Advertisement
“ಉದಯವಾಣಿ’ ಕಚೇರಿಯಲ್ಲಿ ಸೋಮ ವಾರ ನಡೆದ ಸಂವಾದದಲ್ಲಿ ಈ ವಿಚಾರ ತಿಳಿಸಿದ ಅವರು, ತಾವು ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಕಾಂಗ್ರೆಸ್‌ಗೆ ಗ್ಯಾರಂಟಿ ಯಾಗಿದೆ. ಹೀಗಾಗಿಯೇ “ಗ್ಯಾರಂಟಿ ಕಾರ್ಡ್’ ಕೊಟ್ಟು ಚುನಾವಣೆ ಗೆಲ್ಲುವ ಯತ್ನ ನಡೆಸುತ್ತಿದೆ. ಅವರ ಯಾವುದೇ ಘೋಷಣೆಯ ಜಾರಿ ಸಾಧ್ಯವೇ ಇಲ್ಲ. ಇದರಿಂದ ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಹದೆಗೆಡಲಿದೆ ಎಂದರು.
Related Articles
ಪ್ರಧಾನಿ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ಅವರು ಜಾರಿಗೆ ತಂದಿರುವ ಕಲ್ಯಾಣ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳು ಜನರ ಬಾಯಲ್ಲಿ ಹರಿದಾಡು ತ್ತಿವೆ. ಯಡಿಯೂರಪ್ಪನವರು 2 ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಕೊಟ್ಟ ಯೋಜನೆಗಳನ್ನು ಜನ ಈಗಲೂ ಸ್ಮರಿಸುತ್ತಿದ್ದಾರೆ. ನಿಮಗೆ ತಿಳಿದಿರಲಿ, ನಾವು ಕಳೆದೊಂದು ವರ್ಷದಿಂದ ಚುನಾವಣೆಯ ಅಖಾಡದಲ್ಲಿ ಸಿದ್ಧತೆ ನಡೆಸುತ್ತಿದ್ದೇವೆ. ಪ್ರಧಾನಿ ಮೋದಿಯವರು ಅಭಿವೃದ್ಧಿ ಕಾರ್ಯಗಳ ಅನುಷ್ಠಾನಕ್ಕಾಗಿ ರಾಜ್ಯಕ್ಕೆ ಬಂದರೆ ಕಾಂಗ್ರೆಸ್‌ನವರಿಗೇಕೆ ಆತಂಕ? ಕಾಂಗ್ರೆಸ್ ನವರು ಗಾಂಧಿ ಕುಟುಂಬದವರನ್ನು ಪ್ರಚಾರಕ್ಕೆ ಕರೆಯು ತ್ತಿಲ್ಲವೇ? ಹಾಗಾದರೆ ರಾಹುಲ್ ಗಾಂಧಿ ಏಕೆ ಬೆಳಗಾವಿಗೆ ಬಂದಿದ್ದರು ಎಂದು ಪ್ರಶ್ನಿಸಿದರು.
Advertisement
ಶಿಕಾರಿಪುರ ಘಟನೆ ರಾಜಕೀಯ ಪ್ರೇರಿತಶಿಕಾರಿಪುರದಲ್ಲಿ ಬಿಎಸ್‌ವೈ ನಿವಾಸದ ಮೇಲೆ ದಾಳಿ ನಡೆಸಿರುವುದು ರಾಜಕೀಯ ಪ್ರೇರಿತ ಘಟನೆ. ಇದಕ್ಕೆ ಕಾಂಗ್ರೆಸ್ ನೇರ ಹೊಣೆ ಎಂದು ನಳಿನ್ ಆಕ್ರೋಶ ವ್ಯಕ್ತಪಡಿಸಿದರು. ಎಲ್ಲ ಸಮುದಾಯದವರಿಗೆ ನ್ಯಾಯ ಕೊಡಿಸಬೇಕೆಂಬ ಉದ್ದೇಶದಿಂದ ಸಾಕಷ್ಟು ಅಧ್ಯಯನ ನಡೆಸಿ ಮೀಸಲಾತಿ ನೀಡ ಲಾಗಿದೆ. ಇಂಥ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವಾಗ ಸಾಕಷ್ಟು ಸಮಯ ಬೇಕಾಗು ತ್ತದೆ. ಈಗ ಯಾಕೆ ಮಾಡಿದಿರಿ ಎಂಬುದು ಮುಖ್ಯವಲ್ಲ. ನಾವು ಈ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದೇವೆ. ಸದಾಶಿವ ಆಯೋಗದ ವರದಿ ಮಂಡನೆ ಯಾಗಿದ್ದರೂ ಕಾಂಗ್ರೆಸ್ ಏಕೆ ಇಷ್ಟು ವರ್ಷಗಳ ಕಾಲ ಒಳಮೀಸಲು ನಿರ್ಧಾರ ತೆಗೆದುಕೊಂಡಿರಲಿಲ್ಲ ಎಂದು ಪ್ರಶ್ನಿಸಿದರು. ಶಿಕಾರಿಪುರದಲ್ಲಿ ನಡೆದ ಘಟನೆಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆಯೇ ನೇರ ಕಾರಣ. ಕಾಂಗ್ರೆಸ್ ಮುಖಂಡರ ಪ್ರಚೋ ದನೆ ಯಿಂದಲೇ ಈ ಘಟನೆ ನಡೆದಿದೆ ಎಂದು ಆರೋಪಿಸಿದರು. ಹಳೇ ಮೈಸೂರು ಭಾಗದಲ್ಲಿ ಹೆಚ್ಚಿದೆ ಬಲ
ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಕಳೆದ ವರ್ಷಕ್ಕಿಂತ ಹೆಚ್ಚಿನ ಸಾಧನೆ ಮಾಡಲಿದೆ. ಇಲ್ಲಿ ಪಕ್ಷದ ಬಲ ಇನ್ನಷ್ಟು ಹೆಚ್ಚಲಿದೆ ಎಂದು ನಳಿನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಮ್ಮ ರಾಷ್ಟ್ರೀಯ ನಾಯಕರಾದ ಅಮಿತ್ ಶಾ ಹಲವು ಬಾರಿ ಹಳೆ ಮೈಸೂರು ಭಾಗದಲ್ಲಿ ಪಕ್ಷ ಬಲಪಡಿಸುವುದಕ್ಕೆ ಸೂಚನೆ ನೀಡಿದ್ದರು. ಅದರಂತೆ ನಾವು ಸಾಕಷ್ಟು ಪ್ರಯತ್ನ ನಡೆಸಿದ್ದೇವೆ ಎಂದರು. ಈ ಭಾಗದಲ್ಲಿ ನಮ್ಮ ಗುರಿ ದೊಡ್ಡದು. ಈ ಬಾರಿ ಗುರಿ ತಲುಪದೇ ಇದ್ದರೂ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನ ಗಳಿಸುತ್ತೇವೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಅಭಿಪ್ರಾಯಪಟ್ಟರು. ಮಾದರಿ ನಿರ್ಧಾರವಾಗುವುದು
ಸಂಸದೀಯ ಮಂಡಳಿಯಲ್ಲಿ
ರಾಜ್ಯದಲ್ಲಿ ಟಿಕೆಟ್ ಹಂಚಿಕೆಗೆ ಯಾವ ಮಾದರಿ ಅನುಸರಿಸುತ್ತೇವೆ ಎಂಬುದು ನಿರ್ಧಾರವಾಗುವುದು ಸಂಸದೀಯ ಮಂಡಳಿ ಸಭೆಯಲ್ಲೇ ಹೊರತು ಇಲ್ಲಲ್ಲ ಎಂದು ನಳಿನ್‌ಕುಮಾರ್ ಕಟೀಲು ಸ್ಪಷ್ಟಪಡಿಸಿದ್ದಾರೆ. ಈ ಕ್ಷಣಕ್ಕೆ ಹೇಳುವುದಾದರೆ ನಮ್ಮ ಮುಂದೆ ಯಾವುದೇ ಮಾದರಿಯ ಬಗ್ಗೆ ಚರ್ಚೆ ಆಗುತ್ತಿಲ್ಲ. ಅದೆಲ್ಲವೂ ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧಾರವಾಗುವ ಸಂಗತಿಗಳು. ವಯಸ್ಸು, ಅವಧಿ, ಹೊಸಮುಖಗಳು ಇತ್ಯಾದಿ ವಿಚಾರಗಳ ಬಗ್ಗೆ ಅಲ್ಲಿಯೇ ನಿರ್ಧಾರವಾಗುತ್ತದೆ. ಗುಜರಾತ್ ಮಾದರಿ ಬಗ್ಗೆ ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ. ಆದರೆ ಚುನಾವಣೆ ಅಧಿಸೂಚನೆ ಪ್ರಕಟವಾದ ಬಳಿಕವೇ ನಮ್ಮ ಪಕ್ಷದಲ್ಲಿ ಟಿಕೆಟ್ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಎಲ್ಲ ರಾಜ್ಯಗಳಲ್ಲೂ ನಾವು ಇದೇ ನಿಯಮ ಪಾಲನೆ ಮಾಡಿದ್ದೇವೆ ಎಂದು ಹೇಳಿದರು.