Advertisement

ನೋಯ್ಡಾ: ಅವಳಿ ಕಟ್ಟಡದ ಜಾಗದಲ್ಲಿ ಹೊಸ ಕಟ್ಟಡ?

07:10 PM Sep 03, 2022 | Team Udayavani |

ಲಕ್ನೋ: ಇತ್ತೀಚೆಗೆ ನೆಲಸಮ ಮಾಡಲಾದ ಉತ್ತರ ಪ್ರದೇಶದ ನೋಯ್ಡಾದ ಅವಳಿ ಕಟ್ಟಡವಿದ್ದ ಜಾಗದಲ್ಲಿಯೇ ಬೇರೊಂದು ವಸತಿ ಸಮುಚ್ಚಯ ನಿರ್ಮಿಸುವುದಾಗಿ, ಜಾಗದ ಮಾಲೀಕತ್ವ ಹೊಂದಿರುವ ಸೂಪರ್‌ಟೆಕ್‌ ಸಂಸ್ಥೆ ಹೇಳಿದೆ.

Advertisement

ಅದೇ ಸ್ಥಳದಲ್ಲಿ ಹೊಸ ವಸತಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ಕೋರಿ ನೋಯ್ಡಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲಿದ್ದೇವೆ. ಪ್ರಾಧಿಕಾರ ಒಪ್ಪದೇ ಹೋದರೆ ಜಾಗದ ಹಣ ವಾಪಸು ಕೊಡುವಂತೆ ಒತ್ತಾಯಿಸಲಿದ್ದೇವೆ ಎಂದು ಸಂಸ್ಥೆಯ ಮುಖ್ಯಸ್ಥ ಆರ್‌.ಕೆ.ಅರೋರಾ ತಿಳಿಸಿದ್ದಾರೆ.

ವಸತಿ ಸಮುಚ್ಚಯ ನಿರ್ಮಾಣಕ್ಕೆ 14 ಎಕರೆ ಜಾಗವನ್ನು ಪ್ರಾಧಿಕಾರದಿಂದ ನಾವು ಖರೀದಿಸಿದ್ದೆವು. ಅದರಲ್ಲಿ 2 ಎಕರೆ ಜಾಗದಲ್ಲಿ ಅವಳಿ ಕಟ್ಟಡ ನಿರ್ಮಿಸಿದ್ದೆವು. ಈಗ ಈ 2 ಎಕರೆ ಜಾಗದ ಬೆಲೆ 80 ಕೋಟಿ ರೂ. ಇದೆ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next