Advertisement

ಕುರಾನ್‌ನ ಯಾವುದೇ ಧಾರ್ಮಿಕ ಹಾಗೂ ಪವಿತ್ರ ಗ್ರಂಥಗಳ ಮೇಲೆ ಕೃತಿಸ್ವಾಮ್ಯ ಸಾಧ್ಯವಿಲ್ಲ

08:40 PM Aug 03, 2022 | Team Udayavani |

ನವದೆಹಲಿ: ಕುರಾನ್‌ ಮತ್ತು ಇಸ್ಲಾಂನ ಯಾವುದೇ ಧಾರ್ಮಿಕ ಹಾಗೂ ಪವಿತ್ರ ಗ್ರಂಥಗಳ ಮೇಲೆ ಯಾರೂ ಕೃತಿಸ್ವಾಮ್ಯವನ್ನು ಹೊಂದುವ ಹಾಗಿಲ್ಲ ಎಂದು ನವದೆಹಲಿಯ ಜಿಲ್ಲಾ ಕೋರ್ಟ್‌ ಬುಧವಾರ ಅಭಿಪ್ರಾಯಪಟ್ಟಿದೆ.

Advertisement

ಜತೆಗೆ ಅರ್ಜಿದಾರರಿಗೆ 50 ಸಾವಿರ ರೂ.ದಂಡವನ್ನೂ ವಿಧಿಸಿದೆ. “ಪವಿತ್ರ ಕುರಾನ್‌ ಮತ್ತು ಹದೀಸ್‌ ಸೇರಿದಂತೆ ಇಸ್ಲಾಂನ ಪವಿತ್ರ ಗ್ರಂಥಗಳಲ್ಲಿ ಇರುವ ಅಂಶಗಳು ಒಂದೇ ರೀತಿಯಾಗಿ ಇರಬೇಕು.

ಧಾರ್ಮಿಕ ನಂಬಿಕೆಗಳು ಮತ್ತು ಅವುಗಳನ್ನು ಪಾಲಿಸುವ ಬಗೆಗೆ ಇರುವ ನಿಯಮಗಳು ಒಂದೇ ರೀತಿಯಾಗಿ ಇರಬೇಕು. ಅಂಥ ಗ್ರಂಥಗಳ ಮೇಲೆ ಯಾರೂ ಕೂಡ ಕೃತಿಸ್ವಾಮ್ಯ ಹೊಂದಿರಬಾರದು’ ಎಂದು ನ್ಯಾಯಾಧೀಶ ಸಂಜೀವ ಕುಮಾರ್‌ ಅಗರ್ವಾಲ್‌ ಹೇಳಿದ್ದಾರೆ.

ನವದೆಹಲಿಯ ಇಸ್ಲಾಮಿಕ್‌ ಬುಕ್‌ ಸರ್ವಿಸಸ್‌ ಪ್ರೈ ಲಿಮಿಟೆಡ್‌ ಎಂಬ ಪ್ರಕಾಶನ ಸಂಸ್ಥೆ ಈ ಬಗ್ಗೆ ಕೋರ್ಟ್‌ ಮೆಟ್ಟಿಲೇರಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next