ರಾಜ್ಯದ ಬಾಗಲಕೋಟೆ, ವಿಜಯಪುರ, ಬೀದರ, ಕಲಬುರಗಿ, ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯದ 25 ಜಿಲ್ಲೆಗಳಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಉನ್ನತೀಕರಿಸಿದ ಪ್ರೌಢ ಶಾಲೆಗಳ ಮುಖ್ಯಾಧ್ಯಾಪಕರು, ಶಿಕ್ಷಕರಿಗೆ ಕಳೆದ ಅಕ್ಟೋಬರ್ ನಿಂದ ವೇತನವೇ ಕೊಟ್ಟಿಲ್ಲ. ವೇತನಕ್ಕಾಗಿ ಶಿಕ್ಷಕರು, ಹಲವು ಪ್ರಯತ್ನ ಮಾಡಿದರೂ, ಯುಗಾದಿಗೆ ಸಂಬಳ ಬಂದಿಲ್ಲ.
Advertisement
ಪ್ರಾಥಮಿಕ ಶಿಕ್ಷಣಕ್ಕೆ ಇದ್ದ ಸರ್ವ ಶಿಕ್ಷಣ ಅಭಿಯಾನದಂತೆ ಪ್ರೌಢ ಶಿಕ್ಷಣಕ್ಕೂ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಎಂಬುದು ಕೇಂದ್ರ ಸರ್ಕಾರದ ಯೋಜನೆ. ಈ ಯೋಜನೆಯಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಗುರುತಿಸಿ, ಅದರಲ್ಲಿ ಅಗತ್ಯ ಇರುವೆಡೆ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಉನ್ನತೀಕರಿಸಲಾಗಿತ್ತು. ಬಳಿಕ ಆರ್‌ಎಂಎಸ್‌ಎ ಯೋಜನೆಯಡಿಯೇ ಪ್ರತ್ಯೇಕ ಶಿಕ್ಷಕರ ನೇಮಕ ಮಾಡಿ ಮಕ್ಕಳಿಗೆ ಶಿಕ್ಷಣ ಕೊಡಲಾಗುತ್ತಿದೆ. ಉಳಿದ ಶಿಕ್ಷಕರಂತೆ ಈ ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ನೇರವಾಗಿ ಸಂಬಳ ಬರುವುದಿಲ್ಲ. ಆರ್ ಎಂಎಸ್‌ಎ ಶಿಕ್ಷಕರ ವೇತನಕ್ಕಾಗಿಯೇ (ಲೆಕ್ಕ ಶಿರ್ಷಿಕೆ :2201-00-102-0-69-001) ಎಂಬ ಶೀರ್ಷಿಕೆ ಇದೆ. ಇದರಡಿ ಈ ಶಿಕ್ಷಕರಿಗೆ ವೇತನ ಮಾಡಲಾಗುತ್ತದೆ. ಕಳೆದ ಅಕ್ಟೋಬರ್‌ನಲ್ಲಿ ಆರ್ ಎಂಎಸ್‌ಎ ಯೋಜನೆಯಡಿ ಕೆಲಸ ಮಾಡುವ ಶಿಕ್ಷಕರ ವರ್ಗಾವಣೆ, ಖಾಲಿ ಇದ್ದ ಹುದ್ದೆಗಳ ನೇಮಕಾತಿ ನಡೆದಿತ್ತು. ಹೀಗಾಗಿ ಹೊಸ ಹಣಕಾಸು ವರ್ಷದ ಬಳಿಕ ನಡೆದ ಈ ಪ್ರಕ್ರಿಯೆಯಿಂದ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿರಲಿಲ್ಲ. ಇದರಿಂದ ಅಕ್ಟೋಬರ್‌ನಿಂದ ಈವರೆಗೆ (ಆರು ತಿಂಗಳಿಂದ) ವೇತನ ನೀಡಲಾಗಿಲ್ಲ ಎಂಬುದು ಹಿರಿಯ ಅಧಿಕಾರಿಗಳ ವಿವರಣೆ.
ಅರುಣ ಶಹಾಪುರ, ವಿಧಾನ ಪರಿಷತ್ ಸದಸ್ಯ
Related Articles
ಎಂ.ಆರ್. ಕಾಮಾಕ್ಷಿ, ಉಪ ನಿರ್ದೇಶಕಿ, ಸಾರ್ವಜನಿಕ ಶಿಕ್ಷಣ ಇಲಾಖೆ
Advertisement
ಶ್ರೀಶೈಲ ಕೆ. ಬಿರಾದಾರ