Advertisement

ಪ್ರತಿಪಕ್ಷ ನಾಯಕರಿಗೆ ಸಂಸದೀಯ ಸಮಿತಿಗಳಲ್ಲಿಲ್ಲ ಅಧ್ಯಕ್ಷ ಸ್ಥಾನ!

05:56 PM Oct 05, 2022 | Team Udayavani |

ನವದೆಹಲಿ: ಸಂಸದೀಯ ಸಮಿತಿಗಳಿಗೆ ಮಂಗಳವಾರ ಮೇಜರ್‌ ಸರ್ಜರಿ ನಡೆದಿದೆ. ಆದರೆ, ಯಾವುದೇ ಪ್ರಮುಖ ಸಮಿತಿಯಲ್ಲೂ ಪ್ರತಿಪಕ್ಷಗಳ ನಾಯಕರಿಗೆ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ. ಎರಡನೇ ಅತಿದೊಡ್ಡ ಪ್ರತಿಪಕ್ಷವಾದ ಕಾಂಗ್ರೆಸ್‌ಗೆ ಕೇವಲ ಒಂದು ಸಮಿತಿಯಲ್ಲಿ ಅಧ್ಯಕ್ಷ ಸ್ಥಾನ ದೊರೆತರೆ, ತೃಣಮೂಲ ಕಾಂಗ್ರೆಸ್‌ಗೆ ಒಂದೇ ಒಂದರಲ್ಲೂ ಸ್ಥಾನ ಸಿಕ್ಕಿಲ್ಲ.

Advertisement

ಗೃಹ, ಹಣಕಾಸು, ಐಟಿ, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳಂಥ ಪ್ರಮುಖ ಸಂಸದೀಯ ಸಮಿತಿಗಳಲ್ಲಿ ಕಾಂಗ್ರೆಸ್‌ಗಾಗಲೀ, ಟಿಎಂಸಿಗಾಗಲೀ ಅಧ್ಯಕ್ಷ ಸ್ಥಾನವನ್ನು ನೀಡಿಲ್ಲ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಇದನ್ನು ಕಾಂಗ್ರೆಸ್‌, ಟಿಎಂಸಿ, “ಕ್ರೂರ ನಿರ್ಧಾರ’ ಎಂದು ಟೀಕಿಸಿದೆ.

ಈವರೆಗೆ ಕೇಂದ್ರ ಗೃಹ ವ್ಯವಹಾರಗಳಿಗೆ ಸಂಬಂಧಿಸಿದ ಸ್ಥಾಯಿ ಸಮಿತಿಯ ನೇತೃತ್ವವನ್ನು ಕಾಂಗ್ರೆಸ್‌ ಸಂಸದ ಅಭಿಷೇಕ್‌ ಮನು ಸಿಂಘ್ವಿ ವಹಿಸಿದ್ದರು. ಈಗ ಅವರ ಸ್ಥಾನಕ್ಕೆ ಬಿಜೆಪಿ ಸಂಸದ ಬ್ರಿಜ್‌ ಲಾಲ್‌ರನ್ನು ನೇಮಿಸಲಾಗಿದೆ.

ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಮಿತಿಯ ಅಧ್ಯಕ್ಷ ಸ್ಥಾನದಿಂದ ಕಾಂಗ್ರೆಸ್‌ನ ಶಶಿ ತರೂರ್‌ರನ್ನು ಕೈಬಿಟ್ಟು, ಅವರ ಸ್ಥಾನಕ್ಕೆ ಶಿವಸೇನೆಯ ಶಿಂಧೆ ಬಣದ ಸಂಸದ ಪ್ರತಾಪ್‌ರಾವ್‌ ಜಾಧವ್‌ರನ್ನು ನೇಮಕ ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next