ನವದೆಹಲಿ: ಉತ್ತರಪ್ರದೇಶದ ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳು ತೀವ್ರ ಇಳಿಮುಖವಾಗುತ್ತಿರುವ ನಡುವೆಯೇ ಒಂಬತ್ತು ಆಮ್ಲಜನಕ ಕೌಂಟರ್ ಗಳನ್ನು ಮುಚ್ಚಲು ನೋಯ್ಡಾ ಪ್ರಾಧಿಕಾರ ನಿರ್ಧರಿಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಅಕ್ರಮ ಗೋಸಾಗಾಟಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳೇ ಸಾಥ್..!
ಈ ಹಿನ್ನೆಲೆಯಲ್ಲಿ ಸೋಮವಾರ(ಜೂನ್ 21)ದಿಂದ ಸೆಕ್ಟರ್ 93ಬಿಯಲ್ಲಿರುವ ಕೇವಲ ಒಂದು ಸಿಲಿಂಡರ್ ರೀಫಿಲ್ಲಿಂಗ್ ಸೌಲಭ್ಯದಿಂದ ಆಮ್ಲಜನಕ ಸಿಲಿಂಡರ್ ಗಳನ್ನು ಪೂರೈಸಲು ಪ್ರಾರಂಭಿಸಿದೆ ಎಂದು ವರದಿ ವಿವರಿಸಿದೆ. ಕಳೆದ ಕೆಲವು ದಿನಗಳಿಂದ ಎಲ್ಲಾ ಕೇಂದ್ರಗಳಲ್ಲಿಯೂ ಆಕ್ಸಿಜನ್ ಬೇಡಿಕೆ ಕುಸಿದಿದ್ದು, ಈ ನಿಟ್ಟಿನಲ್ಲಿ ಸೆಕ್ಟರ್ 93ಬಿ ಸಮುದಾಯ ಕೇಂದ್ರಕ್ಕೆ ಮಾತ್ರ ಮೆಡಿಕಲ್ ಆಕ್ಸಿಜನ್ ಸೇವೆ ನೀಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾರಿಗೆ ಆಕ್ಸಿಜನ್ ಅಗತ್ಯವಿದೆಯೋ ಅವರು ಸೆಕ್ಟರ್ 93 ಸಮುದಾಯ ಕೇಂದ್ರದಲ್ಲಿ ಪಡೆಯಬಹುದಾಗಿದೆ ಎಂದು ಪ್ರಾಜೆಕ್ಟ್ ಮೆನೇಜರ್ ಮುಕೇಶ್ ವೈಶ್ ತಿಳಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಕೋವಿಡ್ 19 ಎರಡನೇ ಅಲೆಯ ಪರಿಣಾಮ ನೋಯ್ಡಾ ಪ್ರಾಧಿಕಾರ, ಮೇ ಆರಂಭದಲ್ಲಿ ಕೋವಿಡ್ 19 ದೃಢಪಟ್ಟು, ಹೋಮ್ ಐಸೋಲೇಶನ್ ನಲ್ಲಿದ್ದ ನಿವಾಸಿಗಳಿಗೆ ಮೆಡಿಕಲ್ ಆಕ್ಸಿಜನ್ ಸರಬರಾಜು ಸೇವೆಯನ್ನು ಪ್ರಾರಂಭಿಸಿತ್ತು ಎಂಬುದನ್ನು ಗಮನಿಸಬೇಕು ಎಂದು ವರದಿ ಹೇಳಿದೆ.