Advertisement

ಕೋವಿಡ್ ನಿಯಂತ್ರಣ ತನಕ ಶಾಲಾರಂಭ ಬೇಡ: ಹೊರಟ್ಟಿ

08:39 AM Jun 12, 2020 | Suhan S |

ಚಿತ್ರದುರ್ಗ : ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಶಾಲೆಗಳನ್ನು ತೆರೆಯಬಾರದು ಎಂದು ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

Advertisement

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದೆ ಶಾಲೆ ತೆರೆದಾಗ ಒಂದು ಶನಿವಾರ ಮಾತ್ರ ರಜೆ ನೀಡಿ, ಉಳಿದಂತೆ ಎಲ್ಲಾ ಶನಿವಾರಗಳಲ್ಲೂ ಇಡೀ ದಿನ ತರಗತಿ ನಡೆಸಲಿ. ಶಾಲಾ ಸಮಯವನ್ನು ಅರ್ಧ ಗಂಟೆ ಹೆಚ್ಚು ಮಾಡಬೇಕು. ದಸರಾ ರಜೆ ರದ್ದುಪಡಿಸಬೇಕು. ಜಯಂತಿ ಮತ್ತಿತರೆ ರಜಾ ದಿನಗಳನ್ನು ರದ್ದು ಮಾಡಿ ಶಾಲೆಗಳನ್ನು ನಡೆಸಬಹುದು ಎಂದು ಸಲಹೆ ನೀಡಿದರು.

ಒಂದರಿಂದ ಪಿಯುವರೆಗೆ ಆನ್‌ಲೈನ್‌ ಶಿಕ್ಷಣ ನೀಡುವುದು ಸಾಧ್ಯವಿಲ್ಲ. ಪ್ರಾಥಮಿಕ ಹಂತದ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಅಪಾಯಕಾರಿ ಎಂದು ಅಭಿಪ್ರಾಯಪಟ್ಟರು. ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳನ್ನು ದುಪ್ಪಟ್ಟು ಮಾಡಿ ಅಂತರ ಕಾಪಾಡಲಿ. ರಾಜ್ಯದಲ್ಲಿ ಶಿಕ್ಷಣ ಸಚಿವರು ಸಾಕಷ್ಟು ಓಡಾಡುತ್ತ ಸಭೆ ಮಾಡುತ್ತಿದ್ದಾರೆ. ಆದರೆ ಶಿಕ್ಷಣ ಇಲಾಖೆ ಮಾತ್ರ ಬೇಜವಾಬ್ದಾರಿ ಹೊಂದಿದೆ. ಶಿಕ್ಷಣ ಇಲಾಖೆಯ ಯಾವ ಅಧಿಕಾರಿಗಳಿಗೂ ಕಳಕಳಿ ಇಲ್ಲ ಎಂದು ದೂರಿದರು.

ನಮ್ಮ ಸಲಹೆ ಕೇಳಿಲ್ಲ: ಅಧಿಕಾರಿಗಳು ಹಾಗೂ ನಮ್ಮಂಥವರನ್ನು ಸೇರಿಸಿ ಸಮಿತಿ ರಚಿಸಬೇಕು. ಆದರೆ ರಾಜ್ಯ ಸರ್ಕಾರ ಇದುವರೆಗೆ ನಮ್ಮ ಸಲಹೆ-ಸೂಚನೆ ಕೇಳಿಲ್ಲ ಎಂದು ಹೊರಟ್ಟಿ ಬೇಸರ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next