Advertisement
ಹೌದು, ಎಚ್ ಎಮ್ ಡಿ ಗ್ಲೋಬಲ್ ಮಾಲಿಕತ್ವದ ನೋಕಿಯಾ ಈಗ ನೋಕಿಯಾ 5.4 ಹಾಗೂ ನೋಕಿಯಾ 3.4 ಎಂಬ ತನ್ನ ಎರಡು ಹೊಸ ಸ್ಮಾರ್ಟ ಫೋನ್ ಗಳನ್ನು ಭಾರತದಲ್ಲಿ ಅನಾವರಣಗೊಳಿಸಿದೆ.
Related Articles
Advertisement
“ಈ ಎರಡು ಸ್ಮಾರ್ಟ್ ಫೋನ್ ಗಳ ಮೂಲಕ ನಮ್ಮ ಕಂಪೆನಿಯ ಅಭಿಮಾನಿಗಳ ವೃತ್ತಿಪರ ಹಾಗೂ ವೈಯಕ್ತಿಕ ಬದುಕಿನಲ್ಲಿ ಹೊಸ ಸಾಧ್ಯತೆಗಳನ್ನು ವಿಸ್ತರಿಸಲು ಹೊಸ ಪ್ರತಿಪಾದನೆಯನ್ನು ನಾವು ನೀಡುತ್ತಿದ್ದೇವೆ” ಹಾಗೂ ಅವರ ನಂಬಿಕೆಗೆ ಚಿರಋಣಿಯಾಗಿರುತ್ತೇವೆ” ಎಂದು ಎಚ್ ಎಮ್ ಡಿ ಗ್ಲೋಬಲ್ ನ ಉಪಾಧ್ಯಕ್ಷ ಸನ್ಮಿತ್ ಸಿಂಗ್ ಕೊಚ್ಚರ್ ಹೇಳಿದ್ದಾರೆ.
ನೋಕಿಯಾ 5.4 ರ ವಿಶೇಷತೆಗಳೇನು..?
6.39 ಇಂಚಿನ ಎಚ್ ಡಿ + ಪಂಚ್ ಹೋಲ್ ಡಿಸ್ ಪ್ಲೇ ಯೊಂದಿಗೆ 48 ಎಮ್ ಪಿ ಸಾಮರ್ಥವುಳ್ಳ ಕ್ವಾಡ್ ಕ್ಯಾಮೆರಾ ಹಾಗೂ 16 ಎಮ್ ಪಿ ಸಾಮರ್ಥ್ಯವುಳ್ಳ ಫ್ರಂಟ್ ಕ್ಯಾಮೆರಾವನ್ನೊಳಗೊಂಡಿದೆ. ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 662 ಪ್ರೊಸೆಸರ್ ನ್ನು ಹೊಂದಿ ನೋಡಲು ಆಕರ್ಷಕವಾಗಿದೆ.
ನೋಕಿಯಾ 3.4 ನ ವಿಶೇಷತೆಗಳೇನು..?
ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 460 ಯೊಂದಿಗೆ 6.39 ಇಂಚಿನ ಎಚ್ ಡಿ + ಸ್ಕ್ರೀನ್ ನ್ನು ಹೊಂದಿದೆ.
ಎರಡೂ ಸ್ಮಾರ್ಟ್ ಫೋನ್ ಗಳು ನೋಡಲು ಅತ್ಯಾಕರ್ಷಕವಾಗಿದ್ದು, ಕಂಪೆನಿ ಬಾಳ್ವಿಕೆಯ ಬಗ್ಗೆ ತನ್ನ ಗ್ರಾಹಕರಿಗೆ ಸಂಪೂರ್ಣ ಭರವಸೆಯನ್ನು ನೀಡಿದೆ.
ಓದಿ : ಬದಲಾಗುತ್ತಿದೆ “ಡಾನ್‌ಬಾಸ್ಕೋ’ ರಂಗಮಂದಿರ