Advertisement

ಟಾಯ್ಲೆಟ್‌ ಇಲ್ಲದ್ದಕ್ಕೆ ನವ ವಿವಾಹಿತೆ ಆತ್ಮಹತ್ಯೆ

08:16 AM May 11, 2022 | Team Udayavani |

ಚೆನ್ನೈ: 2017ರಲ್ಲಿ ಉತ್ತರ ಪ್ರದೇಶದಲ್ಲಿ ತಾನು ಮದುವೆಯಾಗಿ ಹೋದ ಮನೆಯಲ್ಲಿ ತನ್ನ ಅತ್ತೆಗೆ ಶೌಚಾಲಯ ಇಲ್ಲದ್ದನ್ನು ಗಮನಿಸಿದ್ದ ಸೊಸೆಯೊಬ್ಬಳು, ತಾನೇ ಹಣ ಕೊಟ್ಟು ಶೌಚಾಲಯ ನಿರ್ಮಿಸಿದ್ದಳು!

Advertisement

ಇದೇ ವರ್ಷ ಮಾರ್ಚ್‌ನಲ್ಲಿ ನವ ವಿವಾಹಿತೆಯೊಬ್ಬಳು ಗಂಡನ ಮನೆಯಲ್ಲಿ ಶೌಚಾಲಯ ಇಲ್ಲದ್ದಕ್ಕೆ ಸಿಡಿಮಿಡಿ ಗೊಂಡು ತವರು ಮನೆಗೆ ವಾಪಸ್‌ ಹೋಗಿದ್ದ ಘಟನೆಯೂ ಉತ್ತರ ಪ್ರದೇಶದಲ್ಲೇ ನಡೆದಿತ್ತು.

ಆದರೆ ತಮಿಳುನಾಡಿನ ಕಡಲೂರಿನಲ್ಲಿ ರಮ್ಯಾ (27) ನವ ವಿವಾ ಹಿತೆಯೊಬ್ಬಳು ತನ್ನ ಗಂಡನ ಮನೆಯಲ್ಲಿ ಶೌಚಾಲಯ ಇಲ್ಲದ್ದಕ್ಕೆ ಆತ್ಮಹತ್ಯೆಯನ್ನೇ ಮಾಡಿಕೊಂಡಿದ್ದಾಳೆ!

ಈಕೆ ಖಾಸಗಿ ವೈದ್ಯಕೀಯ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಎ.6ರಂದು ಕಾರ್ತಿಕೇಯನ್‌ರನ್ನು ಮದುವೆಯಾಗಿ ಗಂಡನ ಮನೆಗೆ ಕಾಲಿಟ್ಟಿದ್ದಳು. ಇದೇ ವಿಚಾರಕ್ಕೆ ಜಗಳವಾಗಿದ್ದು, ಇತ್ತೀಚೆಗೆ ಆಕೆ ತವರಿಗೆ ಮರಳಿದ್ದಳು. ಸೋಮವಾರ ಮತ್ತೆ ಗಂಡ ಹೆಂಡತಿ ಇದೇ ವಿಚಾರವಾಗಿ ಫೋನ್‌ ಕರೆಯಲ್ಲೇ ಜಗಳ ಆಡಿಕೊಂಡಿದ್ದು, ಮನನೊಂದರಮ್ಯಾ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next