Advertisement

ಅಮಾನತು ಆದೇಶಕ್ಕೆ ಇಲ್ಲಿ ಬೆಲೆನೇ ಇಲ್ಲ!

04:00 PM Oct 21, 2020 | Suhan S |

ಮುಳಬಾಗಿಲು: ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯ 23.99 ಕ್ವಿಂಟಲ್‌ ತೊಗರಿಬೇಳೆ ವಿತರಣೆ ಮಾಡದೇ ದುರುಪಯೋಗಪಡಿಸಿಕೊಂಡಿರುವ ಆರೋಪ ಸಂಬಂಧ 6 ನ್ಯಾಯಬೆಲೆ ಅಂಗಡಿಗಳನ್ನು ಉಪ ನಿರ್ದೇಶಕರು ಅ.16 ರಂದು ಅಮಾನತುಗೊಳಿಸಿದ್ದರು. ಜೊತೆಗೆ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ನಿಯೋಜಿಸಿ ಪಡಿತರವಿತರಣೆಗೆ ತಹಶೀಲ್ದಾರ್‌ಗೆ ಸೂಚಿಸಿದ್ದರೂ ಆದೇಶ ಪಾಲಿಸಲು ವಿಫ‌ಲವಾಗಿದ್ದಾರೆ.

Advertisement

2 ಅಂಗಡಿಗಳಿಂದ ವಿತರಣೆ: ಅಮಾನತುಗೊಂಡಿದ್ದಎಸ್‌.ಚದುನಮಹಳ್ಳಿ, ಪೂಜಾರಹಳ್ಳಿ, ಸುಣ್ಣಂಗೂರು, ಗುಮ್ಮಕಲ್ಲು, ಚಾಮರೆಡ್ಡಿಹಳ್ಳಿ, ಹೂಂತಾಡ್ಲಹಳ್ಳಿ ಈ ಆರು ನ್ಯಾಯಬೆಲೆ ಅಂಗಡಿಗಳ ಪೈಕಿ ಪ್ರಸ್ತುತ ಎಸ್‌. ಚದುನಮಹಳ್ಳಿ ಕಾರ್ಯದರ್ಶಿ ಜಗದೀಶ್‌ಗೆ ನಿಯೋಜನೆಗೊಂಡಿರುವಅಂಗೊಡಹಳ್ಳಿನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಮಾಡಲಾಗಿದೆ. ಗುಮ್ಮಕಲ್ಲು ನ್ಯಾಯಬೆಲೆ ಅಂಗಡಿ ಮಾಲೀರಾಮರೆಡ್ಡಿ ಗುಮ್ಮಕಲ್ಲುಗೆ ನಿಯೋಜನೆ  ಗೊಂಡಿರುವ ಮುದಿಗೆರೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ವಿತರಣೆ ಮಾಡಲಾಗಿದೆ.

ದಾಖಲೆಗಳಲ್ಲಿ ಬೇಳೆ ಹಂಚಿಕೆ ನಮೂದು: ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಮುಳಬಾಗಿಲುತಾಲೂಕಿನ ನ್ಯಾಯಬೆಲೆ ಅಂಗಡಿಗಳ ಮೂಲಕ ಸೆಪ್ಟೆಂಬರ್‌ ಮಾಹೆಯಲ್ಲಿ ಪಡಿತರಚೀಟಿಗಳಿಗೆ ವಿತರಿಸಬೇಕಿದ್ದ ಪ್ರಧಾನ ಮಂತ್ರಿ ಗರೀಬ್‌ಕಲ್ಯಾಣ ಯೋಜನೆಯ ಕೆಎಫ್ಸಿ ಸಗಟುಮಳಿಗೆಯಲ್ಲಿ 23.99 ಕ್ವಿಂಟಲ್‌ ಬೇಳೆಯನ್ನು ಆಹಾರ ಇಲಾಖೆಯ ಶಿರಸ್ತೇದಾರ್‌ ನಟರಾಜರೆಡ್ಡಿ ಹಂಚಿಕೆಮಾಡಿರುವುದಾಗಿ ದಾಖಲೆಗಳಲ್ಲಿ ನಮೂದಿಸಿದ್ದರು. ಈ ಸಂಬಂಧ ಅ.2ರಂದು ಉದಯವಾಣಿಯಲ್ಲಿ ವರದಿ ಪ್ರಕಟ ಬಳಿಕ ತಹಶೀಲ್ದಾರ್‌ ಅವರು ದುರುಪಯೋಗ ನಡೆದಿಲ್ಲ ಎಂದು ಪ್ರಕಟಣೆ ನೀಡಿದ್ದರು. ಆದರೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಆಯುಕ್ತಾಲಯದ ಅಧಿಕಾರಿಗಳು ಈ ಕುರಿತು ಸಮಗ್ರ ತನಿಖೆ ಕೈಗೊಂಡಿದ್ದರಿಂದ ಶಿರಸ್ತೇದಾರ್‌ ನಟರಾಜರೆಡ್ಡಿ ಏಕಾಏಕಿ1 ತಿಂಗಳುಕಾಲರಜಾಹಾಕಿಮುಳಬಾಗಿಲಿನ ತಮ್ಮ ವಾಸದ ಮನೆಯನ್ನೂ ಖಾಲಿ ಮಾಡಿಕೊಂಡು ಹೋಗಿರುತ್ತಾರೆ.

ಅ.16ರಂದು ಅಮಾನತು ಆದೇಶ: ಉಪ ನಿರ್ದೇಶಕರು ಮತ್ತು ಗ್ರಾಮಾಂತರ ಪ್ರದೇಶ ಆಹಾರ ನಿರೀಕ್ಷಕರು ಈ ಆರು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಷರತ್ತು ಮತ್ತು ನಿಬಂಧನೆಗಳನ್ನು ಉಲ್ಲಂಘನೆ ಮಾಡಿರುವುದು ಕಂಡುಬಂದಿತ್ತು. ಸದರಿ ನ್ಯಾಯಬೆಲೆ ಅಂಗಡಿಗಳನ್ನು ಅ.16 ರಂದು ಅಮಾನತುಪಡಿಸಿ ಸದರಿ ನ್ಯಾಯಬೆಲೆಅಂಗಡಿ ವಹಿವಾಟನ್ನು ನಿಯಮಾನುಸಾರ ಹತ್ತಿರದ ನ್ಯಾಯಬೆಲೆ ಅಂಗಡಿಗೆ ನಿಯೋಜಿಸಿ ಹಾಗೂ ಉಳಿಸಿಕೊಂಡಿರುವ ಬೇಳೆಯನ್ನು ನಿಯಮಾನುಸಾರ ಪಡಿತರ ಚೀಟಿದಾರರಿಗೆ ವಿತರಿಸಲು ತಹಶೀಲ್ದಾರ್‌ಗೆ ಸೂಚಿಸಿ ಉಪ ನಿರ್ದೇಶಕರು ಆದೇಶಿಸಿದ್ದರು.

ಆರು ನ್ಯಾಯಬೆಲೆ ಅಂಗಡಿಗಳನ್ನು ಅಮಾನತುಗೊಳಿಸಿದ್ದ ಉಪ ನಿರ್ದೇಶಕರು, ಮಾಲೀಕರಿಗೆನೋಟಿಸ್‌ ಜಾರಿ ಮಾಡಲು ತಹಶೀಲ್ದಾರ್‌ಗೆ ಕಳುಹಿಸಿದರೂಇಕೆವೈಸಿಯನ್ನುರದ್ದುಗೊಳಿಸಬೇಕಿತ್ತು. ಆದರೆ ಅವರು ರದ್ದುಗೊಳಿಸಿಲ್ಲ. ಅಂಗಡಿ ಮಾಲೀಕರಿಬ್ಬರು ಉಪ ನಿರ್ದೇಶಕರ ಕಚೇರಿಯಲ್ಲಿಯೇ ನೋಟಿಸ್‌ ಪಡೆದುಕೊಂಡು ತಹಶೀಲ್ದಾರ್‌ ಮೂಲಕ ಬಂದ ಅಮಾನತು ಆದೇಶ ಸ್ವೀಕರಿಸದೇ ತಮ್ಮ ಪಾಡಿಗೆ ತಾವು ಗ್ರಾಹಕರಿಗೆ ಧಾನ್ಯಗಳನ್ನು ವಿತರಿಸಿದ್ದಾರೆ.

Advertisement

ಒಟ್ಟಿನಲ್ಲಿ ತಾಲೂಕಿನ ಆರು ನ್ಯಾಯಬೆಲೆ ಅಂಗಡಿಗಳಲ್ಲಿ ತೊಗರಿಬೇಳೆ ವಿತರಣೆಯಲ್ಲಿ ಆಗಿರುವ ಅವ್ಯವಹಾರದ ಕುರಿತು ಆಹಾರಇಲಾಖೆ ಉಪ ನಿರ್ದೇಶಕರು ಪ್ರಾಧಿಕಾರವನ್ನು ನಾಮ್‌ಕಾವಸ್ತೆಗೆಅಮಾನತುಗೊಳಿಸಿದರೂ ಸದರಿ ಆದೇಶ ಪಾಲಿಸಲು ತಹಶೀಲ್ದಾರ್‌ ಮತ್ತು ಆಹಾರ ಇಲಾಖೆ ಅಧಿಕಾರಿಗಳು ವಿಫ‌ಲವಾಗಿದ್ದಾರೆ. ಇನ್ನಾದರೂ ಆಹಾರ ಇಲಾಖೆ ಆಯುಕ್ತರು ಇತ್ತಕಡೆ ಗಮನ ಹರಿಸಬೇಕಾಗಿದೆ.

ಹತ್ತಿರದ ನ್ಯಾಯಬೆಲೆ ಅಂಗಡಿಗೆ ನಿಯೋಜಿಸಲು ಮೀನಮೇಶ :  ನ್ಯಾಯಬೆಲೆ ಅಂಗಡಿಗಳ ಅಮಾನತು ಆದೇಶವನ್ನು ಉಪ ನಿರ್ದೇಶಕರು ಮುದ್ದಾಂ ಮೂಲಕ ಮುಳಬಾಗಿಲು ತಹಶೀಲ್ದಾರ್‌ಗೆಕಳುಹಿಸಿದ್ದರೂ ಅವರು ಅಮಾನತು ಅಂಗಡಿಗಳನ್ನು ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ನಿಯೋಜಿಸಲು ಮೀನಮೇಶ ಎಣಿಸುತ್ತಿರುತ್ತಾರೆ.ಗುಮ್ಮಕಲ್‌ ನ್ಯಾಯಬೆಲೆ ಅಂಗಡಿ ಮಾಲೀಕ ರಾಮರೆಡ್ಡಿ ಅಮಾನತುಗೊಂಡಿದ್ದರೂ ತಮ್ಮ ಗುಮ್ಮಕಲ್‌ ನ್ಯಾಯಬೆಲೆ ಅಂಗಡಿಯಲ್ಲಿ ಅ.18,19,20 ರಂದು ಗ್ರಾಹಕರ ಪಡಿತರ ಚೀಟಿಗಳಿಗೆ ಧಾನ್ಯಗಳನ್ನು ವಿತರಣೆ ಮಾಡಿದ್ದಾರೆ. ಅಲ್ಲದೇ ಸದರಿ ರಾಮರೆಡ್ಡಿ ಅ.20 ರಂದು ಏಕಕಾಲಕ್ಕೆ ಈ ಮೊದಲೇ ನಿಯೋಜಿಸಿಕೊಂಡಿದ್ದ ಮುದಿಗೆರೆ ನ್ಯಾಯಬೆಲೆ ಅಂಗಡಿಯಲ್ಲಿಯೂ ಸಹ 226 ಚೀಟಿಗಳಿಗೆ ಪಡಿತರ ಧಾನ್ಯಗಳನ್ನು ವಿತರಣೆ ಮಾಡಿದ್ದಾರೆ. ಎಸ್‌.ಚದುಮನಹಳ್ಳಿ ನ್ಯಾಯಬೆಲೆ ಅಂಗಡಿಯಲ್ಲಿಕಾರ್ಯದರ್ಶಿ ಜಗದೀಶ್‌ ತೊಗರಿ ಬೇಳೆ ದುರುಪಯೋಗ ಪಡಿಸಿಕೊಂಡಿದ್ದರಿಂದ ಅಮಾನತುಗೊಂಡಿದ್ದರೂ ಅವರ ಊಮಿಟ್ಟೂರು ನ್ಯಾಯಬೆಲೆ ಅಂಗಡಿಗೆ ನಿಯೋಜನೆಗೊಂಡಿದ್ದು, ಅಂಗೊಂಡಹಳ್ಳಿ ನ್ಯಾಯಬೆಲೆ ಅಂಗಡಿಯಲ್ಲಿ ಅ.19 ಮತ್ತು20 ರಂದು ಪಡಿತರ ಧಾನ್ಯಗಳನ್ನು ವಿತರಣೆ ಮಾಡಿದ್ದಾರೆ.

ತಹಶೀಲ್ದಾರ್‌ರಿಂದ ವರದಿ ಬಂದಿಲ್ಲ : ಈ ಕುರಿತು ಪ್ರತಿಕ್ರಿಯಿಸಿದ ಉಪ ನಿರ್ದೇಶಕರು ನಾಗರಾಜ, ಅಮಾನತು ಆದೇಶವನ್ನು ತಹಶೀ ಲ್ದಾರ್‌ಗೆ ಕಳುಹಿಸಿದ್ದು 6 ನ್ಯಾಯಬೆಲೆ ಅಂಗಡಿಗಳನ್ನು ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ ನಿಯೋಜಿಸಲು ಸೂಚಿಸಿದೆ. ಅವರಿಂದ ವರದಿ ಇನ್ನೂ ಬಂದಿರುವುದಿಲ್ಲ. ಅಲ್ಲದೇ ಇಕೆವೈಸಿ ರದ್ದುಗೊಳಿಸುವ ಅವಕಾಶವಿಲ್ಲವೆಂದರು. ತಹಶೀಲ್ದಾರ್‌ರಿಂದ ವರದಿ ಬಂದ ನಂತರ ಬೇರೆ ಅಂಗಡಿಗಳಿಗೆ ನಿಯೋಜಿಸಿದ ನಂತರ ಇಕೆವೈಸಿಯನ್ನುಬದಲಾಯಿಸಲಾಗುವುದು. ಅಲ್ಲದೇ ಅಮಾನತುಗೊಂಡಿರುವ6 ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ಧಾನ್ಯಗಳನ್ನು ವಿತರಿಸಲು ಅವಕಾಶವಿರುವುದಿಲ್ಲ, ಒಂದು ವೇಳೆ ಸದರಿ ಅಮಾನತು ಆದೇಶವನ್ನು ಉಲ್ಲಂ ಸಿ ಪಡಿತರ ವಿತರಣೆ ಮಾಡಿದ್ದರೆ ವಿಚಾರಣೆ ಸಂದರ್ಭದಲ್ಲಿ ಅವರ ದುರ್ನಡತೆಯನ್ನು ಪರಿಗಣಿಸಲಾಗುವುದು ಎಂದು ತಿಳಿಸಿದರು.

ಸಾಕಷ್ಟು ಚುನಾವಣಾಕೆಲಸ ಕಾರ್ಯಗಳು, ಒತ್ತಡ ಇರುವುದರಿಂದ ಇತ್ತ ಕಡೆ(ಉಪ ನಿರ್ದೇಶಕರು 6 ನ್ಯಾಯ ಬೆಲೆ ಅಂಗಡಿ ಅಮಾನತುಗೊಳಿಸಿ ಹತ್ತಿರದ ಅಂಗಡಿಗಳಿಗೆ ನಿಯೋಜಿಸುವ ಸೂಚನೆ) ಆದೇಶ ಗಮನಹರಿಸಲು ಸಾಧ್ಯವಾಗಲಿಲ್ಲ.ಅಮಾನತಾಗಿರುವ ಆರು ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು.ರಾಜಶೇಖರ್‌, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next