Advertisement
ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಹೇಳುವಂತೆ “ಪುಸ್ತಕ ಹೇಳುವುದು, ತಲೆತಗ್ಗಿಸಿ ನನ್ನ ನೋಡು, ನಿನ್ನನ್ನು ತಲೆ ಎತ್ತಿ ನಿಲ್ಲುವಂತೆ ಮಾಡುತ್ತೇನೆ..” ಜೊತೆಗೆ ಇದ್ದ ಫೋನ್ ಗಳು ಹೇಳುತ್ತವೆ ತಲೆತಗ್ಗಿಸಿ ನನ್ನನ್ನು ನೋಡು, ನಿನ್ನನ್ನು ತಲೆ ಎತ್ತದಂತೆ ಮಾಡುತ್ತೇನೆ !! ಈ ಮಾತು ಇಂದಿಗೆ ಪ್ರಸ್ತುತ.
Related Articles
Advertisement
ಬ್ಲ್ಯಾಕ್ ಅಂಡ್ ವೈಟ್ ಪರದೆ, ದೊಡ್ಡ ದೊಡ್ಡ ಬಟನ್, ಸ್ನೇಕ್ ಗೇಮ್, ಕ್ಲಾಸಿಕ್ ನೋಕಿಯಾ ಟೋನ್. ನೆನಪಾಗುತ್ತಿದೆಯಾ ನೋಕಿಯಾ 1100 ! ಹೇಗೆ ತಾನೇ ಮರೆಯಲು ಸಾಧ್ಯ. ರಿಂಗ್ ಟೋನ್ ಗಳನ್ನೇ ಹಾಡಿನಂತೆ ಪದೇ ಪದೇ ಕೇಳುತ್ತಾ ಸಂತೋಷಪಡುತ್ತಿದ್ದ ದಿನಗಳು ಅವು. ಹಲವು ಜನರು ಮೊಬೈಲ್ ಗೆ ಸಣ್ಣ ದಾರ ಕಟ್ಟಿ ಜೇಬಿನಿಂದ ಹೊರಗೆ ನೇತಾಡುವಂತೆ ಇಟ್ಟುಕೊಳ್ಳುತ್ತಿದ್ದರು. ಆಗ ಮೊಬೈಲ್‌ಗೆ ಇದ್ದದ್ದು ಎರಡೂವರೆ ಸಾವಿರ ರೂಪಾಯಿ.
ಕಾಲೇಜಿನ ಮೆಟ್ಟಿಲು ಏರಿದ್ದ ವಿದ್ಯಾರ್ಥಿಗಳ ಬಳಿ ನೋಕಿಯಾ ಕಂಪನಿಯ 1100, 1600 ಹಾಗು 6600 ಸರಣಿಯ ಮೊಬೈಲ್ ಫೋನ್ ಗಳು ಹೆಚ್ಚಾಗಿ ರಾರಾಜಿಸುತ್ತಿದ್ದವು. ಪ್ರೇಮಿಗಳಿಗೆ ಮೊಬೈಲ್ ಬಂದ ನಂತರವಂತೂ ಸ್ವರ್ಗಕ್ಕೆ ಮೂರೇ ಗೇಣು ಸಿಕ್ಕಂಗಾಗಿತ್ತು. ಟೆಕ್ಸ್ಟ್ ಮೆಸೇಜ್ ಗಾಗಿ ಕಾಯುವುದು, ಫಾರ್ವರ್ಡ್ ಮೆಸೇಜ್ ಕಳುಹಿಸುವುದು ಇವೆಲ್ಲಾ ನಿರಂತರವಾಗಿತ್ತು. ಆಗಿನ ಸ್ನೇಕ್ ಗೇಮ್ ಜಗತ್ಪ್ರಸಿದ್ಧವಾಗಿತ್ತು.
ಈ ಪುಟಾಣಿ ಫೋನುಗಳನ್ನು ಫೀಚರ್ ಫೋನ್ ಗಳೆಂದು ಗುರುತಿಸಲಾಗುತ್ತದೆ. ನೋಕಿಯಾ 1100 ಜಗತ್ತು ಅಭಿವೃದ್ಧಿಯಾಗಲು ಸಹಾಯವಾಗಿತ್ತು. ಇದರ ಫೀಚರ್ ಗಳು ಹಿಂದಿನ 5110, 3210, 3310 ಮಾದರಿಗೆ ಹೋಲುತ್ತದೆ.. 2003ರ ಆಗಸ್ಟ್ 27 ರಲ್ಲಿ ಪ್ರಾರಂಭವಾದಾಗಿನಿಂದ ಈವರೆಗೆ ಪ್ರಪಂಚದಲ್ಲಿ ಅತ್ಯುತ್ತಮವಾಗಿ ಮಾರಾಟವಾದ ಫೋನ್ ಹ್ಯಾಂಡ್ಸೆಟ್ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. ಇದು ಸಾರ್ವಕಾಲಿಕ ದಾಖಲೆ. 250 ಮಿಲಿಯನ್‌ಗಿಂತ ಹೆಚ್ಚು ಜನರು ಇದನ್ನು ಖರೀದಿಸಿದ್ದರು. ನೋಕಿಯಾ ಮೊಬೈಲ್ ಸರಣಿಯಲ್ಲಿ ಹೆಚ್ಚು ಬಳಕೆದಾರರನ್ನು ಹೊಂದಿದ್ದ ಖ್ಯಾತಿ ಈ ಮೊಬೈಲ್ ನದ್ದು. 2011 ರಲ್ಲಿ ಜಗತ್ತಿನಾದ್ಯಂತ ಈ ಮೊಬೈಲ್ ಅನ್ನು 25 ಕೋಟಿ ಮಂದಿ ಬಳಸಿದ್ದರು.
ಹೆಚ್ಚು ಆಧುನಿಕ ಮತ್ತು ಸುಧಾರಿತ ತಂತ್ರಜ್ಞಾನ ಮಾರುಟ್ಟೆಯಲ್ಲಿ ಲಭ್ಯವಿರುವ ಸಮಯದಲ್ಲೇ ನೋಕಿಯಾ 1100 ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿತು. ಆ್ಯಪಲ್‌ನ ಬೆಸ್ಟ್ ಸೆಲ್ಲಿಂಗ್ ಮಾಡೆಲ್ ಐಫೋನ್ 5 ಎಸ್ (70 ಮಿಲಿಯನ್) ಸಹ ಈ ಮಟ್ಟಿಗೆ ಮಾರಾಟವಾಗಿರಲಿಲ್ಲ.
ಈ ಮೊಬೈಲ್ ಗಳಲ್ಲಿ ಸೀಮಿತ ಸೌಲಭ್ಯಗಳಿರುವುದರಿಂದ ಇವುಗಳ ಬ್ಯಾಟರಿ ಬಾಳಿಕೆಯೂ ಹೆಚ್ಚಾಗಿತ್ತು. ಫೀಚರ್ ಫೋನ್ ಗಳನ್ನು ಒಮ್ಮೆ ಚಾರ್ಜ್ ಮಾಡಿದರೆ ದಿನಗಟ್ಟಲೆ ಬಳಸುವುದು ಸಾಧ್ಯವಾಗುವುದು ಇದೇ ಕಾರಣದಿಂದ. ಇದರ ಮೊದಲ ಡಿಸೈನ್ ಆಗಿದ್ದು ಕ್ಯಾಲಿಫೋರ್ನಿಯಾದಲ್ಲಿ.
ಪ್ಲ್ಯಾಷ್ ಲೈಟ್ ಆರಂಭವಾಗಿದ್ದೆ ನೋಕಿಯಾದಲ್ಲಿ, ಸಿ ಬಟನ್ ಅನ್ನು ಒತ್ತಿ ಹಿಡಿದರೆ ಅದು ಅನ್ ಆಗುತ್ತಿತ್ತು. ಎರಡು ಬಾರಿ ಒತ್ತಿದರೆ ಕೀ ಪ್ಯಾಡ್ ಲಾಕ್ ಆಗುತ್ತಿತ್ತು. 1100 ಮತ್ತು 1101 ರಲ್ಲಿ ಮಾತ್ರ ಮೋನೋಪೋನ್ ರಿಂಗ್ ಟೋನ್ ಗಳಿದ್ದವು. 36 ರಿಂಗ್ ಟೋನ್ ಗಳು ಮೊದಲೇ ಇನ್ಸ್ಟಾಲ್ ಆಗಿರುತ್ತಿದ್ದವು. ಅದರ ಜೊತೆಗೆ ನೋಕಿಯಾ ಟ್ಯೂನ್ 19ನೇ ಶತಮಾನದ ಗಿಟಾರ್ ಸ್ವರವಾಗಿದ್ದು ಸಂಗೀತಗಾರ ಫ್ರಾನ್ಸಿಸ್ಕೋ ಟರೆಗಾ ಅವರ ಸಂಯೋಜನೆಯಾಗಿದೆ. Grande Valse ಎಂದೇ ಟೋನ್ ಹೆಸರಿಸಲಾಗಿತ್ತು. 1998ರಲ್ಲಿ ನೋಕಿಯಾ ಟ್ಯೂನ್ ಎಂದು ಮರುನಾಮಕರಣ ಮಾಡಲಾಯಿತು