Advertisement

“ಮರಾಠಾ ಕೋಟಾದಿಂದ ಒಬಿಸಿ ಮೀಸಲಾತಿ ಮೇಲೆ ಪರಿಣಾಮ ಇಲ್ಲ’

04:09 PM Jul 24, 2020 | Suhan S |

ಮುಂಬಯಿ, ಜು. 23: ಉದ್ಯೋಗ ಮತ್ತು ಶಿಕ್ಷಣದಲ್ಲಿನ ಮರಾಠ ಕೋಟಾ ಜಾರಿಯಾದರೆ ಇತರ ಹಿಂದುಳಿದ ವರ್ಗಗಳ ಮೀಸಲಾತಿಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಭರವಸೆ ನೀಡಿದ್ದಾರೆ.

Advertisement

ಈ ಕುರಿತ ಅನುಮಾನಗಳನ್ನು ಪರಿಹರಿಸಲು ಒಬಿಸಿಗಳ ಪ್ರತಿನಿಧಿಗಳು ಮತ್ತು ರಾಜ್ಯದ ಅಡ್ವೊಕೇಟ್‌ ಜನರಲ್‌ ನಡುವೆ ಸಭೆ ಆಯೋಜಿಸಲಾಗುವುದು ಎಂದು ಉದ್ಧವ್‌ ಹೇಳಿದ್ದಾರೆ. ಮುಖ್ಯಮಂತ್ರಿ ಅವರು ಇಲ್ಲಿ ಒಬಿಸಿಗಳ ಪ್ರತಿನಿಧಿಗಳೊಂದಿಗೆ ವೀಡಿಯೋ ಕಾನ ರೆನ್ಸ್‌

ಮೂಲಕ ಸಭೆ ನಡೆಸಿದರು. ಮರಾಠ ಕೋಟಾ ಪ್ರಕರಣವನ್ನು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಈ ಕುರಿತ ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದರೆ ಅದು ತಮ್ಮ ಮೀಸಲಾತಿ ಮೇಲೆ ಪರಿಣಾಮ ಬೀರುತ್ತದೆ ಎಂಬ ಆತಂಕದಿಂದ ಒಬಿಸಿಗಳು ದೂರವಾಗಬೇಕು ಎಂದು ಠಾಕ್ರೆ ಅವರು ಸಭೆಗೆ ತಿಳಿಸಿದರು ಎಂದು ಅಧಿ ಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಈ ಸಂದರ್ಭ ಸಭೆಯಲ್ಲಿ ಸಚಿವ ಅಶೋಕ್‌ ಚವಾಣ್‌, ಛಗನ್‌ ಭುಜ್‌ಬಲ್, ಏಕನಾಥ ಶಿಂಧೆ, ವಿಜಯ್‌ ವಾಡೆಟ್ಟಿವಾರ್‌, ಧನಂಜಯ್‌ ಮುಂಡೆ ಮತ್ತಿತರರು ಭಾಗವಹಿಸಿದ್ದರು.

ಮಹಾರಾಷ್ಟ್ರದ ಮರಾಠ ಸಮುದಾಯಕ್ಕೆ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳ ಪ್ರವೇಶದಲ್ಲಿ ಮೀಸಲಾತಿ ನೀಡಲು ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗಗಳ (ಎಸ್‌ಬಿಸಿ) ಕಾಯಿದೆ, 2018 ಅನ್ನು ಜಾರಿಗೆ ತರಲಾಯಿತು. ಬಾಂಬೆ ಹೈಕೋರ್ಟ್‌ ಕಳೆದ ವರ್ಷದ ಜೂನ್‌ನಲ್ಲಿ ಈ ಕಾಯಿದೆಯನ್ನು ಎತ್ತಿಹಿಡಿಯುವಾಗ, ಶೇ.16ರಷ್ಟು ಮೀಸಲಾತಿ ಸಮರ್ಥನೀಯವಲ್ಲ. ಮೀಸಲಾತಿಯು ಉದ್ಯೋಗದಲ್ಲಿ ಶೇ. 12 ಮತ್ತು ಶೈಕ್ಷಣಿಕ ಪ್ರವೇಶದಲ್ಲಿ ಶೇ.13 ಅನ್ನು ಮೀರಬಾರದು ಎಂದು ಹೇಳಿದೆ. ಅನಂತರ ಈ ಕಾಯಿದೆಯನ್ನು ಸುಪ್ರೀಂ ಕೋರ್ಟ್‌ ಮುಂದೆ ಪ್ರಶ್ನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next