, ಆನಂದ್‌ ಸಿಂಗ್‌ ಮತ್ತು ಶ್ಯಾಮರಾಜ್‌ ಸಿಂಗ್‌ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಆ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರೆಂಟ್‌ ಹೊರಡಿಸಲಾಗಿದೆ.

2009ರಲ್ಲಿ ಆನಂದ್‌ಸಿಂಗ್‌ ಒಡೆತನದ ವೈಷ್ಣವಿ ಮಿನರಲ್ಸ… ಕಂಪೆನಿಯಿಂದ ಅದಿರನ್ನು ಸಿಂಗಾಪುರ ಮತ್ತು ಚೀನಾಕ್ಕೆ ಅಕ್ರಮವಾಗಿ ಸಾಗಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ನಾಗೇಂದ್ರ ಒಡೆತನದ ಕಂಪೆನಿಯು ಈ ಅಕ್ರಮದಲ್ಲಿ ಭಾಗಿಯಾಗಿದೆ ಎಂಬ ಆರೋಪ ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next