ಭುಬನೇಶ್ವರ್: 12 ನೇ ಶತಮಾನದ ಪ್ರಸಿದ್ಧ ದೇವಾಲಯವಾದ ಪುರಿ ಜಗನ್ನಾಥ ದೇವಾಲಯದಲ್ಲಿ ಮುಂಬರುವ ದಿನಗಳಲ್ಲಿ ಭಕ್ತರಿಗೆ ಡ್ರೆಸ್ ಕೋಡ್ ಜಾರಿ ಮಾಡುವುದಾಗಿ ಆಡಳಿತ ಮಂಡಳಿ ಹೇಳಿದೆ.
ದೇವಸ್ಥಾನಕ್ಕೆ ಬರುವ ಕೆಲ ಭಕ್ತರು ಅಸಭ್ಯ ರೀತಿಯಲ್ಲಿ ವಸ್ತ್ರಗಳನ್ನು ಧರಿಸಿ ಬರುತ್ತಿರುವುದು ಕಂಡುಬಂದಿದ್ದು ಇದರಿಂದ ದೇವಸ್ಥಾನದ ಸಮಿತಿ ಡ್ರೆಸ್ ಕೋಡ್ ಜಾರಿಗೆ ತರಲು ಚಿಂತಿಸಿದ್ದು ಈ ಕುರಿತು ಸಭೆ ನಡೆಸಿದ ಸಮಿತಿ ಜನವರಿ ೧ ರಿಂದ ವಸ್ತ್ರ ನೀತಿ ಜಾರಿಗೆ ತರಲು ನಿರ್ಣಯ ಕೈಗೊಂಡಿದೆ.
ಈ ಕುರಿತು ಮಾತನಾಡಿದ ದೇವಸ್ಥಾನದ ಆಡಳಿತ ಮಂಡಳಿಯ ಮುಖ್ಯಸ್ಥರಾದ ರಂಜಾನ್ ಕುಮಾರ್, ದೇವಸ್ಥಾನದ ಘನತೆ ಮತ್ತು ಪಾವಿತ್ರ್ಯತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ, ದುರದೃಷ್ಟವಶಾತ್, ಕೆಲವರು ಇತರರ ಧಾರ್ಮಿಕ ಭಾವನೆಗಳನ್ನು ಲೆಕ್ಕಿಸದೆ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದು ಕಂಡುಬಂದಿದ್ದು ಇದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದ್ದಾರೆ.
ಕೆಲವರು ಹರಿದ ಜೀನ್ಸ್ ಪ್ಯಾಂಟ್, ಸ್ಲೀವ್ ಲೆಸ್ ಡ್ರೆಸ್, ಹಾಫ್ ಪ್ಯಾಂಟ್ ಹಾಕಿಕೊಂಡು ಸಮುದ್ರ ತೀರದಲ್ಲೋ, ಉದ್ಯಾನವನದಲ್ಲೋ ಸುತ್ತಾಡಲು ಬಂದಂತೆ ದೇವಸ್ಥಾನಕ್ಕೂ ಬರುತ್ತಾರೆ ಇದರಿಂದ ದೇವಸ್ಥಾನದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ, ದೇವಸ್ಥಾನ ದೇವರ ವಾಸಸ್ಥಾನವೇ ಹೊರತು ಮನರಂಜನಾ ಸ್ಥಳವಲ್ಲ,” ಎಂದು ಹೇಳಿದರು.
ಇದನ್ನೂ ಓದಿ: Hubli; ಗುತ್ತಿಗೆದಾರರಿಗೆ ಬಿಲ್ ಪಾವತಿಸಿ ತನಿಖೆ ಮಾಡಲಿ: ಬಸವರಾಜ ಬೊಮ್ಮಾಯಿ