ದೆಹಲಿ: ಯುಟ್ಯೂಬ್ ನೋಡಿಕೊಂಡು ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ದೆಹಲಿಯ ಗಾಜಿಪುರ ಪ್ರದೇಶದಲ್ಲಿ ವಾಸಿಸುತ್ತಿದ್ದ ಬಿಹಾರದ ಮುಜಾಫರ್‌ಪುರ ಮೂಲದ ಅಬ್ದುಲ್ ರಖೀಬ್ ಬಂಧಿತ ಆರೋಪಿ.
ಅಬ್ದುಲ್ ರಖೀಬ್ ನಕಲಿ ನೋಟುಗಳನ್ನು ಕಂಪ್ಯೂಟರ್ ನ ಪ್ರಿಂಟರ್ ಬಳಸಿ, ಯುಟ್ಯೂಬ್ ನೋಡಿಕೊಂಡು ಪ್ರಿಂಟ್ ಮಾಡುತ್ತಿದ್ದ. ಆತನ ಜೊತೆ ಪಂಕಜ್ ಎಂಬಾತ ವಾಸಿಸುತ್ತಿದ್ದ, ಆತ ಕೂಡ ನಕಲಿ ನೋಟುಗಳನ್ನು ಮುದ್ರಿಸಲು ಜೊತೆ ಆಗುತ್ತಿದ್ದ. ಸದ್ಯ ಪಂಕಜ್ ಪರಾರಿ ಆಗಿದ್ದಾನೆ. ಪ್ರಿಂಟರ್ ಹಾಗೂ 20,50,100 ಹಾಗೂ 200 ಮುಖಬೆಲೆಯ ನೋಟುಗಳು ಸೇರಿದಂತೆ ಒಟ್ಟು 38,220 ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಪ್ರಕರಣದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ವಿದೇಶಾಂಗ ಸಚಿವ ಎಸ್. ಜೈಶಂಕರ್
2 ತಿಂಗಳಿನಿಂದ ಆರೋಪಿ ಈ ಕೆಲಸವನ್ನು ಮಾಡುತ್ತಿದ್ದ. ವೈಯಕ್ತಿಕ ಕೆಲಸಕ್ಕಾಗಿ ಈ ನಕಲಿ ಹಣವನ್ನು ಆರೋಪಿ ಬಳಸುತ್ತಿದ್ದ. ದಿಲ್ಲಿಯಲ್ಲಿ ಜನರು ಇವರ ನಕಲಿ ನೋಟುಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದಾಗ ಆರೋಪಿ ಇದನ್ನು ನೋಯ್ಡಾ ಮತ್ತು ಗ್ರೇಟರ್ ನೋಯ್ಡದಲ್ಲಿ ಬಳಸಲು ಶುರು ಮಾಡಿದರು ಎಂದು ಪೊಲೀಸರು ಹೇಳಿದ್ದಾರೆ.
ರಕೀಬ್ ಅವರನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.