Advertisement

ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ; ಇದಕ್ಕೆ ಯಾವುದೇ ಸುರಕ್ಷತೆಯ ಮಿತಿ ಅನ್ವಯಿಸುವುದಿಲ್ಲ!

06:07 PM Jan 11, 2023 | ವಿಷ್ಣುದಾಸ್ ಪಾಟೀಲ್ |

ಆಲ್ಕೋಹಾಲ್ ಸೇವನೆಗೆ ಯಾವುದೇ ಸುರಕ್ಷಿತ ಮಿತಿಯಿಲ್ಲ ಮತ್ತು ಯಾವುದೇ ಪ್ರಮಾಣದ ಮದ್ಯ ಸೇವನೆಯು ಒಬ್ಬರ ಆರೋಗ್ಯದ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಟಿಸಿದ  ದಿ ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್ ಜರ್ನಲ್‌ನಲ್ಲಿ ತಿಳಿಸಿದೆ. ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ ವಿಕಿರಣಗಳ ಜತೆಗೆ ಆಲ್ಕೋಹಾಲ್ ಅನ್ನು ವರ್ಗೀಕರಿಸಿ, ವಿಕಿರಣ ಮತ್ತು ತಂಬಾಕು ಹೆಚ್ಚಿನ ಅಪಾಯದ ಗುಂಪು 1 ಕಾರ್ಸಿನೋಜೆನ್, ಇದು ವಿಶ್ವಾದ್ಯಂತ ಕ್ಯಾನ್ಸರ್ ಗೆ ಕೊಡುಗೆ ನೀಡುತ್ತದೆ ಎಂದು ಹೇಳಿದೆ.

Advertisement

ಕರುಳಿನ ಕ್ಯಾನ್ಸರ್ ಮತ್ತು  ಸ್ತನ ಕ್ಯಾನ್ಸರ್‌ನಂತಹ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಪ್ರಕಾರಗಳನ್ನು ಒಳಗೊಂಡಂತೆ ಕನಿಷ್ಠ ಏಳು ವಿಧದ ಕ್ಯಾನ್ಸರ್‌ಗಳನ್ನು ಆಲ್ಕೋಹಾಲ್ ಉಂಟುಮಾಡುತ್ತದೆ ಎಂದು ಸಂಸ್ಥೆ ಈ ಹಿಂದೆ ಕಂಡುಹಿಡಿದಿದೆ. ಇದು ಅನ್ನನಾಳ, ಯಕೃತ್ತು ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್‌ಗಳೊಂದಿಗೆ ಸಹ ಸಂಬಂಧಿಸಿದೆ ಎಂದು ಹೇಳಿದೆ.

ಆಲ್ಕೋಹಾಲ್ ಜೈವಿಕ ಕಾರ್ಯವಿಧಾನಗಳ ಮೂಲಕ ದೇಹದಲ್ಲಿ ಸಂಯೋಗಗೊಂಡು ಕ್ಯಾನ್ಸರ್ ಅನ್ನು ಉಂಟುಮಾಡುತ್ತದೆ. ಆಲ್ಕೋಹಾಲ್ ಹೊಂದಿರುವ ಯಾವುದೇ ಪಾನೀಯವು ಅದರ ಬೆಲೆ ಮತ್ತು ಗುಣಮಟ್ಟವನ್ನು ಲೆಕ್ಕಿಸದೆ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಉಂಟುಮಾಡುತ್ತದೆ ಎಂದು ಹೇಳಲಾಗಿದೆ.

ಮಧ್ಯಮ ಆಲ್ಕೋಹಾಲ್ ಸೇವನೆ ಯುರೋಪ್ ನಲ್ಲಿ ಕ್ಯಾನ್ಸರ್ ಸಾವುಗಳಿಗೆ ಪ್ರಮುಖ ಕಾರಣವಾಗಿದೆ, ಅಂದರೆ ಪ್ರತಿದಿನ 20 ಗ್ರಾಂಗಿಂತ ಕಡಿಮೆ ಶುದ್ಧ ಆಲ್ಕೋಹಾಲ್ ಸೇವಿಸಿರುವುದು ಅಧ್ಯಯನದಿಂದ ತಿಳಿದುಬಂದಿದೆ. 2017 ರಲ್ಲಿ 23,000 ಹೊಸ ಕ್ಯಾನ್ಸರ್ ಪ್ರಕರಣಗಳಿಗೆ ಕಾರಣವಾಯಿತು, ಇದು ಆಲ್ಕೋಹಾಲ್ ಸಂಬಂಧಿತ ಕ್ಯಾನ್ಸರ್‌ಗಳಲ್ಲಿನ ಅರ್ಧದಷ್ಟಾಗಿದೆ ಮತ್ತು ಇವುಗಳಲ್ಲಿ ಸರಿಸುಮಾರು 50 ಪ್ರತಿಶತ ಸ್ತನ ಕ್ಯಾನ್ಸರ್ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆ ತಿಳಿಸಿದೆ.

“ಪ್ರಸ್ತುತ ಲಭ್ಯವಿರುವ ಪುರಾವೆಗಳು ಆಲ್ಕೋಹಾಲ್ ನ ಕಾರ್ಸಿನೋಜೆನಿಕ್ ಪರಿಣಾಮಗಳು ಮಾನವ ದೇಹದಲ್ಲಿ ಪ್ರಕಟಗೊಳ್ಳಲು ಪ್ರಾರಂಭವಾಗುವ ಮಿತಿಯ ಅಸ್ತಿತ್ವವನ್ನು ಸೂಚಿಸುವುದಿಲ್ಲ. ಅನಾರೋಗ್ಯ ಅಥವಾ ಗಾಯದ ಅಪಾಯವಿಲ್ಲ ಎಂದು ವೈಜ್ಞಾನಿಕ ಪುರಾವೆಗಳಿದ್ದರೆ ಮಾತ್ರ ಆಲ್ಕೊಹಾಲ್ ಸೇವನೆಯ ಸುರಕ್ಷಿತ ಮಟ್ಟವನ್ನು ವ್ಯಾಖ್ಯಾನಿಸಬಹುದು ಎಂದಿದೆ.

Advertisement

ಹೃದಯರಕ್ತನಾಳದ ಕಾಯಿಲೆಗಳು ಮತ್ತು ಟೈಪ್ 2 ಮಧುಮೇಹದ ಮೇಲೆ ಆಲ್ಕೋಹಾಲ್ ನ ಸಂಭಾವ್ಯ ಪ್ರಯೋಜನಗಳು ಕ್ಯಾನ್ಸರ್ ಅಪಾಯವನ್ನು ಮೀರಿಸುತ್ತದೆ ಎಂದು ತೋರಿಸಲು ಯಾವುದೇ ಅಧ್ಯಯನಗಳಿಲ್ಲ. ಆದರೆ ಭಾರೀ ಪ್ರಮಾಣದಲ್ಲಿ ಸೇವನೆಯು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ನಂಬಲು ಪುರಾವೆಗಳಿವೆ ಎಂದಿದೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಯುರೋಪಿಯನ್ ಪ್ರದೇಶವು ಅತಿ ಹೆಚ್ಚು ಆಲ್ಕೋಹಾಲ್ ಸೇವನೆಯ ಪ್ರಮಾಣವನ್ನು ಹೊಂದಿದೆ ಮತ್ತು 200 ಮಿಲಿಯನ್‌ಗಿಂತಲೂ ಹೆಚ್ಚು ಜನರು ಆಲ್ಕೋಹಾಲ್-ಆಟ್ರಿಬ್ಯೂಟ್ ಕ್ಯಾನ್ಸರ್ ಅನ್ನು ಹೊಂದುವ ಅಪಾಯವನ್ನು ಹೊಂದಿದ್ದಾರೆ ಎಂದು ಅಧ್ಯಯನವು ಕಂಡುಹಿಡಿದಿದ್ದು, ಅವರಲ್ಲಿ, ದುರ್ಬಲ ಮತ್ತು ಅನನುಕೂಲಕರ ಜನಸಂಖ್ಯೆಯು ಅವರು ಸೇವಿಸುವ ಮದ್ಯದ ಗುಣಮಟ್ಟದಿಂದಾಗಿ ಹೆಚ್ಚು ಅಪಾಯದಲ್ಲಿದೆ ಎಂದಿದೆ.

“ಆಲ್ಕೋಹಾಲ್ ಕ್ಯಾನ್ಸರ್ ಗೆ ಕಾರಣವಾಗಬಹುದು ಎಂದು ಪೂರ್ಣವಾಗಿ ಸಾಬೀತಾಗಿದ್ದರೂ, ಹೆಚ್ಚಿನ ದೇಶಗಳಲ್ಲಿ ಈ ಅಂಶವು ಇನ್ನೂ ಸಾರ್ವಜನಿಕರಿಗೆ ವ್ಯಾಪಕವಾಗಿ ತಿಳಿದಿಲ್ಲ” ಎಂದು ಯುರೋಪ್‌ ಪ್ರಾದೇಶಿಕ ಕಚೇರಿ ಕಮ್ಯುನಿಕೇಬಲ್ ಡಿಸೀಸ್ ಮ್ಯಾನೇಜ್ಮೆಂಟ್ ನ ಕಾರ್ಯನಿರ್ವಾಹಕ ಘಟಕದ ಮುಖ್ಯಸ್ಥೆ ಮತ್ತು ಆಲ್ಕೋಹಾಲ್ ಮತ್ತು ಅಕ್ರಮ ಔಷಧಿಗಳ ಪ್ರಾದೇಶಿಕ ಸಲಹೆಗಾರ್ತಿ ಕ್ಯಾರಿನಾ ಫೆರೆರಾ ಬೋರ್ಗೆಸ್ ಹೇಳಿದ್ದಾರೆ.

“ನಮಗೆ ತಂಬಾಕು ಉತ್ಪನ್ನಗಳ ಉದಾಹರಣೆಯನ್ನು ಅನುಸರಿಸಿ, ಆಲ್ಕೋಹಾಲ್ ಯುಕ್ತ ಪಾನೀಯಗಳ ಲೇಬಲ್‌ಗಳಲ್ಲಿ ಕ್ಯಾನ್ಸರ್ ಸಂಬಂಧಿತ ಆರೋಗ್ಯ ಮಾಹಿತಿ ಸಂದೇಶಗಳನ್ನು ರವಾನಿಸುವ ಅಗತ್ಯವಿದೆ” ಎಂದು ಫೆರೆರಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next