Advertisement

ಬರೋಬ್ಬರಿ 800 ಕೋಟಿಗೆ ನೊಬೆಲ್‌ ಶಾಂತಿ ಪ್ರಶಸ್ತಿ ಹರಾಜು!

09:45 AM Jun 22, 2022 | Team Udayavani |

ನ್ಯೂಯಾರ್ಕ್‌: ರಷ್ಯಾದ ಪ್ರಸಿದ್ಧ ಪತ್ರಕರ್ತ ಡಿಮಿಟ್ರಿ ಮುರಾಟೋವ್‌ ಅವರು ತಮ್ಮ ನೊಬೆಲ್‌ ಶಾಂತಿ ಪ್ರಶಸ್ತಿಯನ್ನು ಹರಾಜು ಮಾಡಿದ್ದು, ಬರೋಬ್ಬರಿ 808 ಕೋಟಿ ರೂ. ಮೌಲ್ಯಕ್ಕೆ ಪ್ರಶಸ್ತಿಯು ಹರಾಜಾಗಿದೆ.

Advertisement

ಉಕ್ರೇನ್‌ನ ಮೇಲೆ ರಷ್ಯಾ ದಾಳಿಯಿಂದಾಗಿ ತಬ್ಬಲಿಗಳಾಗಿರುವ ಮಕ್ಕಳ ಭವಿಷ್ಯಕ್ಕಾಗಿ ಈ ಹರಾಜು ನಡೆಸಲಾಗಿತ್ತು. ಹರಾಜಿನಲ್ಲಿ ಬಂದ ಹಣವನ್ನು ಯುನಿಸೆಫ್ ಗೆ ಕೊಡುವುದಾಗಿ ಡಿಮಿಟ್ರಿ ತಿಳಿಸಿದ್ದಾರೆ.

ಅವರಿಗೆ 2021ರ ಅಕ್ಟೋಬರ್‌ನಲ್ಲಿ ನೊಬೆಲ್‌ ಶಾಂತಿ ಪ್ರಶಸ್ತಿ ಕೊಟ್ಟು ಗೌರವಿಸಲಾಗಿತ್ತು. ಈ ಹಿಂದೆ ಜೇಮ್ಸ್‌ ವ್ಯಾಟ್ಸನ್‌ ಅವರು ತಮ್ಮ ನೋಬೆಲ್‌ ಪ್ರಶಸ್ತಿಯನ್ನು 2014ರಲ್ಲಿ ಹರಾಜು ಕೂಗಿದ್ದು, 37 ಕೋಟಿ ರೂ.ಗೆ ಅದು ಹರಾಜಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next