ಪ್ಯಾರಿಸ್: ವಿಶ್ವದ ನಂ.1 ಆಟಗಾರ್ತಿ ಐಗಾ ಸ್ವಿಯಾಟೆಕ್ ಮತ್ತು 20ನೇ ರ್‍ಯಾಂಕಿಂಗ್ ಆಟಗಾರ್ತಿ ದರಿಯಾ ಕಸತ್ಕಿನಾ ವನಿತಾ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಸೆಣಸಾಡಲಿದ್ದಾರೆ. ಈ ಮುಖಾಮುಖಿ ಗುರುವಾರ ಸಂಜೆ 6.30ಕ್ಕೆ ಆರಂಭವಾಗಲಿದೆ.
ಆಲ್ ರಷ್ಯನ್ ಕಾಳಗವೊಂದರಲ್ಲಿ ದರಿಯಾ ಕಸತ್ಕಿನಾ 6-4, 7-5 ಅಂತರದಿಂದ ವೆರೋನಿಕಾ ಕುಡೆರ್ಮೆಟೋವಾ ಅವರನ್ನು ಮಣಿಸಿದರು. ಇದು ಕಸತ್ಕಿನಾ ಕಾಣುತ್ತಿರುವ ಮೊದಲ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್.
ಮೊದಲ ಸೆಟ್ ಗೆದ್ದ ಕಸತ್ಕಿನಾ ದ್ವಿತೀಯ ಸೆಟ್‌ನಲ್ಲಿ 5-0 ಅಮೋಘ ಮುನ್ನಡೆಯಲ್ಲಿದ್ದರು. ಈ ಹಂತದಲ್ಲಿ ಕುಡೆರ್ಮೆಟೋವಾ ತಿರುಗಿ ಬಿದ್ದರು. ಪಂದ್ಯ ರೋಚಕ ಘಟ್ಟ ತಲುಪಿತು. ಇಲ್ಲಿಂದ ಮುಂದೆ ಅಮೋಘ ರೀತಿಯಲ್ಲಿ ತಿರುಗೇಟು ನೀಡಿದ ಕಸತ್ಕಿನಾ 7-5ರ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು.
ಪೋಲೆಂಡ್‌ನ ಐಗಾ ಸ್ವಿಯಾಟೆಕ್ ಅಮೆರಿಕದ ಜೆಸ್ಸಿಕಾ ಪೆಗುಲಾ ವಿರುದ್ಧ 6-3, 6-2 ಅಂತರದ ಸುಲಭ ಜಯ ಸಾಧಿಸಿ ತಮ್ಮ ಸತತ ಗೆಲುವಿನ ಓಟವನ್ನು 33 ಪಂದ್ಯಗಳಿಗೆ ವಿಸ್ತರಿಸಿದರು.
Related Articles
ಇನ್ನೊಂದು ಪಂದ್ಯ ಗೆದ್ದರೆ ಸೆರೆನಾ ವಿಲಿಯಮ್ಸ್ ಅವರ ಸತತ 34 ಗೆಲುವಿನ ಓಟವನ್ನು ಸರಿದೂಗಿಸಲಿದ್ದಾರೆ. ಸೆರೆನಾ 2013ರ ಮಿಯಾಮಿ ಟೂರ್ನಿ ಹಾಗೂ ವಿಂಬಲ್ಡನ್ ಗ್ರ್ಯಾನ್‌ಸ್ಲಾಮ್ ನಡುವಿನ ಅವಧಿಯಲ್ಲಿ ಈ ಸಾಧನೆಗೈದಿದ್ದರು.