ನವದೆಹಲಿ:ಚಳಿಗಾಲದ ರಜೆಯ ಹಿನ್ನೆಲೆಯಲ್ಲಿ ಡಿ.17ರಿಂದ ಜ.1ರವರೆಗೆ ಸುಪ್ರೀಂ ಕೋರ್ಟ್‌ನ ನ್ಯಾಯಪೀಠಗಳು ಲಭ್ಯವಿರುವುದಿಲ್ಲ ಎಂದು ಸಿಜೆಐ ಡಿ.ವೈ. ಚಂದ್ರಚೂಡ್ ಶುಕ್ರವಾರ ತಿಳಿಸಿದ್ದಾರೆ.
ಗುರುವಾರವಷ್ಟೇ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು, “ಕೋರ್ಟ್‌ಗಳು ದೀರ್ಘಾವಧಿ ರಜೆ ಹೋಗುವ ಕಾರಣ ನ್ಯಾಯ ಅರಸಿ ಬರುವವರಿಗೆ ಸಮಸ್ಯೆಯಾಗುತ್ತಿದೆ’ ಎಂದು ರಾಜ್ಯಸಭೆಯಲ್ಲಿ ಹೇಳಿದ್ದರು. ಅವರ ಹೇಳಿಕೆ ಹಿನ್ನೆಲೆಯಲ್ಲಿ ಸಿಜೆಐ ಘೋಷಣೆಯು ಮಹತ್ವ ಪಡೆದಿದೆ. ಈ ಹಿಂದೆ ನ್ಯಾ.ಎನ್.ವಿ.ರಮಣ ಅವರು ಸಿಜೆಐ ಆಗಿದ್ದಾಗಲೂ, ರಜೆಯ ವಿಚಾರ ಪ್ರಸ್ತಾಪವಾಗಿತ್ತು. ಆಗ ಅವರೂ, “ಜಡ್ಜ್ಗಳು ತಮ್ಮ ನಿರ್ಧಾರ, ತೀರ್ಪುಗಳ ಕುರಿತು ಚಿಂತಿಸುತ್ತಾ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಾರೆ. ಅವರು ರಜೆ ಪಡೆದುಕೊಂಡು ಆರಾಮವಾಗಿರುತ್ತಾರೆ ಎಂದು ಭಾವಿಸಬೇಕಾಗಿಲ್ಲ’ ಎಂದಿದ್ದರು.