Advertisement

“ನೊಮೊಫೋಬಿಯಾ’ಗೆ ವರ್ಷದ ಪದ ಹೆಗ್ಗಳಿಕೆ

06:00 AM Dec 02, 2018 | |

ನವದೆಹಲಿ: ಜಗದ್ವಿಖ್ಯಾತ ಕೇಂಬ್ರಿಜ್‌ ಆಂಗ್ಲ ನಿಘಂಟು ಆಡಳಿತ ಮಂಡಳಿ, ಹೊಸದಾಗಿ ರೂಪುಗೊಂಡಿರುವ “ನೊಮೊಫೋಬಿಯಾ’ ಎಂಬ ಪದವನ್ನು ವರ್ಷದ ಪದವೆಂದು ಘೋಷಿಸಿದೆ. “ನೊಮೋಫೋಬಿಯಾ’ ಎಂದರೆ, “ತನ್ನೊಂದಿಗೆ ಮೊಬೈಲ್‌ ಇಲ್ಲವೆಂದು ಅರಿವಿಗೆ ಬಂದಾಗ ಅಥವಾ ಮೊಬೈಲ್‌ ಬಳಸಲು ಯೋಗ್ಯವಲ್ಲದ ಸ್ಥಿತಿಯಲ್ಲಿದ್ದಾಗ ವ್ಯಕ್ತಿ ಯೊಬ್ಬ ಅನುಭವಿಸುವ ಭೀತಿ’ ಎಂದು ವ್ಯಾಖ್ಯಾನಿಸಲಾಗಿದೆ. 

Advertisement

ವರ್ಷದ ಪದವೆಂಬ ಹೆಗ್ಗಳಿಕೆಗೆ ಪಾತ್ರವಾಗಲು “ಜೆಂಡರ್‌ ಗ್ಯಾಪ್‌’, “ಎಕೋಸೈಡ್‌’, ನೋ-ಪ್ಲಾಟ್‌ಫಾರ್ಮಿಂಗ್‌’ ಎಂಬಿ ತ್ಯಾದಿ ಹೊಸ ಪದಗಳು “ನೊಮೊಫೋಬಿಯಾ’ಕ್ಕೆ ತೀವ್ರ ಸ್ಪರ್ಧೆಯೊಡ್ಡಿದ್ದವು. ಹಾಗಾಗಿ, ನಿಘಂಟುವಿನ ಆಡಳಿತ ಮಂಡಳಿ ತನ್ನ ಬ್ಲಾಗ್‌ ಓದುಗರಿಗೆ ಈ ಪದಗಳಲ್ಲೊಂದನ್ನು ವರ್ಷದ ಪದವಾಗಿ ಆಯ್ಕೆ ಮಾಡುವಂತೆ ಸೂಚಿಸಿತ್ತು. ಇದರನ್ವಯ ಬ್ಲಾಗ್‌ ಓದು ಗರು ಆನ್‌ಲೈನ್‌ನಲ್ಲಿ ನೀಡಿದ ಮತಗಳ ಆಧಾರ ದಲ್ಲಿ “ನೊಮೊ ಫೋಬಿಯಾ’ಕ್ಕೆ ಈ ಹೆಗ್ಗಳಿಕೆ ಸಿಕ್ಕಿದೆ ಎಂದು ಕೇಂಬ್ರಿಜ್‌ ನಿಘಂಟು ಆಡಳಿತ ಮಂಡಳಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next