Advertisement

ಮಾಸಾಂತ್ಯಕ್ಕೆ ಬರಲಿದೆ ನೋಕಿಯಾ 3310

03:45 AM Apr 07, 2017 | Team Udayavani |

ನವದೆಹಲಿ: ದಶಕಗಳ ಹಿಂದೆ ಬಹುತೇಕ ಸೆಲ್‌ಫೋನ್‌ ಬಳಕೆದಾರರ ಜೇಬುಗಳಲ್ಲಿ ರಿಂಗಣಿಸಿದ್ದ, ಜನಪ್ರಿಯ “ನೋಕಿಯಾ 3310′ ಇದೇ ವರ್ಷ ಮತ್ತೆ ಮಾರುಕಟ್ಟೆಗೆ ದಾಪುಗಾಲಿಡುತ್ತಿದೆ. ಸ‌ಂಸ್ಥೆ ಹೇಳಿರುವ ಪ್ರಕಾರ ಇದೇ ಏಪ್ರಿಲ್‌ ಅಂತ್ಯದ ವೇಳೆಗೆ ಈ ಫೋನ್‌ ಮಲೇಷ್ಯಾದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ. 

Advertisement

3310 ಜತೆಯಲ್ಲೇ, ಸ್ಪೇನ್‌ನ ಬಾರ್ಸೆಲೋನಾದಲ್ಲಿ ನಡೆದ ಮೊಬೈಲ್‌ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಅನಾವರಣಗೊಂಡಿದ್ದ ಆಂಡ್ರಾಯ್ಡ ಆಧರಿತ ನೋಕಿಯಾ 3, 5 ಮತ್ತು 6 ಎಂಬ ಮೂರು ಸ್ಮಾರ್ಟ್‌ಫೋನ್‌ಗಳನ್ನು ಸಂಸ್ಥೆಯು ಮೇ ವೇಳೆಗೆ ಬಿಡುಗಡೆ ಮಾಡಲಿದೆ. 2.4 ಇಂಚಿನ ಕ್ಯುವಿಇಎ ಡಿಸ್‌ಪ್ಲೆ, 2 ಎಂಪಿ ಕ್ಯಾಮೆರಾ ಹೊಂದಿರಲಿರುವ ನೋಕಿಯಾ 3310, ಸುಧಾರಿತ ವೃತ್ತಿಯ “ಸ್ನೇಕ್‌’ ಗೇಮ್‌ ಒಳಗೊಂಡಿರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next